ದೆಹಲಿ ಜುಲೈ 15: ನವದೆಹಲಿಯ (New Delhi) ಬಾರಖಂಬಾ ರಸ್ತೆಯಲ್ಲಿರುವ (Barakhamba Road) ಕಟ್ಟಡದ 9 ನೇ ಮಹಡಿಯಲ್ಲಿ ಶನಿವಾರ ಬೆಂಕಿ (Fire) ಕಾಣಿಸಿಕೊಂಡಿದೆ. ಬೆಂಕಿಯನ್ನು ಹತೋಟಿಗೆ ತರಲು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿವೆ. ಹತ್ತು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದೆ ಎಂದು ದೆಹಲಿ ಅಗ್ನಿಶಾಮಕ ಸೇವಾ ಮುಖ್ಯಸ್ಥ ಅತುಲ್ ಗಾರ್ಗ್ ಮಾಹಿತಿ ನೀಡಿದ್ದಾರೆ. ಹಲವು ಕಚೇರಿಗಳನ್ನು ಹೊಂದಿರುವ ಕೇಂದ್ರ ದೆಹಲಿಯ ಪ್ರಮುಖ ಪ್ರದೇಶದ ಕಟ್ಟಡವಾಗಿದೆ ಇದು. ಕನ್ನಾಟ್ ಪ್ಲೇಸ್‌ಗೆ ಸಮೀಪವಿರುವ ಬಾರಖಂಬಾ ರಸ್ತೆಯಲ್ಲಿರುವ ಡಿಸಿಎಂ ಕಟ್ಟಡದ ಒಂಬತ್ತನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳದ ದೃಶ್ಯಗಳನ್ನುನನೋಡಿದರೆ ಒಂಬತ್ತನೇ ಮಹಡಿಯಲ್ಲಿನ ಕಿಟಕಿಗಳಿಂದ ಬೆಂಕಿ ಉರಿಯುತ್ತಿರುವುದು ಮೇಲಿನ ಮಹಡಿಯನ್ನು ಹೊಗೆಯಿಂದ ಆವರಿಸಿದ್ದನ್ನು ಕಾಣಬಹುದು.
#WATCH: Delhi | A fire broke out on the 9th floor of DCM building in Connaught Place. 10 fire engines are present on the spot. More details are awaited. pic.twitter.com/hyKOkN4sGQ
— ANI (@ANI) July 15, 2023
ಅಧಿಕಾರಿಗಳ ಪ್ರಕಾರ, ಸಂಜೆ 6.20 ಕ್ಕೆ ಬೆಂಕಿಯ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿತು. ನಂತರ ಸುಮಾರು 10 ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಫ್ರಾನ್ಸ್ ಭೇಟಿ ನೆನಪಿನಲ್ಲಿ ಉಳಿಯುವಂತದ್ದು; ಬಾಸ್ಟಿಲ್ ಡೇ ಪರೇಡ್‌ನ ವಿಡಿಯೊ ಟ್ವೀಟ್ ಮಾಡಿದ ಪ್ರಧಾನಿ ಮೋದಿ
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ವೇಳೆಗಾಗಲೇ ಭಾರೀ ಮಳೆ ಸುರಿಯಲಾರಂಭಿಸಿದೆ. ಈ ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ. ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:09 pm, Sat, 15 July 23