Indian Railways: ಭಾರತೀಯ ರೈಲ್ವೇಯಿಂದ ಅತಿ ಕಡಿಮೆ ದರಕ್ಕೆ ತಿರುಪತಿ ದರ್ಶನ

Tirupati Balaji Darshan | Indian Railways: ಭಾರತೀಯ ರೈಲ್ವೇ ಬಾಲಾಜಿ ದರ್ಶನಕ್ಕೆ ನೀಡಿದ ವಿಶೇಷ ಕೊಡುಗೆ ಸೀಮಿತ ಅವಧಿಗೆ ಮಾತ್ರ ಲಭ್ಯವಿದ್ದು, ಎಪ್ರಿಲ್ 10, ಎಪ್ರಿಲ್ 17, ಎಪ್ರಿಲ್ 24, ಮೇ 1, ಮೇ 8, ಮೇ 15, ಮೇ 25 ಮತ್ತು ಮೇ 29ರಂದು ಮಾತ್ರ ಬಳಸಬಹುದಾಗಿದೆ.

Indian Railways: ಭಾರತೀಯ ರೈಲ್ವೇಯಿಂದ ಅತಿ ಕಡಿಮೆ ದರಕ್ಕೆ ತಿರುಪತಿ ದರ್ಶನ
ತಿರುಪತಿ ದೇವಾಲಯ
Follow us
guruganesh bhat
|

Updated on:Feb 12, 2021 | 6:11 PM

ದೆಹಲಿ: ಕೊರೊನಾ ಹೆದರಿಕೆಯಿಂದ ಎಲ್ಲಿಗೂ ಹೋಗದೇ, ಆರು ತಿಂಗಳು ಮನೆಯಲ್ಲೇ ಕುಳಿತಿದ್ದವರು ಈಗ ನಿಧಾನವಾಗಿ ಕೆಲಸಕ್ಕೂ ತೆರಳಲು ಆರಂಭಿಸಿಯಾಯಿತು. ಈಗ ಸಂಕಟ ಬಂದಾಗ ಕಾಯುವ ವೆಂಕಟರಮಣನ ದರ್ಶನ ಮಾಡುವ ಸಮಯ. ಹೀಗಾಗಿಯೇ ಭಾರತೀಯ ರೈಲ್ವೇ ತಿರುಪತಿ ತಿಮ್ಮಪ್ಪನ ದರ್ಶನಾರ್ಥಿಗಳಿಗೆ ಕಡಿಮೆ ದರದ ವಿಶೇಷ ಕೊಡುಗೆಯೊಂದನ್ನು ಘೋಷಿಸಿದೆ. ಏಳು ಬೆಟ್ಟದ ಒಡೆಯ ವೆಂಟೇಶ್ವರನಿಗೆ ಕೈಮುಗಿದು ‘ನಿನ್ನೇ ನಂಬಿ ಬಂದಿಹೆನು..ಕಾಪಾಡೋ ತಿಮ್ಮಪ್ಪಾ’ ಎಂದು ಮೊರೆಯಿಡುವ ಭಕ್ತಾದಿಗಳಿಗೆ IRCTC ಹಲವು ಬಗೆಯ ವಿಶೇಷ ಪ್ಯಾಕೇಜ್​ಗಳನ್ನು ಘೋಷಿಸಿದೆ. (Indian Railways Balaji Darshan offer to visit Tirupati in cheap rates with family details here)

ಎಷ್ಟು ಕಡಿಮೆ ಗೊತ್ತಾ? ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಪರಮ ಪಾವನ ಕ್ಷೇತ್ರ ತಿರುಪತಿಗೆ ನೀವು ಏಕಾಂಗಿಯಾಗಿ ತೆರಳಬಯಸುವಿರಿ ಎಂದರೆ ಕೇವಲ ₹ 16,000ಕ್ಕೆ IRCTC ನಿಮಗೆ ತಿರುಪತಿ ದರ್ಶನ ಮಾಡಿಸಲಿದೆ. ಇಬ್ಬರು ಒಟ್ಟಿಗೆ ದರ್ಶನ ಮಾಡಬಯಸುವುದಾದರೆ ₹ 14,200 ಪಾವತಿಸಿದರೆ ಆಯಿತು. ಮೂವರ ಜತೆ ತಿರುಪತಿ ಯಾತ್ರೆ ಮಾಡುವುದಿದ್ದರೆ IRCTC ಇನ್ನೂ ವಿಶೇಷ ಕೊಡುಗೆ ಘೋಷಿಸಿದೆ. ಕೇವಲ ₹14,100 ಪಾವತಿಸುವ ಮೂಲಕ ನೀವು ಮೂವರ ಜತೆ ತಿಮ್ಮಪ್ಪನ ದರ್ಶನ ಮಾಡಬಹುದು. ನಿಮ್ಮ ಜತೆಗೆ 5ರಿಂದ 11 ವರ್ಷದೊಳಗಿನ ಪ್ರತಿ ಮಕ್ಕಳಿಗೆ ನೀವು ಪಾವತಿಸಬೇಕಿರುವುದು ₹12,900 ಮಾತ್ರ.

ಯಾವಾಗೆಲ್ಲಾ ಇದೆ ಈ ಕೊಡುಗೆ? ಈ ವಿಶೇಷ ಕೊಡುಗೆ ಸೀಮಿತ ಅವಧಿಗೆ ಮಾತ್ರ ಲಭ್ಯ. ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 24, ಮೇ 1, ಮೇ 8, ಮೇ 15, ಮೇ 25 ಮತ್ತು ಮೇ 29ರಂದು ಮಾತ್ರ ಈ ಕೊಡುಗೆ ಲಭ್ಯವಿದೆ. ನೆನಪಿಡಿ, ಐಆರ್​ಸಿಟಿಸಿ ವೆಬ್​ಸೈಟ್​ನ ಮೂಲಕ packageCode=WMA17 ಎಂಬ ಕೋಡ್​ ಬಳಸಿ ಮಾತ್ರ ಈ ಕೊಡುಗೆಯನ್ನು ಬಳಸಬಹುದು. (Indian Railways offer to visit Tirupati in cheap rates with family here is the check date details here)

ಇದನ್ನೂ ಓದಿ: ತಿರುಪತಿಯ ರಥಸಪ್ತಮಿ ವಿಶೇಷ ದರ್ಶನಕ್ಕೆ 300 ರೂಪಾಯಿ ಟಿಕೆಟ್​: ಇದನ್ನು ಕೊಳ್ಳಲು ಹೀಗೆ ಮಾಡಿ

Published On - 1:51 pm, Fri, 12 February 21

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ