AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಂದ ಹೊರಟಿದ್ದ ಆ ವಲಸೆ ಕಾರ್ಮಿಕನನ್ನು ಹಾವು ಕಚ್ಚಿ ಸಾಯಿಸಿತು!

ಈ ಕೊರೊನಾ ಕ್ರಿಮಿ, ನಿಷ್ಪಾಪಿ ವಲಸೆ ಕಾರ್ಮಿಕರನ್ನು ಕಾಡಿರುವಷ್ಟು ಬೇರೆ ಯಾರನ್ನೂ ಕಾಡಿಲ್ಲ ಅನ್ನಿಸುತ್ತದೆ. ಛೇ! ಅದೂ ಯಾವ ರೂಪದಲ್ಲೆಲ್ಲ ನೇರವಾಗಿ ಅವರ ಜೀವದ ಮೇಲೆಯೇ ವಕ್ಕರಿಸಿದೆ ಈ ದರಿದ್ರ ಕ್ರಿಮಿ. ಇಲ್ಲೊಬ್ಬ ಯುವ ಕಾರ್ಮಿಕ ನಮ್ಮದೇ ಬೆಂಗಳೂರಿಂದ ಹೊರಟವನು 2,000 ಕಿಮೀ ದೂರದ ಉತ್ತರ ಪ್ರದೇಶದಲ್ಲಿರುವ ತನ್ನ ಮನೆಯನ್ನು ಹಾದಿಯುದ್ದಕ್ಕೂ ಕಾಲ್ನಡಿಗೆಯಲ್ಲಿಯೇ ಸವೆಸಿ, ಸಾಗಿದ್ದನಂತೆ. ಮನೆ ತಲುಪಿದವ ಅವ್ವನ ಮುಖ ನೋಡಿ ಅವ್ವಾ ನಾ ಬಂದೆ! ಅಂದಿದ್ದಾನೆ. ಅದಾದ ಕೆಲವೇ ಕ್ಷಣಗಳಲ್ಲಿ ಹಾವಿನ ರೂಪದಲ್ಲಿದ್ದ ಯಮರಾಯ […]

ಬೆಂಗಳೂರಿಂದ ಹೊರಟಿದ್ದ ಆ ವಲಸೆ ಕಾರ್ಮಿಕನನ್ನು ಹಾವು ಕಚ್ಚಿ ಸಾಯಿಸಿತು!
ಸಾಧು ಶ್ರೀನಾಥ್​
|

Updated on:Jun 05, 2020 | 10:27 AM

Share

ಈ ಕೊರೊನಾ ಕ್ರಿಮಿ, ನಿಷ್ಪಾಪಿ ವಲಸೆ ಕಾರ್ಮಿಕರನ್ನು ಕಾಡಿರುವಷ್ಟು ಬೇರೆ ಯಾರನ್ನೂ ಕಾಡಿಲ್ಲ ಅನ್ನಿಸುತ್ತದೆ. ಛೇ! ಅದೂ ಯಾವ ರೂಪದಲ್ಲೆಲ್ಲ ನೇರವಾಗಿ ಅವರ ಜೀವದ ಮೇಲೆಯೇ ವಕ್ಕರಿಸಿದೆ ಈ ದರಿದ್ರ ಕ್ರಿಮಿ. ಇಲ್ಲೊಬ್ಬ ಯುವ ಕಾರ್ಮಿಕ ನಮ್ಮದೇ ಬೆಂಗಳೂರಿಂದ ಹೊರಟವನು 2,000 ಕಿಮೀ ದೂರದ ಉತ್ತರ ಪ್ರದೇಶದಲ್ಲಿರುವ ತನ್ನ ಮನೆಯನ್ನು ಹಾದಿಯುದ್ದಕ್ಕೂ ಕಾಲ್ನಡಿಗೆಯಲ್ಲಿಯೇ ಸವೆಸಿ, ಸಾಗಿದ್ದನಂತೆ. ಮನೆ ತಲುಪಿದವ ಅವ್ವನ ಮುಖ ನೋಡಿ ಅವ್ವಾ ನಾ ಬಂದೆ! ಅಂದಿದ್ದಾನೆ. ಅದಾದ ಕೆಲವೇ ಕ್ಷಣಗಳಲ್ಲಿ ಹಾವಿನ ರೂಪದಲ್ಲಿದ್ದ ಯಮರಾಯ ಆತನನ್ನು ತನ್ನ ಲೋಕಕ್ಕೆ ಸೆಳೆದೊಯ್ದಿದೆ.

‘ನಡೆ’ದಿದ್ದಿಷ್ಟು: ಯುಪಿ ರಾಜ್ಯದ ಗೋಂಡಾ ಜಿಲ್ಲೆಯ ಧಾನೇಪುರ ಎಂಬ ಪುಟ್ಟ ಗ್ರಾಮದ ಸಲ್ಮಾನ್​ ಖಾನ್ ಎಂಬ ಯುವಕ ಕಳೆದ ಡಿಸೆಂಬರ್​ನಲ್ಲಿ ಜೀವನವನ್ನರಸಿ ರೈಲಿನಲ್ಲಿ ಬೆಂಗಳೂರಿಗೆ ಬಂದಿಳಿದಿದ್ದಾನೆ. 23 ವರ್ಷದ ಸಲ್ಮಾನ್​ ನೋಡೋಕ್ಕೆ ಥೇಟ್​ ಬಾಲಿವುಡ್​ ನಟ ಸಲ್ಮಾನ್​ ನಂತೆಯೇ ಇದ್ದ.

ಬೆಂಗಳೂರಿಗೆ ಬಂದವನೇ ಆರು ತಿಂಗಳ ಕಾಲ ಹಾಗೂ-ಹೀಗೂ ಜೀವನ ನಡೆಸಿದ್ದಾನೆ.ಈ ಮಧ್ಯೆ ಧುತ್ತನೇ ಎದುರಾಗಿದೆ ಕೊರೊನಾ ಸಂಕಷ್ಟ. ಎಲ್ಲಾ ಲಾಕ್​​ಡೌನ್​ ಆಗುತ್ತಿದ್ದಂತೆ ತನ್ನ ದುರ್ವಿಧಿಯನ್ನು ಬೈದುಕೊಳ್ಳುತ್ತಾ ಮೇ 12ರಂದು ಉತ್ತರಪ್ರದೇಶದ ತನ್ನ ಗ್ರಾಮದತ್ತ ಕದಮ್​ ತಾಲ್​ ಶುರು ಮಾಡಿದ್ದಾನೆ.

ಸಲ್ಮಾನ್​ ಖಾನ್ ಜರ್ನಿ ಹೇಗಿತ್ತು? ಅವನ ಸಹಚರ ಕುಶಾಲ್ ಕುಮಾರ್ ಹೇಳುವಂತೆ.. 2 ತಿಂಗಳು ಬೆಂಗಳೂರಿನಲ್ಲಿ ನಮ್ಮ ಕಾಂಟ್ರಾಕ್ಟರ್ ಸಂಬಳ ಕೊಡಲಿಲ್ಲ. ಜೀವನ ದುರ್ಭರವಾಯ್ತು. ಟ್ರೈನ್ ಹತ್ತಕ್ಕೆ ಹೋದ್ವಿ.. ರೈಲ್ವೆ ಸಿಬ್ಬಂದಿ, ಪೊಲೀಸರು ನಮ್ಮನ್ನು ಹತ್ತಿಸಲಿಲ್ಲ.

ಅದಾದ ಮೇಲೆ.. ನಾವು 10 ಮಂದಿ ಇದ್ದಿವಿ. ಸೇಫ್​ ಆಗಿರುತ್ತೆ ಅಂತಾ ರೈಲ್ವೆ ಟ್ರಾಕ್​ ಮೇಲೆಯೇ ಉದ್ದಕ್ಕೂ ನಡೆಯತೊಡಗಿದೆವು. (ಇಂತಹುದೇ 13 ಕಾರ್ಮಿಕರು ನಡುರಾತ್ರಿ ಹಳಿಗಳ ಮೇಲೆ ಮಲಗಿದ್ದಾಗಲೇ ಅಲ್ಲವೇ ಟ್ರೈನಿಗೆ ಆಹುತಿಯಾಗಿದ್ದು) ಮಧ್ಯೆ ತೆಲಂಗಾಣ ಗಡಿಯಲ್ಲಿ ತುಂಗಭದ್ರಾ ನದಿ ತೀರದಲ್ಲಿಯೂ ನಡೆದೆವು. ಅಲ್ಲಿಂದ ಮಹಾರಾಷ್ಟ್ರಕ್ಕೆ ತಲುಪಿ, ಪೊಲೀಸರ ಭಯದಿಂದ ರಾತ್ರಿ ವೇಳೆಯಲ್ಲಿಯೇ ಮನೆಯತ್ತ ಹೆಜ್ಜೆ ಹಾಕತೊಡಗಿದೆವು.

ಮಧ್ಯೆ ಸ್ವಲ್ಪ ದೂರ ಲಾರಿಗಳಲ್ಲಿಯೂ ಸಂಚರಿಸಿದೆವು. ಜಿಲ್ಲಾ ಕೇಂದ್ರ ತಲುಪಿದಾಗ ಕ್ವಾರೆಂಟೈನ್​ಗೆ ಒಳಪಡಿಸಿದರು. ಅದನ್ನೂ ಮುಗಿಸಿಕೊಂಡು ಮನೆಗಳತ್ತ ಹೆಜ್ಜೆ ಹಾಕಿದೆವು. ಆದ್ರೆ ದೋಸ್ತ ಸಲ್ಮಾನ್​ ಖಾನ್ ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ಹಾವಿಗೆ ಹಾರವಾಗಿದ್ದಾನೆ ಎಂಬ ಸುದ್ದಿ ಬರಸಿಡಿಲಿನಂತೆ ಬಡಿಯಿತು ಎಂದು ಕುಶಾಲ್ ಕಣ್ಣೀರು ಹಾಕಿದ.

Published On - 6:31 pm, Thu, 4 June 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ