ತಿರುಪತಿಯ ರಥಸಪ್ತಮಿ ವಿಶೇಷ ದರ್ಶನಕ್ಕೆ 300 ರೂಪಾಯಿ ಟಿಕೆಟ್​: ಇದನ್ನು ಕೊಳ್ಳಲು ಹೀಗೆ ಮಾಡಿ

Tirupati Ratha Saptami 2021: ವಿಶೇಷ ದರ್ಶನ ಪಡೆಯ ಬಯಸುವವರು 300 ರೂಪಾಯಿ ನೀಡಿ ಈ ಟಿಕೆಟ್​ ಪಡೆದುಕೊಳ್ಳಬೇಕು. ಪ್ರತಿ ದಿನ 5 ಸಾವಿರದಂತೆ ಒಟ್ಟು 25 ಸಾವಿರ ಟಿಕೆಗಳನ್ನು ಮಾರಾಟ ಮಾಡಲಾಗುತ್ತಿದೆ.

ತಿರುಪತಿಯ ರಥಸಪ್ತಮಿ ವಿಶೇಷ ದರ್ಶನಕ್ಕೆ 300 ರೂಪಾಯಿ ಟಿಕೆಟ್​: ಇದನ್ನು ಕೊಳ್ಳಲು ಹೀಗೆ ಮಾಡಿ
ತಿರುಪತಿ ದೇವಾಲಯ
Follow us
ರಾಜೇಶ್ ದುಗ್ಗುಮನೆ
| Updated By: ಆಯೇಷಾ ಬಾನು

Updated on:Feb 12, 2021 | 3:02 PM

ತಿರುಪತಿ: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ವಿಶ್ವವಿಖ್ಯಾತ ತಿರುಪತಿ ತಿರುಮಲ ದೇವಾಲಯದಲ್ಲಿ ಫೆ.19ರಂದು ರಥಸಪ್ತಮಿ ವಿಶೇಷ ಪೂಜೆ ನೆರವೇರಲಿದೆ. ಈ ವೇಳೆ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದೆ. ಈ ಕಾರ್ಯಕ್ರಮಕ್ಕೆ ಟಿಟಿಡಿ ವಿಶೇಷ ಟಿಕೆಟ್​ ಬಿಡುಗಡೆ ಮಾಡುತ್ತಿದೆ.

ವಿಶೇಷ ದರ್ಶನ ಪಡೆಯ ಬಯಸುವವರು 300 ರೂಪಾಯಿ ನೀಡಿ ಈ ಟಿಕೆಟ್​ ಪಡೆದುಕೊಳ್ಳಬೇಕು. ಪ್ರತಿ ದಿನ 5 ಸಾವಿರದಂತೆ ಒಟ್ಟು 25 ಸಾವಿರ ಟಿಕೆಟ್​ಗಳನ್ನು ತಿರುಪತಿ ತಿರುಮಲ ದೇವಾಲಯದ ಆಡಳಿತ ಮಂಡಳಿ ಬಿಡುಗಡೆ ಮಾಡುತ್ತಿದೆ.

ಇನ್ನು, ಈ ಟಿಕೆಟ್​ಗಳನ್ನು ಕೊಳ್ಳುವುದು ಹೇಗೆ ಎನ್ನುವ ಬಗ್ಗೆಯೂ ಟಿಟಿಡಿ ಮಾಹಿತಿ ನೀಡಿದೆ. ಈ ಟಿಕೆಟ್​ಗಳು ಆನ್​ಲೈನ್​ನಲ್ಲಿ ಮಾತ್ರ ಲಭ್ಯವಿದ್ದು, ಆಫ್​ಲೈನ್​ನಲ್ಲಿ ಸಿಗುವುದಿಲ್ಲ. ಹೀಗಾಗಿ ನೀವು ನಾಳೆ ಬೆಳಗ್ಗೆ 11ಕ್ಕೆ ಟಿಟಿಡಿ ವೆಬ್​ಸೈಟ್​ನಲ್ಲಿ ಟಿಕೆಟ್​ ಬಿಡುಗಡೆ ಆಗುತ್ತಿದೆ. ದಿನಕ್ಕೆ ನಿಯಮಿತ ಟಿಕೆಟ್​ಗಳು ಮಾತ್ರ ಮಾರಾಟವಾಗುತ್ತಿರುವುದರಿಂದ ಮೊದಲು ಟಿಕೆಟ್​ ಬುಕ್​ ಮಾಡಿದವರಿಗೆ ಮೊದಲು ಸಿಗಲಿದೆ.

ಇದನ್ನೂ ಓದಿ: ತಿರುಪತಿಯ ವಕುಳಾಮಾತೆ ದೇಗುಲದಲ್ಲಿ ಎಂದೂ ಸಿಗದ ಚಾರಿತ್ರಿಕ ಶಾಸನ ಪತ್ತೆ

Published On - 10:05 pm, Wed, 10 February 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ