Fire accident | ದೆಹಲಿ ಓಖಲಾ ಪ್ರದೇಶದಲ್ಲಿ ಬೆಂಕಿ ಅವಘಡ: 20ಕ್ಕಿಂತಲೂ ಹೆಚ್ಚು ಗುಡಿಸಲು ಭಸ್ಮ

|

Updated on: Feb 07, 2021 | 12:21 PM

Delhi Massive fire ಕತ್ತರಿಸಿದ ಬಟ್ಟೆಗಳನ್ನು ಶೇಖರಿಸಿಟ್ಟ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಸುತ್ತಲಿನ ಪ್ರದೇಶಕ್ಕೆ ಹಬ್ಬಿತ್ತು. ಸುಮಾರು 20-22 ಗುಡಿಸಲುಗಳು ಸುಟ್ಟಿದ್ದು, ಟ್ರಕ್ ಕೂಡಾ ಬೆಂಕಿಗಾಹುತಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Fire accident | ದೆಹಲಿ ಓಖಲಾ ಪ್ರದೇಶದಲ್ಲಿ ಬೆಂಕಿ ಅವಘಡ: 20ಕ್ಕಿಂತಲೂ ಹೆಚ್ಚು ಗುಡಿಸಲು ಭಸ್ಮ
ದೆಹಲಿಯಲ್ಲಿ ಗುಡಿಸಲು ಭಸ್ಮವಾಗಿರುವುದು
Follow us on

ದೆಹಲಿ: ಇಲ್ಲಿನ ಓಖಲಾ ಎರಡನೇ ಹಂತ ಪ್ರದೇಶದ ಆಗ್ನೇಯ ಭಾಗದಲ್ಲಿ ಹೃಷಿಕೇಶ್ ನಗರ ಮೆಟ್ರೊ ಸ್ಟೇಷನ್ ಬಳಿ ಭಾನುವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು 20ಕ್ಕಿಂತಲೂ ಹೆಚ್ಚು ಗುಡಿಸಲುಗಳು ಭಸ್ಮವಾಗಿವೆ.

ಬೆಂಕಿ ಅವಘಡಕ್ಕೆ ಕಾರಣ ಏನು ಎಂಬುದು ಪತ್ತೆಯಾಗಿಲ್ಲ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಸುದ್ದಿಮೂಲಗಳು ವರದಿ ಮಾಡಿವೆ.

ಕತ್ತರಿಸಿದ ಬಟ್ಟೆಗಳನ್ನು ಶೇಖರಿಸಿಟ್ಟ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಸುತ್ತಲಿನ ಪ್ರದೇಶಕ್ಕೆ ಹಬ್ಬಿತ್ತು. ಸುಮಾರು 20-22 ಗುಡಿಸಲುಗಳು ಸುಟ್ಟಿದ್ದು, ಟ್ರಕ್ ಕೂಡಾ ಬೆಂಕಿಗಾಹುತಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ದೆಹಲಿ ಅಗ್ನಿಶಾಮಕ ದಳದ ಮಾಹಿತಿ ಪ್ರಕಾರ ತಡರಾತ್ರಿ 2.23ಕ್ಕೆ ಬೆಂಕಿ ಅವಘಡ ಸಂಭವಿಸಿದ್ದು, ತಕ್ಷಣವೇ 7 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿತ್ತು. ಒಟ್ಟು 26 ಅಗ್ನಿಶಾಮಕ ದಳ ವಾಹನಗಳು ಘಟನಾಸ್ಥಳಕ್ಕೆ ತಲುಪಿದ್ದು ಬೆಂಕಿ ನಿಯಂತ್ರಣಕ್ಕೆ ಬಂದಿದೆ.

Goregaon Studio Fire ಮುಂಬೈನಲ್ಲಿ ಭಾರೀ ಅಗ್ನಿಅವಘಡ: ಹೊತ್ತಿ ಉರಿದ ಸ್ಟುಡಿಯೋ

 

Published On - 12:20 pm, Sun, 7 February 21