ತೇಜಸ್ವಿ ಯಾದವ್ ಸರ್ಕಾರಿ ಬಂಗಲೆ ಲೂಟಿ; ಸೋಫಾ, ಲೈಟ್, ಎಸಿ ನಾಪತ್ತೆ: ಬಿಜೆಪಿ ಆರೋಪ
ಬೆಡ್‌ನ ಬೇಸ್ ಕಾಣೆಯಾಗಿದೆ, ಎಸಿ ಮತ್ತು ಲೈಟ್‌ಗಳನ್ನು ತೆಗೆದುಹಾಕಲಾಗಿದೆ. ವಾಶ್‌ರೂಮ್‌ನಲ್ಲಿನ ನೀರಿನ ಔಟ್‌ಲೆಟ್‌ಗಳನ್ನು ಹೊರತೆಗೆಯಲಾಗಿದೆ, ಬ್ಯಾಡ್ಮಿಂಟನ್ ಕೋರ್ಟ್ ಮ್ಯಾಟ್ ,ಫೌಂಟೇನ್ ಲೈಟ್‌ಗಳು ಮತ್ತು ಸೋಫಾಗಳನ್ನು ತೆಗೆಯಲಾಗಿದೆ. ತೇಜಸ್ವಿ ಯಾದವ್ ಅವರು ಮನೆ ಖಾಲಿ ಮಾಡಿದಾಗ, ಅವರು ತಮ್ಮೊಂದಿಗೆ ಎಲ್ಲವನ್ನೂ ತೆಗೆದುಕೊಂಡು ಹೋಗಿದ್ದಾರೆ
ಲಕ್ನೋ ಅಕ್ಟೋಬರ್ 07: ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಅವರು ತೆರವು ಮಾಡಿದ ಸರ್ಕಾರಿ ಬಂಗಲೆಯಿಂದ ಪೀಠೋಪಕರಣಗಳು, ಲೈಟ್ ಫಿಕ್ಚರ್‌ಗಳು ಮತ್ತು ಹವಾನಿಯಂತ್ರಣಗಳನ್ನು ತೆಗೆದುಹಾಕಿದ್ದಾರೆ ಎಂದು ಬಿಜೆಪಿ (BJP) ಆರೋಪಿಸಿದೆ. ಬಿಹಾರ ಬಿಜೆಪಿಯ ಮಾಧ್ಯಮ ಉಸ್ತುವಾರಿ ಡ್ಯಾನಿಶ್ ಇಕ್ಬಾಲ್ ಸೋಮವಾರ ಯಾದವ್ ಮೇಲೆ ವಾಗ್ದಾಳಿ ನಡೆಸಿದ್ದು, ಅವರು ಹೋದ ನಂತರ ಪೀಠೋಪಕರಣಗಳು, ಎಸಿ, ದೀಪಗಳು ಮತ್ತು ಬ್ಯಾಡ್ಮಿಂಟನ್ ಕೋರ್ಟ್ ಮ್ಯಾಟ್ ಸೇರಿದಂತೆ ವಿವಿಧ ವಸ್ತುಗಳು ಮನೆಯಿಂದ ಕಾಣೆಯಾಗಿವೆ ಎಂದು ಆರೋಪಿಸಿದರು.
ತೇಜಸ್ವಿ ಯಾದವ್ ತನ್ನೊಂದಿಗೆ ಎಲ್ಲವನ್ನೂ ತೆಗೆದುಕೊಂಡು ಹೋಗಿದ್ದಾರೆ: ಡ್ಯಾನಿಶ್ ಇಕ್ಬಾಲ್
“ಬೆಡ್‌ನ ಬೇಸ್ ಕಾಣೆಯಾಗಿದೆ, ಎಸಿ ಮತ್ತು ಲೈಟ್‌ಗಳನ್ನು ತೆಗೆದುಹಾಕಲಾಗಿದೆ. ವಾಶ್‌ರೂಮ್‌ನಲ್ಲಿನ ನೀರಿನ ಔಟ್‌ಲೆಟ್‌ಗಳನ್ನು ಹೊರತೆಗೆಯಲಾಗಿದೆ, ಬ್ಯಾಡ್ಮಿಂಟನ್ ಕೋರ್ಟ್ ಮ್ಯಾಟ್ ,ಫೌಂಟೇನ್ ಲೈಟ್‌ಗಳು ಮತ್ತು ಸೋಫಾಗಳನ್ನು ತೆಗೆಯಲಾಗಿದೆ. ತೇಜಸ್ವಿ ಯಾದವ್ ಅವರು ಮನೆ ಖಾಲಿ ಮಾಡಿದಾಗ, ಅವರು ತಮ್ಮೊಂದಿಗೆ ಎಲ್ಲವನ್ನೂ ತೆಗೆದುಕೊಂಡು ಹೋಗಿದ್ದಾರೆ, ಇದು ಅವರ ಮನಸ್ಥಿತಿಯ ಬಗ್ಗೆ ಹೇಳುತ್ತದೆ” ಎಂದು ಡ್ಯಾನಿಶ್ ಇಕ್ಬಾಲ್ ಹೇಳಿದ್ದಾರೆ.
“ನಾನು ಅವರ ಮೇಲೆ ಆರೋಪ ಮಾಡುತ್ತಿಲ್ಲ, ಆದರೆ ಅದು ಸಂಪೂರ್ಣವಾಗಿ ಸಾಬೀತಾಗಿದೆ. ತೇಜಸ್ವಿ ಯಾದವ್ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ ರೀತಿ, ಅವರ ಸ್ವಭಾವವನ್ನು ತೋರಿಸುತ್ತದೆ. ಅವರು ಮನೆ ಖಾಲಿ ಮಾಡುವ ರೀತಿಯಲ್ಲಿ ಅವರು ಸರ್ಕಾರದ ಆಸ್ತಿಯನ್ನು ಹೇಗೆ ಲೂಟಿ ಮಾಡುತ್ತಾರೆ ಎಂಬುದನ್ನು ಪ್ರದರ್ಶಿಸಿದ್ದಾರೆ” ಎಂದು ಅವರು ಹೇಳಿದರು.
ನವರಾತ್ರಿ ವೇಳೆ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಬಂಗಲೆಗೆ ತೆರಳಲು ನಿರ್ಧರಿಸಲಾಗಿತ್ತು, ಆದರೆ ಅದಕ್ಕೂ ಮುನ್ನ ವಿವಾದಗಳು ಹುಟ್ಟಿಕೊಂಡಿವೆ.
ನಿವಾಸದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಹಾರ್ಡ್ ಡ್ರೈವ್ ಕಾಣೆಯಾಗಿದೆ ಎಂದು ಇಕ್ಬಾಲ್ ಹೇಳಿದ್ದಾರೆ.
ತನಿಖೆಗೆ ಆಗ್ರಹಿಸಿದ ಗಿರಿರಾಜ್ ಸಿಂಗ್
ಸಾರ್ವಜನಿಕ ಸ್ಥಾನದಲ್ಲಿರುವವರು ಇಂತಹ ಅವಹೇಳನಕಾರಿ ಚಟುವಟಿಕೆಗಳನ್ನು ಮಾಡಬಾರದು. ತೇಜಸ್ವಿ ಯಾದವ್ ಅವರ ಬಂಗಲೆಗೆ ಎಷ್ಟು ಹಣ ಖರ್ಚಾಗಿದೆ ಎಂದು ವಿಚಾರಿಸಲು ತನಿಖಾ ಸಮಿತಿ ರಚಿಸಿ ಪ್ರಕರಣ ದಾಖಲಿಸಬೇಕು” ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಮತ್ತೊಂದು ಬೆಳವಣಿಗೆಯಲ್ಲಿ, ಉದ್ಯೋಗಕ್ಕಾಗಿ ಭೂಮಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪುತ್ರರಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಅವರಿಗೆ ದೆಹಲಿ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.
ಇದನ್ನೂ ಓದಿ: ನರಸಿಂಹಾನಂದ ಹೇಳಿಕೆ ಬಗ್ಗೆ ಟ್ವೀಟ್; ಮೊಹಮ್ಮದ್ ಜುಬೇರ್ ವಿರುದ್ಧ ಎಫ್‌ಐಆರ್
ವಿಶೇಷ ನ್ಯಾಯಾಧೀಶ ವಿಶಾಲ್ ಗೊಗ್ನೆ ಅವರು ತಲಾ ₹ 1 ಲಕ್ಷ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಿದ್ದಾರೆ.
ಆರೋಪಿಗಳು ಆಗಸ್ಟ್ 6 ರಂದು ಜಾರಿ ನಿರ್ದೇಶನಾಲಯ (ED) ಅವರ ವಿರುದ್ಧ ಸಲ್ಲಿಸಿದ ಪೂರಕ ಚಾರ್ಜ್ ಶೀಟ್‌ನ ನ್ಯಾಯಾಲಯದ ಅರಿವಿನ ನಂತರ, ಈ ಹಿಂದೆ ನೀಡಲಾದ ಸಮನ್ಸ್‌ಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ