Jalgaon Road Accident | ಜಲ್‌ಗಾಂವ್ ಬಳಿ ವಾಹನ ಪಲ್ಟಿಯಾಗಿ 16 ಜನರ ಸಾವು, ಐವರಿಗೆ ಗಾಯ

ವಾಹನ ಪಲ್ಟಿಯಾಗಿ 16 ಜನ ಮೃತಪಟ್ಟಿದ್ದು ಐವರಿಗೆ ಗಾಯಗಳಾಗಿರುವ ಭೀಕರ ಅಪಘಾತ ಮಹಾರಾಷ್ಟ್ರದ ಜಲ್‌ಗಾಂವ್ ಜಿಲ್ಲೆಯ ಕಿಂಗಾಂವ್ ಗ್ರಾಮದ ಬಳಿ ಸಂಭವಿಸಿದೆ.

Jalgaon Road Accident | ಜಲ್‌ಗಾಂವ್ ಬಳಿ ವಾಹನ ಪಲ್ಟಿಯಾಗಿ 16 ಜನರ ಸಾವು, ಐವರಿಗೆ ಗಾಯ
ಜಲ್‌ಗಾಂವ್ ಬಳಿ ವಾಹನ ಪಲ್ಟಿಯಾಗಿ 16 ಜನ ಮೃತಪಟ್ಟಿದ್ದಾರೆ.

Updated on: Feb 15, 2021 | 11:23 AM

ವಾಹನ ಪಲ್ಟಿಯಾಗಿ 16 ಜನ ಮೃತಪಟ್ಟಿದ್ದು ಐವರಿಗೆ ಗಾಯಗಳಾಗಿರುವ ಭೀಕರ ಅಪಘಾತ ಭಾನುವಾರ ಮಹಾರಾಷ್ಟ್ರದ ಜಲ್‌ಗಾಂವ್ ಜಿಲ್ಲೆಯ ಕಿಂಗಾಂವ್ ಗ್ರಾಮದ ಬಳಿ ಸಂಭವಿಸಿದೆ. ಈ ಅಪಘಾತ ಕಿಂಗಾಂವ್ ಗ್ರಾಮದ ಬಳಿಯ ದೇವಾಲಯದ ಮುಂದೆ ನಿನ್ನೆ ತಡ ರಾತ್ರಿ ಸಂಭವಿಸಿದ್ದು ಪಪಾಯ ತುಂಬಿದ ಲಾರಿ ಪಲ್ಟಿಯಾಗಿದೆ.

ಮೃತಪಟ್ಟವರೆಲ್ಲರೂ ಜಿಲ್ಲೆಯ ಅಭೋದಾ, ಕೆರ್ಹಾಲಾ ಮತ್ತು ರಾವರ್‌ನ ಕಾರ್ಮಿಕರು ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇವರಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಗ್ರಾಮೀಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಅಪಘಾತಕ್ಕೆ ಸಂತಾಪ ಸೂಚಿಸಿದ್ದಾರೆ. ಜಲ್‌ಗಾಂವ್ ಬಳಿ ಹೃದಯ ವಿದ್ರಾವಕ ಘಟನೆಯೊಂದು ಸಂಭವಿಸಿದ್ದು ಮೃತ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ. ಹಾಗೂ ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಲ್‌ಗಾಂವ್ ಬಳಿ ವಾಹನ ಪಲ್ಟಿಯಾಗಿ 16 ಜನ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Raj Kundra Audi Car: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಸೇರಿದ ಕಾರು ಹಿಟ್ ಅಂಡ್​ ರನ್ ಅಪಘಾತಕ್ಕೆ ತುತ್ತು

Published On - 8:46 am, Mon, 15 February 21