ನಾಗ್ಪುರ: ಕೊರೊನಾ ಸೋಂಕಿನ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಮಹಾರಾಷ್ಟ್ರದ ನಾಗ್ಪುರ ನಗರದ ಕೊವಿಡ್ ಆಸ್ಪತ್ರೆಯೊಂದರ ತೀವ್ರ ಚಿಕಿತ್ಸಾ ಘಟದಕಲ್ಲಿ (ಐಸಿಯು) ಇಂದು ಅಗ್ನಿ ಅವಗಢ ಸಂಭವಿಸಿದ್ದು 4 ಜನ ಬಲಿಯಾಗಿದ್ದಾರೆ ಮತ್ತು 18 ಜನಕ್ಕೆ ಸುಟ್ಟ ಗಾಯಗಳಾಗಿವೆ . ಬೆಂಕಿ ಕಾಣಿಸಿಕೊಂಡ ನಂತರ ಭೀತಿಗೊಳಗಾದ ಸೋಂಕಿತರು ದಿಕ್ಕುಪಾಲಾಗಿ ಓಡತೊಡಗಿದರೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬೆಂಕಿ ಆಕಸ್ಮಿಕವು ನಗರದ ವೆಲ್ ಟ್ರೀಟ್ ಆಸ್ಪತ್ರೆಯಲ್ಲಿ ಜರುಗಿದೆಯೆಂದು ಮೂಲಗಳು ತಿಳಿಸಿವೆ.
ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಬೆಂಕಿ ಐಸಿಯುನಲ್ಲಿ ಕಾಣಸಿಕೊಂಡಿದೆ ಅದರೆ, ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಅನ್ನುವುದು ಇನ್ನೂ ಗೊತ್ತಾಗಿಲ್ಲ. ಹಾಗೆಯೇ, ದುರ್ಘಟನೆಯಲ್ಲಿ ಸಂಭವಿಸಿರಬಹುದಾದ ಸಾವು-ನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ಮಗ್ನರಾಗಿದ್ದ ಬಗ್ಗೆ ವರದಿಯಾಗಿದೆ.
ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಐಸಿಯುನಲ್ಲಿದ್ದ ಏಸಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಏತನ್ಮಧ್ಯೆ, ನಾಗ್ಪುರ್ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು ಶುಕ್ರವಾರದಂದು 6.489 ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರದಲ್ಲಿ ಇಂದು 58,993 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟದೆ. ರಾಜ್ಯದಲ್ಲಿ ಇದುವರೆಗೆ ಸೋಂಕಿಗೊಳಗಾದವರ ಸಂಖ್ಯೆ 32,88,540ಕ್ಕೆ ಏರಿದೆ. ಅವರ ಪೈಕಿ 26,95,148 ಜನ ಗುಣಮುಖರಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 45,391 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಗೆಯೇ, ಮಹಾರಾಷ್ಟ್ರದಲ್ಲಿ ಶುಕ್ರವಾರದಂದು ಕೊರೊನಾ ಸೋಂಕಿಗೆ 301 ಜನರ ಬಲಿಯಾಗಿದ್ದಾರೆ. ಪಿಡುಗಿನಿಂದಾಗಿ ಇದುವರೆಗೆ ಮರಣಿಸಿದರ ಸಂಖ್ಯೆ 57,329ಕ್ಕೆ ಏರಿದೆ. ಮಹಾರಾಷ್ಟ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಈಗ 5,34,603 ಸಕ್ರಿಯ ಪ್ರಕರಣಗಳಿವೆ
ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ 7,955 ಜನರಿಗೆ ಸೋಂಕು, 46 ಸಾವು
ಇದನ್ನೂ ಓದಿ: ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ, ಮುಂದಿನ 10 ದಿನ ತುಂಬಾ ಕಠಿಣವಾಗಿರುತ್ತದೆ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ
Published On - 11:50 pm, Fri, 9 April 21