Tamil Nadu Fire Accident: ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ: 8 ಜನ ಮೃತ

Fire Accident: ಸದ್ಯ ಇಡೀ ಕಾರ್ಖಾನೆಯೇ ಹೊತ್ತಿ ಉರಿಯುತ್ತಿದ್ದು, ಕಾರ್ಖಾನೆಯಲ್ಲಿನ ಯಂತ್ರ, ಉಪಕರಣಗಳು ಅಗ್ನಿಗೆ ಆಹುತಿಯಾಗಿ ಅಗ್ನಿ ಕೆನ್ನಾಲಿಗೆ ಜೋರಾಗಿ ವ್ಯಾಪಿಸುತ್ತಲೇ ಇದೆ.

Tamil Nadu Fire Accident: ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ: 8 ಜನ ಮೃತ
ಅಗ್ನಿ ಅವಘಡ

Updated on: Feb 12, 2021 | 4:16 PM

ತಮಿಳುನಾಡಿನ ವಿರುಧು​ನಗರದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ ಕಾರಣ 6 ಜನರು ಸಜೀವ ದಹನವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 8ಕ್ಕೆ ಏರಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಹಲವಾರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಇಡೀ ಕಾರ್ಖಾನೆಯೇ ಹೊತ್ತಿ ಉರಿಯುತ್ತಿದ್ದು, ಕಾರ್ಖಾನೆಯಲ್ಲಿನ ಯಂತ್ರ, ಉಪಕರಣಗಳು ಅಗ್ನಿಗೆ ಆಹುತಿಯಾಗಿ ಅಗ್ನಿ ಕೆನ್ನಾಲಿಗೆ ಜೋರಾಗಿ ವ್ಯಾಪಿಸುತ್ತಲೇ ಇದೆ. ಬೆಂಕಿ ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳದವರು ಹರಸಾಹಸ ಪಡುತ್ತಿದ್ದು, ಇದುವರೆಗೆ ಸ್ಪೋಟಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ ಎನ್ನಲಾಗಿದೆ.

Published On - 4:12 pm, Fri, 12 February 21