RS ಚುನಾವಣೆ: ಗುಜರಾತ್ನಲ್ಲಿ ಶುರುವಾಯ್ತು ಮತ್ತೊಂದು ಸುತ್ತಿನ ರಾಜೀನಾಮೆ ಪರ್ವ!
ಗಾಂಧಿನಗರ: ಜೂನ್ 19ಕ್ಕೆ ರಾಜ್ಯಸಭೆ ಚುನಾವಣೆ ನಿಗದಿಯಾಗಿದೆ. ಅದಕ್ಕೂ ಮುನ್ನ ಗುಜರಾತ್ನಲ್ಲಿ ಮತ್ತೊಂದು ಸುತ್ತಿನ ರಾಜೀನಾಮೆ ಪರ್ವ ಶುರುವಾಗಿದೆ! ಗುಜರಾತ್ ಕೋಟಾದಲ್ಲಿ ರಾಜ್ಯಸಭೆಗೆ 4 ಸದಸ್ಯರನ್ನು ಆಯ್ಕೆ ಮಾಡುವ ಅವಕಾಶವಿದೆ. ಅದರಲ್ಲಿ 2 ಸ್ಥಾನಗಳನ್ನು ತನ್ನದಾಗಿಸುವುದಕ್ಕೆ ಕಾಂಗ್ರೆಸ್ಗೆ ಛಾನ್ಸ್ ಇತ್ತು. ಅದ್ರೆ ಮಾರ್ಚ್ ತಿಂಗಳಲ್ಲೇ ರಾಜೀನಾಮೆ ಪರ್ವಕ್ಕೆ ಚಾಲನೆ ಸಿಕ್ಕಿ, ಐದು ಮಂದಿ ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ಗುಡ್ಬೈ ಹೇಳಿದ್ದರು. ಇದರಿಂದ ಕಾಂಗ್ರೆಸ್ ಶಾಸಕರ ಸಂಖ್ಯೆ 68ಕ್ಕೆ ಕುಸಿದಿತ್ತು. ಆದ್ರೆ ಇದು ಮತ್ತೊಂದು ಸುತ್ತಿನ ಬೆಳವಣಿಗೆಗಳು ಘಟಿಸಿದ್ದು, […]
ಗಾಂಧಿನಗರ: ಜೂನ್ 19ಕ್ಕೆ ರಾಜ್ಯಸಭೆ ಚುನಾವಣೆ ನಿಗದಿಯಾಗಿದೆ. ಅದಕ್ಕೂ ಮುನ್ನ ಗುಜರಾತ್ನಲ್ಲಿ ಮತ್ತೊಂದು ಸುತ್ತಿನ ರಾಜೀನಾಮೆ ಪರ್ವ ಶುರುವಾಗಿದೆ! ಗುಜರಾತ್ ಕೋಟಾದಲ್ಲಿ ರಾಜ್ಯಸಭೆಗೆ 4 ಸದಸ್ಯರನ್ನು ಆಯ್ಕೆ ಮಾಡುವ ಅವಕಾಶವಿದೆ. ಅದರಲ್ಲಿ 2 ಸ್ಥಾನಗಳನ್ನು ತನ್ನದಾಗಿಸುವುದಕ್ಕೆ ಕಾಂಗ್ರೆಸ್ಗೆ ಛಾನ್ಸ್ ಇತ್ತು. ಅದ್ರೆ ಮಾರ್ಚ್ ತಿಂಗಳಲ್ಲೇ ರಾಜೀನಾಮೆ ಪರ್ವಕ್ಕೆ ಚಾಲನೆ ಸಿಕ್ಕಿ, ಐದು ಮಂದಿ ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ಗುಡ್ಬೈ ಹೇಳಿದ್ದರು. ಇದರಿಂದ ಕಾಂಗ್ರೆಸ್ ಶಾಸಕರ ಸಂಖ್ಯೆ 68ಕ್ಕೆ ಕುಸಿದಿತ್ತು.
ಆದ್ರೆ ಇದು ಮತ್ತೊಂದು ಸುತ್ತಿನ ಬೆಳವಣಿಗೆಗಳು ಘಟಿಸಿದ್ದು, ದಿಢೀರನೆ ಇನ್ನೂ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರ ಜೊತೆಗೆ ಮತ್ತೊಬ್ಬ ಶಾಸಕ ಪಕ್ಷದ ನಾಯಕತ್ವದ ಕೈಗೆ ಸಿಗದೆ, ಒಟ್ಟು 3 ಶಾಸಕರು ಕಾಂಗ್ರೆಸ್ನಿಂದ ದೂರವಿರುವುದಾಗಿ ಸ್ವತಃ ಪಕ್ಷದ ಮೂಲಗಳೇ ಹೇಳಿವೆ. ಇದರಿಂದ ಈ ಬಾರಿಯೂ ಗುಜರಾತ್ ಕಡೆಯ ರಾಜ್ಯಸಭೆ ಚುನಾವಣೆ ಕುತೂಹಲ ಘಟ್ಟದ ಪ್ರವೇಶಿಸಿದೆ.
ಬಿಜೆಪಿ ಜರೂರತ್ತು ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದಿಂದ 103 ಶಾಸಕರು ಇದ್ದಾರೆ. ಇವರ ಮೂಲಕ ಇಬ್ಬರು ಸುಲಲಿತವಾಗಿ ರಾಜ್ಯಸಭೆಗೆ ಆಯ್ಕೆಯಾಗಬಹುದು. ಕಾಂಗ್ರೆಸ್ ಪಕ್ಷಕ್ಕೂ ಸಹ ಇಬ್ಬರನ್ನು ಮೇಲ್ಮನೆಗೆ ಆಯ್ಕೆ ಮಾಡಿ ಕಳಿಸುವ ಅವಕಾಶವಿತ್ತು. ಆದ್ರೆ ಈಗ ಒಂದಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದ್ದು, 4ನೆಯ ಸ್ಥಾನಕ್ಕೆ ಆಯ್ಕೆ ಮುಕ್ತವಾಗಿದೆ. ಬಿಜೆಪಿ ಆ ನಾಲ್ಕನೆಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ರಾಜ್ಯಸಭೆಯಲ್ಲಿಯೂ ಸಂಪೂರ್ಣ ಬಹುಮತ ಸಾಧಿಸಲು ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟಕ್ಕೆ ಅಗತ್ಯ ರಾಜ್ಯಸಭಾ ಸದಸ್ಯರ ಸಂಖ್ಯೆ ಇಲ್ಲ. ಹಾಗಾಗಿ ಬಿಜೆಪಿ ತನ್ನ ವತಿಯಿಂದ ಹೆಚ್ಚು ಹೆಚ್ಚು ಸಂಸದರನ್ನು ರಾಜ್ಯಸಭೆಗೆ ಆರಿಸಿಕೊಳ್ಳುವ ಜರೂರತ್ತು ಇದೆ ಎಂದು ರಾಜಕೀಯ ಪರಿಣತರು ವಿಶ್ಲೇಷಿಸಿದ್ದಾರೆ.
India is in the midst of its independent history’s biggest health, economic & humanitarian crises. BJP, though, cannot think beyond putting all its energies in poaching legislators for RS polls, people be damned!
— Rajeev Satav (@SATAVRAJEEV) June 3, 2020
Published On - 1:25 pm, Thu, 4 June 20