ದೆಹಲಿ ಅಕ್ಟೋಬರ್ 07: ಪ್ರವಾದಿ ಮುಹಮ್ಮದ್ (Prophet Muhammad) ಬಗ್ಗೆ ಯತಿ ನರಸಿಂಹಾನಂದ ಅವರ ಹೇಳಿಕೆಗಳ ಕುರಿತು ಟ್ವೀಟ್ ಮಾಡಿದ್ದಕ್ಕಾಗಿ ಬಿಜೆಪಿ ನಾಯಕರ ದೂರಿನ ಆಧಾರದ ಮೇಲೆ ಆಲ್ಟ್ ನ್ಯೂಸ್ ಸಹಸ್ಥಾಪಕ ಮೊಹಮ್ಮದ್ ಜುಬೇರ್ (Mohammed Zubair) ವಿರುದ್ಧ ಯುಪಿ ಪೊಲೀಸರು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ದಸ್ನಾ ದೇವಸ್ಥಾನದ ಹೊರಗಿನ ಹಿಂಸಾಚಾರದ ಎರಡು ದಿನಗಳ ನಂತರ ಘಾಜಿಯಾಬಾದ್‌ನ ವೆಬ್ ಸಿಟಿ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 7 ರಂದು ಬಿಜೆಪಿ ನಾಯಕ ಡಾ ಉದಿತಾ ತ್ಯಾಗಿ ಅವರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ದಸ್ನಾ ದೇವಸ್ಥಾನದ ಮುಖ್ಯ ಅರ್ಚಕರಾಗಿದ್ದಾರೆ ಯತಿ ನರಸಿಂಹಾನಂದ. ಜುಬೇರ್ ಅವರಲ್ಲದೆ, ಇದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಮತ್ತು ಪ್ರಮುಖ ಮುಸ್ಲಿಂ ಧರ್ಮಗುರು ಅರ್ಷದ್ ಮದ್ನಿ ಅವರ ಹೆಸರೂ ಎಫ್ಐಆರ್ ನಲ್ಲಿದೆ. ದೇವಸ್ಥಾನದ ಹೊರಗೆ ನಡೆದ ಹಿಂಸಾಚಾರವು ಯೋಜಿತ ಸಂಚು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
After the Hate speech by Yati Narasinghanand, They now want Ghaziabad Police to file an FIR against me. https://t.co/El2FcolmMH
— Mohammed Zubair (@zoo_bear) October 7, 2024
ಜುಬೈರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196, 228, 299, 356(3), ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
As expected. FIR registered against me. https://t.co/KeGQnI2G5y
— Mohammed Zubair (@zoo_bear) October 7, 2024
ಕಳೆದ ವಾರ, ಸಬ್ ಇನ್ಸ್‌ಪೆಕ್ಟರ್ ತ್ರಿವೇಂದ್ರ ಸಿಂಗ್ ಅವರ ದೂರಿನ ಆಧಾರದ ಮೇಲೆ ಗಾಜಿಯಾಬಾದ್ ಪೊಲೀಸರು ಯತಿ ಅವರ ಹೇಳಿಕೆಗಳಿಗಾಗಿ ಪ್ರಕರಣ ದಾಖಲಿಸಿದ್ದರು. ಯತಿ ಅವರನ್ನು ಬಂಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿದ್ದರೂ ಅವರನ್ನು ಇನ್ನೂ ಬಂಧಿಸಲಾಗಿಲ್ಲ.
ಸೆಪ್ಟೆಂಬರ್ 29 ರಂದು, ನರಸಿಂಹಾನಂದ ಅವರು ಗಾಜಿಯಾಬಾದ್‌ನ ಲೋಹಿಯಾ ನಗರದಲ್ಲಿರುವ ಹಿಂದಿ ಭವನದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು,ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿವೆ.
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಜನವರಿಯಿಂದ 194 ನಕ್ಸಲರನ್ನು ಸದೆಬಡಿಯಲಾಗಿದೆ, 801 ಮಂದಿ ಬಂಧನ: ಅಮಿತ್ ಶಾ
ಜುಬೈರ್ ವಿರುದ್ಧ ಇದು ಮೊದಲ ಎಫ್‌ಐಆರ್ ಅಲ್ಲ. ಆನ್‌ಲೈನ್‌ನಲ್ಲಿ ದ್ವೇಷ ಭಾಷಣವನ್ನು ಎತ್ತಿ ತೋರಿಸಿದ್ದಕ್ಕೆ ಇದಕ್ಕಿಂತ ಮುಂಚೆಯೂ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:18 pm, Mon, 7 October 24