ಉದಯನಿಧಿ ಸ್ಟಾಲಿನ್ ಹೇಳಿಕೆ ವಿರುದ್ದ ಟ್ವೀಟ್ ಮಾಡಿದ ಅಮಿತ್ ಮಾಳವೀಯ ವಿರುದ್ಧ FIR ದಾಖಲು
ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ತಿರುಚಿದ್ದಕ್ಕಾಗಿ ಬಿಜೆಪಿ ಐಟಿ ಸೆಲ್‌ನ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವೀಯ ವಿರುದ್ಧ ತಿರುಚಿರಾಪಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 153, 153 (ಎ), 504, 504 (1) (ಬಿ) ಅಡಿಯಲ್ಲಿ ಎಫ್ಐಆರ್ದಾಖಲಿಸಲಾಗಿದೆ.
ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರ ಹೇಳಿಕೆಯನ್ನು ತಿರುಚಿದ್ದಕ್ಕಾಗಿ ಬಿಜೆಪಿ ಐಟಿ ಸೆಲ್‌ನ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವೀಯ ವಿರುದ್ಧ ತಿರುಚಿರಾಪಳ್ಳಿ ಪೊಲೀಸರು ಐಪಿಸಿಯ 4 ಸೆಕ್ಷನ್‌ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸಚಿವ ಉದಯನಿಧಿ ಸ್ಟಾಲಿನ್ ಭಾಷಣದ ವೀಡಿಯೊ ಒಂದನ್ನು ಪೋಸ್ಟ್ ಮಾಡಿದ್ದ ಮಾಳವೀಯ, ಸನಾತನ ಧರ್ಮವನ್ನು ಅನುಸರಿಸುವ 80% ಜನರ ಜನಾಂಗೀಯ ಹತ್ಯೆಗೆ ನೀಡಿದ ಕರೆಯಾಗಿದೆ ಎಂದು ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದರು. ಹಾಗಾಗಿ ಸೆಕ್ಷನ್ 153, 153 (ಎ), 504, 504 (1) (ಬಿ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಡಿಎಂಕೆ ವಕೀಲ ವಿಭಾಗದ ಕೆ.ಎ.ವಿ.ದಿನಕರನ್ ಎಂಬುವವರು ದೂರಿನ ಆಧಾರದ ಮೇಲೆ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವೀಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅದೇ ರೀತಿಯಾಗಿ ಮಧುರೈ ಸೈಬರ್ ಕ್ರೈಂ ಪೊಲೀಸರು ಉದಯನಿಧಿಯನ್ನು ಕೊಂದವರಿಗೆ ಬಹುಮಾನವನ್ನು ಘೋಷಿಸಿದ ಯುಪಿ ‘ಸೀರ್’ನ ವಿಡಿಯೋವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಪತ್ರಕರ್ತ ಪಿಯೂಷ್ ರೈ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ಉದಯನಿಧಿ ಹೇಳಿಕೆ ವಿವಾದ: ತಕ್ಕ ಉತ್ತರ ನೀಡಬೇಕು ಎಂದ ನರೇಂದ್ರ ಮೋದಿ
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಗಳೊಂದಿಗೆ ಹೋಲಿಸಿದ ನಂತರ ರಾಜಕೀಯ ವಲಯದಲ್ಲಿ ವಾಗ್ವಾದಗಳು ನಡೆದಿವೆ. ಚೆನ್ನೈನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉದಯನಿಧಿ ಇಂತಹ ವಿಷಯಗಳನ್ನು ವಿರೋಧಿಸಬಾರದು. ಅವುಗಳನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು.
ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ಅವರ ‘ಸನಾತನ ಧರ್ಮ’ ಹೇಳಿಕೆ ಖಂಡಿಸಿ ಸಿಜೆಐಗೆ ಪತ್ರ ಬರೆದ 262 ಗಣ್ಯರು
ಉದಯನಿಧಿ ಅವರ ಹೇಳಿಕೆಯನ್ನು ಖಂಡಿಸಲು ಬಿಜೆಪಿ ಕಾಂಗ್ರೆಸ್‌ಗೆ ಒತ್ತಾಯಿಸಿದೆ. ಆದಾಗ್ಯೂ, ಸನಾತನ ಧರ್ಮದ ಅನುಯಾಯಿಗಳ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿಲ್ಲ ಎಂದು ಉದಯನಿಧಿ ನಂತರ ಹೇಳಿದ್ದಾರೆ.
ಸ್ಟಾಲಿನ್ ಬಂಧನ ಕೋರಿ ಚೆನ್ನೈ ಪೊಲೀಸರಿಗೆ ನೋಟಿಸ್ ನೀಡಿದ ಆರ್‌ಎಸ್‌ಎಸ್
ಇತ್ತೀಚೆಗೆ ಸಚಿವ ಉದಯನಿಧಿ ಸ್ಟಾಲಿನ್ ಬಂಧನ ಕೋರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾನೂನು ವಿಭಾಗ ನೋಟಿಸ್ ನೀಡಿತ್ತು. ಡಿಎಂಕೆ ಸಚಿವರನ್ನು ಬಂಧಿಸುವಂತೆ ಕೋರಿ ವಕೀಲ ಉಮೇಶ್ ಶರ್ಮಾ ಅವರು ಲೀಗಲ್ ನೋಟಿಸ್ ನೀಡಿದ್ದರು.
153A/B, 295 A, 298, 505 ಅಡಿಯಲ್ಲಿ ಕ್ರಮಕೈಗೊಳ್ಳುವಂತೆ ವಕೀಲ ಉಮೇಶ್ ಶರ್ಮಾ ಪೋಲಿಸ್ ಕಮಿಷನರ್‌ಗೆ 7 ದಿನಗಳ ನೋಟಿಸ್ ನೀಡಿದ್ದರು. ಒಂದು ವೇಳೆ ಕ್ರಮಕೈಗೊಳ್ಳುವಲ್ಲಿ ವಿಫಲವಾದರೆ ಎಸ್‌ಸಿಯಲ್ಲಿ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:11 pm, Wed, 6 September 23