Mudhol Hound joins IAF: ಭಾರತೀಯ ವಾಯುಸೇನೆ ಸೇರಿದ ಮುಧೋಳ ಶ್ವಾನ
Mudhol Dog: ಒಂದು ತಿಂಗಳಿನ ಎರಡು ಗಂಡು, ಎರಡು ಹೆಣ್ಣು ಮರಿಗಳನ್ನು ಉತ್ತರಪ್ರದೇಶದ ಆಗ್ರಾದ ಏರ್ ಫೋರ್ಸ್ ಸ್ಟೇಷನ್ಗೆ ಡಿಸಿಎಂ ಗೋವಿಂದ ಕಾರಜೋಳ ಹಸ್ತಾಂತರಿಸಿದರು. ಹಸ್ತಾಂತರಿಸಿದ ಮರಿಗಳಿಗೆ ಒಂದು ವರ್ಷ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ತರಬೇತಿ ನೀಡಲಾಗುತ್ತದೆ.
ಬಾಗಲಕೋಟೆ: ತಿಮ್ಮಾಪುರ ಶ್ವಾನ ಸಂವರ್ಧನ ಕೇಂದ್ರದಿಂದ ಭಾರತೀಯ ವಾಯುಸೇನೆಗೆ ಮುಧೋಳ ಶ್ವಾನಗಳನ್ನು ಹಸ್ತಾಂತರಿಸಲಾಗಿದೆ. ಇಂದು ಅಧಿಕೃತವಾಗಿ 4 ಮರಿಗಳನ್ನು ವಾಯುಸೇನೆಗೆ ನೀಡಲಾಗಿದೆ. ಒಂದು ತಿಂಗಳಿನ ಎರಡು ಗಂಡು, ಎರಡು ಹೆಣ್ಣು ಮರಿಗಳನ್ನು ಉತ್ತರಪ್ರದೇಶದ ಆಗ್ರಾದ ಏರ್ ಫೋರ್ಸ್ ಸ್ಟೇಷನ್ಗೆ ಡಿಸಿಎಂ ಗೋವಿಂದ ಕಾರಜೋಳ ಹಸ್ತಾಂತರಿಸಿದರು. ಹಸ್ತಾಂತರಿಸಿದ ಮರಿಗಳಿಗೆ ಒಂದು ವರ್ಷ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ತರಬೇತಿ ನೀಡಲಾಗುತ್ತದೆ.
ವಿಮಾನಗಳಿಗೆ ಯಾವುದೇ ಪಕ್ಷಿಗಳು ಅಡ್ಡ ಬಾರದಂತೆ ತಡೆಯುವುದು. ವಾಯುಸೇನೆ ಕ್ಯಾಂಪ್ಗಳಲ್ಲಿ ಯಾವುದೇ ಪ್ರಾಣಿ, ಪಕ್ಷಿಗಳು ಬಾರದಂತೆ ಭದ್ರತೆ ವಹಿಸುವುದು ಸೇರಿದಂತೆ ವಾಸನೆ ಗ್ರಹಿಕೆ, ಬೇಹುಗಾರಿಕೆಗೆ ಬಳಸಲು ವಿಶೇಷ ತರಬೇತಿಗಳನ್ನು ಮುಧೋಳ ಶ್ವಾನಗಳು ಪಡೆಯುತ್ತವೆ. ಈಗಾಗಲೇ ಮುಧೋಳ ಶ್ವಾನಗಳು ಭಾರತೀಯ ಸೇನೆ, ಇಂಡೋ ಟಿಬೆಟಿಯನ್ ಬಾರ್ಡರ್ ಪೋರ್ಸ್, ಬಿಎಸ್ಎಫ್, ಸಶಸ್ತ್ರ ಸೀಮಾ ಬಲ ಸೇರಿದ್ದು, ಈಗ ಹೊಸದಾಗಿ ಏರ್ ಫೋರ್ಸ್ ಸೇವೆಗೂ ಮುಧೋಳ ಶ್ವಾನಗಳನ್ನು ಬಳಕೆ ಮಾಡಲಾಗುತ್ತದೆ.
ಇದನ್ನೂ ಓದಿ: Indian Railways: ಭಾರತೀಯ ರೈಲ್ವೇಯಿಂದ ಅತಿ ಕಡಿಮೆ ದರಕ್ಕೆ ತಿರುಪತಿ ದರ್ಶನ