ದೆಹಲಿ: ಭಾರತದಲ್ಲಿ ಕೊರೊನಾ ಲಸಿಕೆ ಕುರಿತು ವಿವಾದಗಳು ಎದ್ದಿರುವ ಬೆನ್ನಲ್ಲೇ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತೆಯೊಬ್ಬರು ಕೊವ್ಯಾಕ್ಸಿನ್ ಲಸಿಕೆ ಪಡೆದಿದ್ದಾರೆ. ಭಾರತದಲ್ಲಿ ಲಸಿಕೆ ಪಡೆದ ಮೊದಲ ಪತ್ರಕರ್ತೆ ಎಂಬ ಹೆಗ್ಗಳಿಕೆಗೆ ಭಾಜನರಾಗಿರುವ ಪೂಜಾ ಮಕ್ಕರ್ ಕೊರೊನಾ ಲಸಿಕೆ ಪಡೆದ ನಂತರ ಯಾವುದೇ ಸಮಸ್ಯೆಯಾಗಿಲ್ಲ. ವದಂತಿಗಳಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ಸಿಗುತ್ತಿರುವಂತೆಯೇ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಆದರೆ, ಅದೆಲ್ಲವಕ್ಕೂ ಲಸಿಕೆ ಪಡೆಯುವ ಮೂಲಕ ಉತ್ತರ ನೀಡಿರುವ ಪೂಜಾ ಮಕ್ಕರ್, ಲಸಿಕೆ ತೆಗೆದುಕೊಂಡು 20 ಗಂಟೆಗಳಾದರೂ ಸಮಸ್ಯೆ ಉಂಟಾಗಿಲ್ಲ. ನಾನು ಸಂಪೂರ್ಣ ಕ್ಷೇಮವಾಗಿದ್ದೇನೆ. ಲಸಿಕೆ ಹಾಗೂ ಸರ್ಕಾರದ ಮೇಲೆ ಭರವಸೆ ಇಟ್ಟು ಮುಂದೆ ಬನ್ನಿ ಎಂದು ಕರೆ ನಿಡಿದ್ದಾರೆ.
ದೆಹಲಿಯ AIIMS ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ಕೊರೊನಾ ಲಸಿಕೆ ಸ್ವೀಕರಿಸಿದ್ದ ಪೂಜಾ ಮಕ್ಕರ್ ಕೊವಿಡ್ ಆರಂಭವಾದಾಗಿನಿಂದ ತನ್ನ ಸುದ್ದಿ ವಾಹಿನಿಗಾಗಿ ಕೊರೊನಾ ವೈರಾಣು ಕುರಿತು ನಿರಂತರ ವರದಿ ಮಾಡಿದ್ದರು. ಇದೀಗ ಹತ್ತು ಹಲವು ವದಂತಿಗಳ ನಡುವೆಯೂ ಕೊವ್ಯಾಕ್ಸಿನ್ ಲಸಿಕೆ ಸ್ವೀಕರಿಸಿರುವ ಪೂಜಾ, ಲಸಿಕೆ ಕುರಿತು ಸಂದೇಹ ಬೇಡ ಎಂದಿದ್ದಾರೆ.
ವುಹಾನ್ನಿಂದ ಕೊರೊನಾ ಸ್ಥಿತಿಗತಿ ವರದಿ ಮಾಡಿದ್ದ ಚೀನಾ ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ