ದೆಹಲಿ ಅಬಕಾರಿ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರುವಾರ ರಾತ್ರಿ (ಮಾ.21)ರಂದು ಇಡಿ ಬಂಧಿಸಿತ್ತು. ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಅವರನ್ನು ಇಡಿ ತನ್ನ ಕಸ್ಟಡಿಯಲ್ಲಿ ಇರಿಸಿಕೊಂಡಿದೆ. 2 ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಕೇಜ್ರಿವಾಲ್ ಅವರು ಕುಟುಂಬ ಹಾಗೂ ಅವರ ವೈಯಕ್ತಿಕ ಜೀವನ ಹೇಗಿದೆ? ಅವರು ನಡೆದು ಬಂದ ಹಾದಿ ಹೇಗಿತ್ತು? ಎಂಬುದು ಇಲ್ಲಿದೆ ನೋಡಿ.
ಕೇಜ್ರಿವಾಲ್ ಅವರ ದಾಂಪತ್ಯ ಜೀವನ ತುಂಬಾ ಆಸಕ್ತಿದಾಯಕವಾಗಿದೆ. ಅವರದ್ದು ಪ್ರೇಮ ವಿವಾಹ. ಈ ಪ್ರೇಮದ ಸಂಕೇತವಾಗಿ ಕೇಜ್ರಿವಾಲ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ತಂದೆಯಂತೆ ಮಕ್ಕಳು ಕೂಡ ಬುದ್ಧಿವಂತರು ಹಾಗೂ ದೇಶದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾದ ಐಐಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು 28 ಡಿಸೆಂಬರ್ 2013ರಂದು ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅವರು ಕೇಂದ್ರಾಡಳಿತ ಪ್ರದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ಪ್ರಶಂಸೆಯನ್ನು ಪಡೆದರು.
ಕೇವಲ 49 ದಿನಗಳ ಕಾಲ ಅಧಿಕಾರದಲ್ಲಿದ್ದ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಮತ್ತೆ 14 ಫೆಬ್ರವರಿ 2015 ರಂದು ಎರಡನೇ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾದರು. 16 ಫೆಬ್ರವರಿ 2020ರಂದು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೇಜ್ರಿವಾಲ್ ಅವರು ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಪದವಿ ಪಡೆದುಕೊಂಡಿದ್ದಾರೆ ಅವರ ತಂದೆ ಗೋವಿಂದ್ ರಾಮ್ ಕೇಜ್ರಿವಾಲ್ ಕೂಡ ಇಂಜಿನಿಯರ್ ಆಗಿದ್ದರು.
ರಾಜಕೀಯಕ್ಕೆ ಬರುವ ಮೊದಲು, ಕೇಜ್ರಿವಾಲ್ ಸರ್ಕಾರಿ ಸೇವೆಯನ್ನು ಸಲ್ಲಿಸುತ್ತಿದ್ದರು. ದೀರ್ಘಕಾಲದವರೆಗೆ ಸಾಮಾಜಿಕ ಕ್ಷೇತ್ರದಲ್ಲಿ ಕೇಜ್ರಿವಾಲ್ ಕೆಲಸ ಮಾಡಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಅವರು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್), ಸಾಮಾಜಿಕ ಕಾರ್ಯಗಳು, ಸಮಾಜ ಕಲ್ಯಾಣ ಯೋಜನೆಗಳು, ಆದಾಯ ತೆರಿಗೆ ಸಮಸ್ಯೆ ಹೀಗೆ ಅನೇಕ ನಾಗರಿಕರ ಕುಂದುಕೊರತೆಗಳನ್ನು ಪರಿಹರಿಸಲು “ಪರಿವರ್ತನ್” ಎಂಬ ಎನ್‌ಜಿಒನ್ನು ಸ್ಥಾಪಿಸಿದ್ದಾರೆ.
2006 ರಲ್ಲಿ ಸರ್ಕಾರಿ ಕೆಲಸವನ್ನು (ಆದಾಯ ತೆರಿಗೆ ಇಲಾಖೆ) ತೊರೆದರು ಮತ್ತು ಅದೇ ವರ್ಷದಲ್ಲಿ ಅವರು ಸಾರ್ವಜನಿಕ ಕಾರಣ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಈ ಮೂಲಕ ಮಾಹಿತಿ ಹಕ್ಕು (ಆರ್‌ಟಿಐ) ಮತ್ತು ಜನಲೋಕಪಾಲ ಆಂದೋಲನದಲ್ಲಿ ಹೆಸರುವಾಸಿಯಾದದರು. ಹರಿಯಾಣದ ಹಿಸಾರ್ ಮತ್ತು ಸೋನಿಪತ್‌ನಿಂದ ಶಾಲಾ ಶಿಕ್ಷಣ ಅವರು 1985 ರಲ್ಲಿ ಐಐಟಿ ಜೆಇಇ ಪರೀಕ್ಷೆಯನ್ನು ಬರೆದು, ದೇಶದಲ್ಲಿ 563 ನೇ ರ್ಯಾಂಕ್ ಪಡೆದರು. ಐಐಟಿ ಖರಗ್‌ಪುರದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿ, 1989 ರಲ್ಲಿ ಬಿ.ಟೆಕ್ ಪದವಿ ಪಡೆದರು. 1989 ರಲ್ಲಿ ಜೆಮ್ಶೆಡ್ಪುರದ ಟಾಟಾ ಸ್ಟೀಲ್ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಇದರ ಜತೆಗೆ ಸಿವಿಲ್ ಸರ್ವೀಸಸ್ ಪರೀಕ್ಷೆ ಸಿದ್ಧತೆಗಳನ್ನು ಕೂಡ ಮಾಡಿಕೊಂಡಿದರು.
1993 ರಲ್ಲಿ ಅವರು ಭಾರತೀಯ ಕಂದಾಯ ಸೇವೆಗೆ (IRS) ಆಯ್ಕೆ ಕೇಜ್ರಿವಾಲ್, ಕೇಜ್ರಿವಾಲ್ ಭಾರತೀಯ ಆಡಳಿತ ಸೇವೆಗೆ (IAS) ಸೇರಲು ನಿರ್ಧರಿಸಿದರು. ಎರಡನೇ ಬಾರಿಗೆ ಮತ್ತೊಮ್ಮೆ ಪರೀಕ್ಷೆ ಬರೆದರು. ಅಲ್ಲಿಯೂ ಕೂಡ ಅವರಿಗೆ ಭಾರತೀಯ ಕಂದಾಯದಲ್ಲಿಯೇ ಕೆಲಸ ಸಿಕ್ಕಿದೆ. 1995 ರಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿದ್ದರು. ಭಾರತೀಯ ಕಂದಾಯ ಸೇವೆಯ ಅಧಿಕಾರಿಯಾಗಿರುವ ಕೇಜ್ರಿವಾಲ್ ಅವರು ತರಬೇತಿಗಾಗಿ ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ಸೇರಿಕೊಳ್ಳುತ್ತಾರೆ.
ಇದನ್ನೂ ಓದಿ: ಕೇಜ್ರಿವಾಲ್ ರಾಜೀನಾಮೆ ನೀಡದಿದ್ದರೆ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಬಹುದೇ?
ಅಲ್ಲಿ ಸುನೀತಾ ಅವರನ್ನು ಭೇಟಿಯಾಗುತ್ತಾರೆ. ಅವರು ಕೂಡ ಭಾರತೀಯ ಕಂದಾಯ ಸೇವೆಗೆ ಆಯ್ಕೆಯಾದರು. ನಾಗ್ಪುರದ ನ್ಯಾಶನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಲ್ಲಿ 62 ವಾರಗಳ ತರಬೇತಿಯಲ್ಲಿ ಇಬ್ಬರಿಗೂ ಸ್ನೇಹ ಬೆಳೆಯುತ್ತದೆ. ಈ ಸ್ನೇಹ ಪ್ರೀತಿಗೆ ತಿರುಗುತ್ತದೆ. ಆದರೆ ಇಬ್ಬರು ಕೂಡ ಪ್ರೀತಿಯನ್ನು ಹೇಳಿಕೊಳ್ಳುವುದಿಲ್ಲ. ಈ ಬಗ್ಗೆ ಅನೇಕ ಸಂದರ್ಶನದಲ್ಲಿ ಕೇಜ್ರಿವಾಲ್ ಅವರು ಕೂಡ ಹೇಳಿಕೊಂಡಿದ್ದಾರೆ. ಕೇಜ್ರಿವಾಲ್ ಅವರು ಒಂದು ದಿನ ನಾನು ಅಕಾಡೆಮಿಯಲ್ಲಿ ಸುನೀತಾಳ ಅವರ ರೂಮಿನ ಬಾಗಿಲು ತಟ್ಟಿ ಮದುವೆ ಬಗ್ಗೆ ಪ್ರಸ್ತಾಪಿಸಿದೆ. ಸುನೀತಾ ಕೂಡ ನನ್ನನ್ನು ಪ್ರೀತಿಸುತ್ತಿದ್ದಳು ಆ ಕಾರಣ ಮದುವೆ ಬಗ್ಗೆ ಪ್ರಸ್ತಾಪಿಸಿದ ತಕ್ಷಣ ಓಕೆ ಎಂದಿದ್ದಾರೆ. ನಂತರ, ಎರಡೂ ಕುಟುಂಬಗಳ ಪರಸ್ಪರ ಒಪ್ಪಿಗೆಯ ನಂತರ, ಆಗಸ್ಟ್ 1994 ರಲ್ಲಿ ನಿಶ್ಚಿತಾರ್ಥವು ನಡೆಯಿತು.
ನಂತರ ನವದೆಹಲಿಯಲ್ಲಿ ಅವರ ಮೊದಲ ಪೋಸ್ಟಿಂಗ್ ಆಗಿತ್ತು. ಅದೇ ವರ್ಷ ನವೆಂಬರ್‌ನಲ್ಲಿ ವಿವಾಹವಾದರು.ಮದುವೆಯ ನಂತರ, ಕೇಜ್ರಿವಾಲ್ ಮತ್ತು ಸುನೀತಾ ಅವರು ಮೊದಲು ದೆಹಲಿಯ ಕಲ್ಕಾಜಿಯಲ್ಲಿರುವ ಸರ್ಕಾರಿ ಫ್ಲಾಟ್‌ನಲ್ಲಿ ವಾಸವಾಗಿದ್ದರು. ಅಲ್ಲಿಂದ ಅವರು ಇಬ್ಬರು ಕೂಡ ವೃತ್ತಿ ಜೀವನ ಹಾಗೂ ದಾಂಪತ್ಯ ಜೀವನವನ್ನು ಆರಂಭಿಸಿದರು.
ಮದುವೆಯಾದ ಸುಮಾರು ಒಂದು ವರ್ಷದ ನಂತರ ಸುನೀತಾ ಹೆಣ್ಣು ಮಗುವಿಗೆ ತಾಯಿಯಾಗುತ್ತಾರೆ. ಮಗಳ ಹೆಸರು ಹರ್ಷಿತಾ. ಮಗಳು ಹರ್ಷಿತಾ ಕೂಡ ತಂದೆಯ ಹಾದಿಯಲ್ಲೇ ಐಐಟಿ ಪದವಿಯನ್ನು ಮಾಡುತ್ತಾರೆ. ಹರ್ಷಿತಾ 2014 ರಲ್ಲಿ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ 3,322 ರ್ಯಾಂಕ್ ಗಳಿಸಿದ್ದರು. ದೆಹಲಿಯ ಐಐಟಿಯಲ್ಲಿ ಪ್ರವೇಶ ಪಡೆದರು. ತಂದೆ ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿದ್ದಾಗ ಅವರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ.
ತಂದೆ ಅರವಿಂದ್ ಕೇಜ್ರಿವಾಲ್ ಮತ್ತು ಅಕ್ಕ ಹರ್ಷಿತಾ ಕೇಜ್ರಿವಾಲ್ ಅವರಂತೆ ಪುಲ್ಕಿತ್ ಕೇಜ್ರಿವಾಲ್ ಕೂಡ ಬುದ್ಧವಂತ ಹುಡುಗ, ಇವರು ಅರವಿಂದ್ ಕೇಜ್ರಿವಾಲ್ ಅವರ ಎರಡನೇ ಮಗ, 2019 ರಲ್ಲಿ, ಅವರು CBSE 12 ನೇ ಬೋರ್ಡ್ ಪರೀಕ್ಷೆಯಲ್ಲಿ 96.4 ಶೇಕಡಾ ಅಂಕಗಳನ್ನು ಪಡೆದರು. ನಂತರ ಐಐಟಿ ದೆಹಲಿಯಲ್ಲಿ ಪ್ರವೇಶವನ್ನೂ ಪಡೆದರು. ಮುಖ್ಯಮಂತ್ರಿ ಕೇಜ್ರಿವಾಲ್ ತಮ್ಮ ಮಗನ ಐಐಟಿ ಪ್ರವೇಶದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದರು. ಕೇಜ್ರಿವಾಲ್ ದಂಪತಿಯ ಮಕ್ಕಳಿಬ್ಬರೂ ಈಗ ಐಐಟಿಯಲ್ಲಿ ಪದವೀಧರರಾಗಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ