
ತಮ್ಮ ಕಾರಿನ ಮೇಲೆ ಗುಂಡಿನ ದಾಳಿಯಾಗಿದೆ. ಮೂರು-ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (AIMIM chief Asaduddin Owaisi) ಆರೋಪಿಸಿದ್ದಾರೆ. ಉತ್ತರಪ್ರದೇಶದ ಮೀರತ್ನಲ್ಲಿರುವ ಕಿಥೌರ್ನಲ್ಲಿ ಚುನಾವಣೆ ಸಂಬಂಧ ಸಮಾರಂಭವೊಂದರಲ್ಲಿ ಪಾಲ್ಗೊಂಡು ವಾಪಸ್ ದೆಹಲಿಗೆ ತೆರಳುತ್ತಿದ್ದಾಗ, ದೆಹಲಿ-ಮೀರತ್ ಎಕ್ಸ್ಪ್ರೆಸ್ ವೇನಲ್ಲಿ, ಛಜರ್ಸಿ ಟೋಲ್ ಪ್ಲಾಜಾ ಬಳಿ ಘಟನೆ ನಡೆದಿದೆ ಎಂದು ಓವೈಸಿ ತಿಳಿಸಿದ್ದಾರೆ.
ನಾನು ಕಿಥೌರ್ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ ಮುಗಿಸಿ ವಾಪಸ್ ಹೋಗುತ್ತಿದ್ದೆ. ಛಜರ್ಸಿ ಟೋಲ್ ಪ್ಲಾಜಾ ಬಳಿ ಇಬ್ಬರು ಅಪರಿಚಿತರು ನನ್ನ ವಾಹನದ ಮೇಲೆ 3-4 ಸುತ್ತು ಗುಂಡು ಹಾರಿಸಿದರು. ಆದರೆ ಅವರು ಒಟ್ಟು 4 ಜನ ಇದ್ದರು. ಗಾಡಿಗೆ ಗುಂಡು ಬಿದ್ದಿದೆ. ಟೈಯರ್ಗೂ ಗುಂಡು ತಗುಲಿದ ಪರಿಣಾಮ ಅದು ಪಂಕ್ಚರ್ ಆಯಿತು. ಬಳಿಕ ನಾನು ಇನ್ನೊಂದು ವಾಹನದಲ್ಲಿ ದೆಹಲಿಗೆ ಹೋದೆ ಎಂದು ಓವೈಸಿ ವಿವರಿಸಿದ್ದಾಗಿ ಎಎನ್ಐ ವರದಿ ಮಾಡಿದೆ. ಅಸಾದುದ್ದೀನ್ ಓವೈಸಿ ಕೂಡ ಫೋಟೋ ಶೇರ್ ಮಾಡಿಕೊಂಡು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಎರಡು ಗುಂಡುಗಳು ಅವರ ಕಾರಿಗೆ ತಗುಲಿ, ಅಲ್ಲಿ ತೂತು ಆಗಿದೆ. ಹಾಗೇ, ಇನ್ನೆರಡು ಗುಂಡುಗಳು ಟೈಯರ್ಗೆ ತಗುಲಿದೆ ಎಂದು ಹೇಳಲಾಗಿದೆ.
ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ನಡೆದ ದಾಳಿಯನ್ನು ಉತ್ತರ ಪ್ರದೇಶ ಸಚಿವ ಮೋಹ್ಸಿನ್ ರಾಝಾ ಖಂಡಿಸಿದ್ದಾರೆ. ಇದೊಂದು ತೀವ್ರ ಅಹಿತಕರ ಘಟನೆಯಾಗಿದೆ. ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಬಂಧಿಸಲಾಗುವುದು ಎಂದಿದ್ದಾರೆ. ಹಾಗೇ, ಬಿಜೆಪಿ ವಕ್ತಾರ ಅನಿಲಾ ಸಿಂಗ್ ಕೂಡ ಘಟನೆ ನಿಜಕ್ಕೂ ಶಾಕಿಂಗ್ ಆಗಿದೆ ಎಂದಿದ್ದಾರೆ. ಈ ದಾಳಿ ನಡೆಸಿದವರನ್ನು ಜೈಲಿಗೆ ಕಳಿಸದೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಫೆ.10ರಿಂದ ಉತ್ತರಪ್ರದೇಶ ಚುನಾವಣೆ ನಿಮಿತ್ತ ಅವರು ಇಂದು ಮೀರತ್ಗೆ ಪ್ರಚಾರಕ್ಕೆ ತೆರಳಿ, ಅಲ್ಲಿ ಸಾರ್ವಜನಿಕ ಸಭೆ ನಡೆಸಿದ್ದಾರೆ.
ಇದನ್ನೂ ಓದಿ: ಕಂಠೀರವ ಸ್ಟುಡಿಯೋ ಹೊರಗೆ ‘ಪುಷ್ಪ’ ಘೋಷಣೆ; ಅಲ್ಲು ಅರ್ಜುನ್ ನೋಡೋಕೆ ಅಭಿಮಾನಿಗಳ ದಂಡು
Published On - 6:34 pm, Thu, 3 February 22