Rahul Gandhi: ಮಾನನಷ್ಟ ಪ್ರಕರಣದಲ್ಲಿ 2 ವರ್ಷ ಶಿಕ್ಷೆ; ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ

ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆ ನೀಡುವಂತೆ ಗುಜರಾತ್ ಹೈಕೋರ್ಟ್ ಜುಲೈ 7 ರಂದು ತನ್ನ ಮನವಿಯನ್ನು ವಜಾಗೊಳಿಸಿದ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ರಾಹುಲ್ ಗಾಂಧಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ.

Rahul Gandhi: ಮಾನನಷ್ಟ ಪ್ರಕರಣದಲ್ಲಿ 2 ವರ್ಷ ಶಿಕ್ಷೆ; ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on:Jul 15, 2023 | 5:32 PM

ಮೋದಿ ಉಪನಾಮ (Modi Surname) ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆ ನೀಡುವಂತೆ ಗುಜರಾತ್ ಹೈಕೋರ್ಟ್ (Gujarat High Court) ಜುಲೈ 7 ರಂದು ತನ್ನ ಮನವಿಯನ್ನು ವಜಾಗೊಳಿಸಿದ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ರಾಹುಲ್ ಗಾಂಧಿ (Rahul Gandhi) ಸುಪ್ರೀಂಕೋರ್ಟ್‌ (Supreme Court) ಮೆಟ್ಟಿಲೇರಿದ್ದಾರೆ. 2019 ರ ಲೋಕಸಭಾ ಪ್ರಚಾರದ ವೇಳೆ ಗಾಂಧಿಯವರು ಮಾಡಿದ ಹೇಳಿಕೆಯ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ಭಾಷಣದಲ್ಲಿ ಲಲಿತ್ ಮೋದಿ ಮತ್ತು ನೀರವ್ ಮೋದಿಯಂತಹ ವ್ಯಕ್ತಿಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಎಲ್ಲ ಕಳ್ಳರ ಸರ್​​ನೇಮ್ ಮೋದಿ ಎಂದೇ ಯಾಕಿದೆ ಎಂದು ಕೇಳಿದ್ದರು.

ರಾಹುಲ್ ಗಾಂಧಿಯವರ ಹೇಳಿಕೆಯು ಇಡೀ ಮೋದಿ ಸಮುದಾಯವನ್ನು ಅವಮಾನಿಸಿದೆ ಎಂದು ಆರೋಪಿಸಿ, ಬಿಜೆಪಿ ಶಾಸಕ ಮತ್ತು ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.ಆದರೆ ಹೇಳಿಕೆಯನ್ನು ನೀಡುವಾಗ ನನಗೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಗಾಂಧಿ ಹೇಳಿದ್ದಾರೆ.

ಮಾರ್ಚ್ 23, 2023 ರಂದು, ಸೂರತ್‌ನ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಗಾಂಧಿಯನ್ನು ದೋಷಿ ಎಂದು ಘೋಷಿಸಿ ಮತ್ತು 2 ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಿತು. ಇದರ ಬೆನ್ನಲ್ಲೇ ಅವರನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು. ಆದಾಗ್ಯೂ, ಅವರ ಶಿಕ್ಷೆಯನ್ನು ಅಮಾನತುಗೊಳಿಸಿ 30 ದಿನಗಳಲ್ಲಿ  ಮೇಲ್ಮನವಿ ಸಲ್ಲಿಸಲು ಅನುವು ಮಾಡಿಕೊಡಲು ಅವರಿಗೆ ಅದೇ ದಿನ ಜಾಮೀನು ನೀಡಲಾಯಿತು.

ಏಪ್ರಿಲ್ 3 ರಂದು, ರಾಹುಲ್ ಗಾಂಧಿ ಶಿಕ್ಷೆಯನ್ನು ಪ್ರಶ್ನಿಸಿ ಸೂರತ್ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಪ್ರಸ್ತುತ ನ್ಯಾಯಾಲಯ ಏಪ್ರಿಲ್ 20 ರಂದು ಅದನ್ನು ತಿರಸ್ಕರಿಸಿತು. ಅದೇ ವೇಳೆ ಏಪ್ರಿಲ್ 3 ರಂದು ಸೂರತ್ ಸೆಷನ್ಸ್ ನ್ಯಾಯಾಲಯವು ಅವರ ಮನವಿಯ ಇತ್ಯರ್ಥದವರೆಗೆ ಗಾಂಧಿಗೆ ಜಾಮೀನು ನೀಡಿತು.

ಗಾಂಧಿಯವರ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದ ಗುಜರಾತ್ ಹೈಕೋರ್ಟ್, ಗಾಂಧಿ ವಿರುದ್ಧದ ಪ್ರಕರಣವು ಮೋದಿ ಸಮುದಾಯಕ್ಕೆ ಸಂಬಂಧಿಸಿದೆ, ಕೇವಲ ವ್ಯಕ್ತಿಗೆ ಮಾತ್ರ ಎಂದು ಗಮನಿಸಿತು.

ಇದೆಲ್ಲದರ ನಡುವೆ ಪುಣೆ ಕೋರ್ಟ್‌ನಲ್ಲಿ  ಸಾವರ್ಕರ್ ಅವರ ಮೊಮ್ಮಗ ಸಲ್ಲಿಸಿದ ದೂರು ಸೇರಿದಂತೆ ಗಾಂಧಿ ವಿರುದ್ಧ ಬಾಕಿ ಉಳಿದಿರುವ ಇತರ ದೂರುಗಳನ್ನು ಹೈಕೋರ್ಟ್ ಗಮನಿಸಿದೆ. ಆಪಾದಿತ ಭಾಷಣದಲ್ಲಿ ಗಾಂಧಿಯವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವೀರ ಸಾವರ್ಕರ್ ವಿರುದ್ಧ ಮಾನನಷ್ಟ ಹೇಳಿಕೆಗಳನ್ನು ಬಳಸಿದ್ದಾರೆ ಎಂದು ಹೈಕೋರ್ಟ್ ಗಮನಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:06 pm, Sat, 15 July 23