ಯುದ್ಧನೌಕೆ ರಣವಿಜಯ್​​ನಲ್ಲಿ ಬೆಂಕಿ; ನೌಕಾಪಡೆಯ ನಾಲ್ವರು ಸಿಬ್ಬಂದಿಗೆ ಗಾಯ

INS Ranvijay: ಶನಿವಾರ ಸಂಜೆ 5.30ರ ಹೊತ್ತಿಗೆ ಯುದ್ಧನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನೌಕಾಪಡೆ ಸಿಬ್ಬಂದಿಯೇ ಹತೋಟಿಗೆ ತಂದಿದ್ದಾರೆ.

ಯುದ್ಧನೌಕೆ ರಣವಿಜಯ್​​ನಲ್ಲಿ ಬೆಂಕಿ; ನೌಕಾಪಡೆಯ ನಾಲ್ವರು ಸಿಬ್ಬಂದಿಗೆ ಗಾಯ
ಐಎನ್​​ಎಸ್​ ರಣವಿಜಯ್​​
Edited By:

Updated on: Oct 24, 2021 | 10:00 AM

ಭಾರತೀಯ ನೌಕಾಪಡೆಯ ಯುದ್ಧ ನೌಕೆ ಐಎನ್​ಎಸ್​ ರಣವಿಜಯ್(INS Ranvijay)​​​ನಲ್ಲಿ ಶನಿವಾರ ಸಂಜೆ ಅಗ್ನಿ ಅವಘಡ ಉಂಟಾಗಿದೆ. ವಿಶಾಖಪಟ್ಟಣಂ ಬಂದರಿನಲ್ಲಿ ನಿಲ್ಲಿಸಲಾಗಿದ್ದ ಈ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡು ನಡೆದ  ದುರ್ಘಟನೆಯಲ್ಲಿ ನಾಲ್ವರು ನೌಕಾಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ. ಬೆಂಕಿಯನ್ನು ನಂದಿಸಲು ಪ್ರಯತ್ನ ಪಟ್ಟ ವೇಳೆ ಗಾಯಗೊಂಡಿದ್ದು, ಎಲ್ಲರನ್ನೂ ನೌಕಾಪಡೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಮುಂದುವರಿದಿದೆ ಎಂದು ನೇವಿ ವಕ್ತಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.  

ಶನಿವಾರ ಸಂಜೆ 5.30ರ ಹೊತ್ತಿಗೆ ಯುದ್ಧನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನೌಕಾಪಡೆ ಸಿಬ್ಬಂದಿಯೇ ಹತೋಟಿಗೆ ತಂದಿದ್ದಾರೆ. ಇತ್ತೀಚೆಗಷ್ಟೇ ನೌಕಾ ವ್ಯಾಯಾಮದಲ್ಲಿ ಈ ನೌಕೆ ಕೂಡ ಪಾಲ್ಗೊಂಡಿತ್ತು. ಅಲ್ಲಿಂದ ಬಂದ ಬಳಿಕ ವಿಶಾಖಪಟ್ಟಣಂನ ಬಂದರಿನಲ್ಲಿ ಒಂದು ಬದಿಯಲ್ಲಿ ನಿಲ್ಲಿಸಡಲಾಗಿತ್ತು. ವ್ಯಾಯಾಮದ ಸಂದರ್ಭದಲ್ಲಿ ಯಾವುದೇ ತೊಂದರೆಯೂ ಆಗಿರಲಿಲ್ಲ. ಈಗ ಒಮ್ಮೆಲೆ ಬೆಂಕಿ ಕಾಣಿಸಿಕೊಂಡಿದ್ದಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದೂ ನೌಕಾಪಡೆ ವಕ್ತಾರ ತಿಳಿಸಿದ್ದಾರೆ.

ಇದನ್ನೂ ಓದಿ: ನಿರೂಪಣೆಯಿಂದ ಅರುಣ್​ ಸಾಗರ್​ ನಿವೃತ್ತಿ ತಗೊಂಡ್ರಾ? ‘ಕೋಟಿಗೊಬ್ಬ 3’ ವೇದಿಕೆಯಲ್ಲಿ ಕಾಲೆಳೆದ ಸುದೀಪ್​

Shocking News: ಮಹಿಳೆಯ ಕಿವಿಯೊಳಗೆ ರಾತ್ರಿಯಿಡೀ ವಾಸವಿದ್ದ ಜೇಡರ ಹುಳು; ಅಪರೂಪದ ಕೇಸ್​ ಕಂಡು ವೈದ್ಯರಿಗೇ ಶಾಕ್!