ದೆಹಲಿ: ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ರಮಣ್ ಸಿಂಗ್ ಮತ್ತು ಪಕ್ಷದ ವಕ್ತಾರ ಸಂಬಿತ್ ಪಾತ್ರಾ ವಿರುದ್ಧ ಛತ್ತೀಸ್ಗಡ್ನಲ್ಲಿ ಎಫ್ಐಆರ್ ದಾಖಲಾಗಿದೆ. ಎಐಸಿಸಿ ರಿಸರ್ಚ್ ಡಿಪಾರ್ಟ್ಮೆಂಟ್ನ ಲೆಟರ್ಹೆಡ್ನ್ನು ಫೋರ್ಜರಿ ಮಾಡಿ, ಅದರಲ್ಲಿ ಸುಳ್ಳು, ಕಲ್ಪಿತ ವಿಷಯ ಪ್ರಿಂಟ್ ಮಾಡಿರುವ ಆರೋಪದಡಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರಿಬ್ಬರಿಗೂ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ ಎಂದು ರಾಯಪುರ ಸಿವಿಲ್ ಲೈನ್ಸ್ ಪೊಲೀಸ್ ಎಸ್ಎಚ್ಒ ಆರ್ಕೆ ಮಿಶ್ರಾ ತಿಳಿಸಿದ್ದಾರೆ.
ಛತ್ತೀಸಗಡ್ ಪ್ರದೇಶ ಕಾಂಗ್ರೆಸ್ ಎನ್ಎಸ್ಯುಐ ಅಧ್ಯಕ್ಷ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲು ಮಾಡಲಾಗಿದೆ. ಇಲ್ಲಿಗೆ ಬಂದು ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವಂತೆ ಸಂಬಿತ್ ಪಾತ್ರ ಅವರಿಗೆ ಸೂಚಿಸಲಾಗಿದೆ ಎಂದು ಮಿಶ್ರಾ ಮಾಹಿತಿ ನೀಡಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಕೂಡ ದೆಹಲಿ ಪೊಲೀಸರಿಗೆ ಕಾಂಗ್ರೆಸ್ ದೂರು ನೀಡಿದೆ.
ಭಾರತದಲ್ಲಿ ಪತ್ತೆಯಾದ ರೂಪಾಂತರಿ ಕೊರೊನಾ ವೈರಸ್ನ್ನು ಇಂಡಿಯಾ ಸ್ಟ್ರೈನ್, ಮೋದಿ ಸ್ಟ್ರೈನ್ ಎಂದು ಕರೆಯುವ ಮೂಲಕ ಕಾಂಗ್ರೆಸ್ ಕೇಂದ್ರ ಸರ್ಕಾರಕ್ಕೆ ಕಳಂಕ ತರಲು ಪ್ರಯತ್ನಿಸುತ್ತಿದೆ ಎಂಬುದು ಬಿಜೆಪಿ ಆರೋಪ ಮಾಡಿತ್ತು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಟೂಲ್ಕಿಟ್ ತಯಾರಿಸಿದೆ ಎಂದೂ ಹೇಳಿತ್ತು. ಆದರೆ ಆರೋಪವನ್ನು ಅಲ್ಲಗಳೆದಿದ್ದ ಕಾಂಗ್ರೆಸ್, ಇದು ಫೇಕ್ ಟೂಲ್ಕಿಟ್ ಎಂದು ಹೇಳಿದ್ದಲ್ಲದೆ ಪೊಲೀಸರಿಗೆ ದೂರು ಕೂಡ ನೀಡಿದೆ. ಕಾಂಗ್ರೆಸ್ ಟೂಲ್ಕಿಟ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಆರೋಪ ಮಾಡಿದ ಬಿಜೆಪಿ ನಾಯಕರೆಲ್ಲರ ವಿರುದ್ಧವೂ ಕಾಂಗ್ರೆಸ್ ದೂರು ನೀಡಿದೆ.
ಇದನ್ನೂ ಓದಿ: Fact Check: ಕಾಂಗ್ರೆಸ್ ಟೂಲ್ಕಿಟ್ ಎಂದು ವೈರಲ್ ಆದ ದಾಖಲೆ ಕಾಂಗ್ರೆಸ್ ಪಕ್ಷದ ನಕಲಿ ಲೆಟರ್ಹೆಡ್ ಬಳಸಿ ಮಾಡಿದ್ದು
ಮಾನವೀಯತೆ ಮೆರೆದ ಯುವ ಕಾಂಗ್ರೆಸ್ ಕಾರ್ಯಕರ್ತರು; ಮೊಬೈಲ್ ಕಳುವಾಗಿದೆ ಎಂದು ಪತ್ರ ಬರೆದ ಕೊಡಗು ಬಾಲಕಿಗೆ ಹೊಸ ಫೋನ್!
ಮೇಘನಾ ರಾಜ್ - ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರುಗೆ ಹೆಜ್ಜೆ ಹೆಜ್ಜೆಗೂ ಪ್ರೀತಿ ತೋರಿಸುತ್ತಿರುವ ಫ್ಯಾನ್ಸ್
Published On - 6:17 pm, Sun, 23 May 21