ಆಕೆ ಚೊಚ್ಚಲ ಗರ್ಭಿಣಿ.. ಕರುಳ ಬಳ್ಳಿಯ ಬಗ್ಗೆ ನೂರಾರರು ಕನಸು.. ತನ್ನ ಹೊಟ್ಟೆಯೊಳಗೆ ಇರುವ ಮುದ್ದು ಕಂದನಿಗೆ ಈಗಲಿಂದಲೇ ಒಳ್ಳೆ ಆಹಾರ ನೀಡಬೇಕು ಅನ್ನೋ ಆಸೆ.. ಅದಕ್ಕಾಗಿ ಆಕೆ ಆಹಾರವರನ್ನ ಅರಿಸಿ ಆ ಊರಿಗೆ ಹೋಗಿದ್ಲು.. ಅಲ್ಲಿ ತಿನ್ನೋಕೆ ಆಹಾರವು ಸಿಕ್ಕಿತ್ತು. ನಂತರ ಅಲ್ಲಿ ಆಗಿದ್ದು ಮನುಷ್ಯತ್ವದ ಕೊಲೆ!
ಆನೆ.. ಪ್ರತಿಯೊಬ್ಬರ ಅಚ್ಚು ಮೆಚ್ಚಿನ ಪ್ರಾಣಿ. ಈ ಮುಗ್ಧ ಮನಸಿನ ಪ್ರಾಣಿಯ ಕರುಳು ಹಿಂಡುವ.. ಮನುಷ್ಯತ್ವದ ಕಗ್ಗೊಲೆಯಾದ.. ಮಾನವನ ನೀಚ.. ಪರಮ ನೀಚ ಬುದ್ಧಿಗೆ ಬಲಿಯಾದ ಒಂದು ಆನೆಯ ಕಥೆ ಹೇಳುತ್ತೇವೆ ಕೇಳಿ.
ಅನಾನಸ್ ಹಣ್ಣಿನಲ್ಲಿ ಪಟಾಕಿ ಇಟ್ಟು ಮಾನವೀಯತೆಗೆ ಕೊಳ್ಳಿ ಇಟ್ಟ ಜನ!
ನಿಜ.. ಮಾನವ ಕುಲ ತಲೆ ತಗ್ಗಿಸೋ ಘಟನೆಗೆ ದೇವರ ನಾಡು ಅನ್ನೋ ಪಟ್ಟ ಕಟ್ಟಿಕೊಂಡ ಕೇರಳ ಸಾಕ್ಷಿಯಾಗಿದೆ. ಕೇರಳದ ಪಾಲಕ್ಕಾಡ್ನಲ್ಲಿ ಗರ್ಭಿಣಿ ಕಾಡಾನೆಯೊಂದನ್ನು ಭೀಕರವಾಗಿ ಕೊಲ್ಲಲಾಗಿದೆ. ಹೌದು.. ಆಹಾರ ಅರಸಿ ಕಾಡಿನಿಂದ ಪಾಲಕ್ಕಾಡ್ ಜಿಲ್ಲೆಯ ಗ್ರಾಮವೊಂದಕ್ಕೆ ಗರ್ಭಿಣಿ ಕಾಡಾನೆ ಒಂದು ಬಂದಿದೆ. ಚೊಚ್ಚಲ ಗರ್ಭಿಣಿ ಬೇರೆ.. ತನ್ನ ಹೊಟ್ಟೆಯಲ್ಲಿ ಬೆಳೆಯತ್ತಿರುವ ಮರಿಯನ್ನ ಚೆನ್ನಾಗಿ ಸಾಕ ಬೇಕು ಅನ್ನೋ ಆಸೆ.
ಅದಕ್ಕಾಗಿ ಆಹಾರ ಹುಡುಕಿ ಆ ಗ್ರಾಮಕ್ಕೆ ಬಂದಿತ್ತು. ಊರೆಲ್ಲಾ ಆಹಾರ ಹುಡುಕಿದ ಆನೆಗೆ. ಕಣ್ಣಿಗೆ ಆಹಾರ ಕೂಡ ಬಿದ್ದಿತ್ತು. ಅದೇ ಅನಾನಸ್ ಹಣ್ಣು. ಅದನ್ನ ಕಂಡ ಕೂಡಲೇ ಆ ಆನೆಗೆ ಖುಷಿ ಉಕ್ಕಿ ಹರಿದಿತ್ತು. ಅಬ್ಬಾ ಸದ್ಯಕ್ಕೆ ಇಷ್ಟಾದ್ರೂ ಸಿಕ್ಕಿತಲ್ಲಾ ಅಂತ ಅನಾನಸ್ ಹಣ್ಣನ್ನ ಸೊಂಡಿಲ ಮೂಲಕ ತೆೆಗೆದು ಬಾಯಿಗೆ ಹಾಕಿದೆ. ಬಾಯಿಗೆ ಹಾಕುತ್ತಿದ್ದಂತೆ ಅನಾನಸ್ ಸ್ಫೋಟವಾಗಿದೆ. ಸ್ಫೋಟದ ತೀವ್ರತೆಗೆ ಬಾಯಿ, ನಾಲಿಗೆ ತೀವ್ರತರವಾದ ಗಾಯವಾಗಿದೆ. ಪಾಪಿಗಳು ಅನಾನಸ್ ಹಣ್ಣಿನಲ್ಲಿ ಪಟಾಕಿ ಇಟ್ಟಿದ್ದರಿಂದ ಅದು ಸ್ಫೋಟವಾಗಿದೆ.
ಈ ವಿಷಯ ಅರಣ್ಯಾಧಿಕಾರಿಗಳಿಗೆ ತಿಳಿದಿತ್ತು. ಆದರೆ, ಆನೆಯನ್ನು ಉಳಿಸುವ ಸಾಕಷ್ಟು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ. ಎರಡು ಆನೆಗಳು ಕರೆದು ತಂದು ಅದನ್ನ ದಡಕ್ಕೆ ತರುವ ಪ್ರಯತ್ನ ಮಾಡಿದ್ರು. ಆದ್ರೆ ಆನೆ ಮೇಲೆ ಬರಲೇ ಇಲ್ಲ. ನಂತರ ಅಲ್ಲೇ ಮಾನುಷ್ಯ ಅಟ್ಟಹಾಸಕ್ಕೆ ಬಲಿಯಾಗಿ ಹೋಯ್ತು. ಈ ರಕ್ಷಣಾ ತಂಡದಲ್ಲಿದ್ದ ಮೋಹನ್ ಕೃಷ್ಣನ್ ಎಂಬ ಅಧಿಕಾರಿ ನೋವಿನಿಂದ ಈ ಘಟನೆಯ ಬಗ್ಗೆ ವಿವರಿಸಿದ ಬಳಿಕವೇ ಈ ರಕ್ಕಸೀಕೃತ್ಯ ಬೆಳಕಿಗೆ ಬಂದಿದೆ.
ಈ ಕೃತ್ಯಕ್ಕೆ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ವಿರಾಟ್ ಕೋಹ್ಲಿ, ಆಲಿಯಾ ಭಟ್, ಶ್ರದ್ದಾ ಕಪೂರ್, ಅನುಷ್ಕಾ ಶರ್ಮಾ, ಟಾಟಾ ಸಂಸ್ಥೆಯ ರತನ್ ಟಾಟಾ ಸೇರಿದಂತೆ ದೇಶದ ಬೇರೆ ಬೇರೆ ಭಾಷೆಯ ಅನೇಕ ಸೆಲೆಬ್ರಿಟಿಗಳು ಈ ಘಟನೆಯನ್ನು ಖಂಡಿಸಿದ್ದಾರೆ.
ಕಣ್ಣೀರು ತರಿಸುತ್ತೆ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು!
ಈ ಘಟನೆ ಬೆಳಗಿಗೆ ಬರುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಯ್ತು. ಈ ಆನೆಯ ಬಗ್ಗೆ ಸಾಕಷ್ಟು ಜನರು ಪೋಸ್ಟ್ ಮಾಡಿ ತಮ್ಮ ಭಾವನೆಯನ್ನ ವ್ಯಕ್ತಪಡಿಸಿದ್ರು. ಅದರಲ್ಲೂ ಕೆಲ ಪೋಸ್ಟ್‌ಗಳು ಕಣ್ಣಿರು ತರಿಸುವಂತಿವೆ.
‘ಅಬ್ಬಾ ಮುನಷ್ಯರು ಎಷ್ಟು ಒಳ್ಳೆಯವರು’
‘ದೇವರನಾಡಲ್ಲಿ ದೇವರಿಲ್ಲವೇ, ಈ ನೋವನ್ನು ಕೇಳುವವರಿಲ್ಲವೇ?’
ಎಷ್ಟು ಅರ್ಥಪೂರ್ಣವಾಗಿದೆ ನೋಡಿ ಈ ಟ್ರೋಲ್ ಗ್ರೂಪ್‌ನ ಪೋಸ್ಟ್.. ದೇವರ ನಾಡು ಅಂತ ಕರೆಸಿಕೊಳ್ಳುವ ಕೇರಳದಲ್ಲಿ ದೇವರಿಲ್ಲವೇ. ಈ ಆನೆಯ ನೋವನ್ನ ಕೇಳುವವರು ಇಲ್ಲವೇ ಅನ್ನೋದು ಇದರ ಅರ್ಥ. ಹೀಗೆ ಟ್ವಿಟರ್, ಪೇಸ್‌ಬುಕ್, ವ್ಯಾಟ್ಸಪ್, ಇನ್ಸ್ಟಾಗ್ರಾಮ್‌ನಲ್ಲಿ ಇಂತಹ ಪೋಸ್ಟ್‌ಗಳು ಸದ್ದು ಮಾಡುತ್ತಿವೆ.
ಪಾಪಿಗಳ ವಿರುದ್ಧ ಎಫ್‌ಐಆರ್, ಕಠಿಣ ಕ್ರಮದ ಭರವಸೆ!
ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಅನ್ವಯ ಈ ಕೃತ್ಯ ಎಸಗಿದ ಅನಧೀಕೃತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಪಾಲಕ್ಕಾಡ್ ವಲಯ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇರಳ ಸಿಎಂ ಪಿಣರಾಯಿ ವಿಜಯ್ ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದು, ಗರ್ಭಿಣಿ ಆನೆಯನ್ನ ಕೊಂದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅದೇನೆ ಇರ್ಲಿ ಪಾಪದ ಪ್ರಾಣಿಗಳು, ಅವುಗಳಿಗೂ ಬದುಕು ಎಂಬುದಿರುತ್ತದೆ. ನಮ್ಮಂತೆ ಪ್ರಾಣಿಗಳಿಗೂ ಭೂಮಿ ಮೇಲೆ ಬದುಕುವ ಹಕ್ಕು ಇರುತ್ತದೆ. ಇದನ್ನು ಅರಿಯದೆ ಹೀಗೆ ಆಹಾರದ ಆಸೆ ತೋರಿಸಿ ನರಳಿ ನರಳಿ ಸಾಯುವಂತೆ ಮಾಡುವುದು ಎಷ್ಟು ಸರಿ? ನಿಜಕ್ಕೂ ಇದು ಘನಘೋರ ಅಪರಾದ.
Published On - 7:28 am, Thu, 4 June 20