Delta Plus Variant ಭಾರತದಲ್ಲಿ ‘ಡೆಲ್ಟಾ ಪ್ಲಸ್’ ದಾಳಿಗೆ ಮೊದಲ ಬಲಿ..

ರೂಪಾಂತರಿ ವೈರಸ್ ಡೆಲ್ಟಾ ಪ್ಲಸ್ ದಾಳಿಗೆ ಭಾರತದಲ್ಲಿ ಮೊದಲ ಬಲಿಯಾಗಿದೆ. ಜಿನೋಮ್ ಟೆಸ್ಟ್ ವರದಿ ಬರುವುದಕ್ಕೂ ಮುನ್ನವೇ ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್ ಸೋಂಕಿಗೆ ಮಹಿಳೆ ಮೃತಪಟ್ಟಿದ್ದಾರೆ.

Delta Plus Variant ಭಾರತದಲ್ಲಿ ‘ಡೆಲ್ಟಾ ಪ್ಲಸ್’ ದಾಳಿಗೆ ಮೊದಲ ಬಲಿ..
ಸಾಂದರ್ಭಿಕ ಚಿತ್ರ
Edited By:

Updated on: Jun 24, 2021 | 12:55 PM

ದೆಹಲಿ: ರೂಪಾಂತರಿ ವೈರಸ್ ಡೆಲ್ಟಾ ಪ್ಲಸ್ ದಾಳಿಗೆ ಭಾರತದಲ್ಲಿ ಮೊದಲ ಬಲಿಯಾಗಿದೆ. ಜಿನೋಮ್ ಟೆಸ್ಟ್ ವರದಿ ಬರುವುದಕ್ಕೂ ಮುನ್ನವೇ ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್ ಸೋಂಕಿಗೆ ಮಹಿಳೆ ಮೃತಪಟ್ಟಿದ್ದಾರೆ. ಈ ಬಗ್ಗೆ ಜೂನ್ 23ರಂದು ಬುಧವಾರ ವರದಿಯಾಗಿದೆ. ಉಜ್ಜೈನಿಯಲ್ಲಿ ಸಂಗ್ರಹಿಸಿರುವ ಸ್ಯಾಂಪಲ್ನಲ್ಲಿ ಕೊರೊನಾ ಸೋಂಕಿತೆಗೆ ಡೆಲ್ಟಾ ಪ್ಲಸ್ ಪ್ರಭೇದ ತಗುಲಿರುವುದು ಬಹಿರಂಗವಾಗಿದೆ.

ಭಾರತದಲ್ಲಿ ಎಷ್ಟು ಕೇಸ್ ಬಂದಿವೆ?
ಭಾರತದಲ್ಲಿ ಇದುವರೆಗೂ 40 ಡೆಲ್ಟಾ ಪ್ಲಸ್ ಪ್ರಭೇದದ ಕೇಸ್ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ 21, ಮಧ್ಯಪ್ರದೇಶದಲ್ಲಿ 5, ಕೇರಳದಲ್ಲಿ 3, ಆಂಧ್ರ, ಜಮ್ಮು ಕಾಶ್ಮೀರದಲ್ಲಿ ತಲಾ 1 ಕೇಸ್ ಪತ್ತೆಯಾಗಿವೆ. ಹಾಗೂ ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಪತ್ತೆಯಾಗಿವೆ.

ಡೆಲ್ಟಾ ಪ್ಲಸ್ ನಿಜಕ್ಕೂ ಎಷ್ಟು ಆತಂಕಕಾರಿ? ಗುಣಲಕ್ಷಣಗಳೇನು?
ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಅನ್ನು ಕೇಂದ್ರ ಸರ್ಕಾರ ಕಳವಳಕಾರಿ ಪ್ರಭೇದ ಎಂದು ಹೇಳಿದೆ. ಕಳವಳಕಾರಿ ಪ್ರಭೇದದ ವೈರಸ್ ಮೇಲೆ ತೀವ್ರ ನಿಗಾ ವಹಿಸಲಾಗುತ್ತೆ. ಡೆಲ್ಟಾ ಪ್ಲಸ್ ಪ್ರಭೇದ ವೇಗವಾಗಿ ಹರಡುತ್ತೆ ಎಂದು ಕೇಂದ್ರ ಹೇಳಿದೆ. ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಶ್ವಾಸಕೋಶಕ್ಕೆ ಹಾನಿ ಮಾಡಬಲ್ಲದು. ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ವಿರುದ್ಧ ಮಾನೋಕ್ಲೋನಲ್ ಆ್ಯಂಟಿಬಾಡಿ ಕಾಕ್ ಟೈಲ್ ಪರಿಣಾಮಕಾರಿ ಅಲ್ಲ. ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ದೇಹದಲ್ಲಿರುವ ವೈರಸ್ ವಿರುದ್ಧದ ಪ್ರತಿಕಾಯಗಳು, ಲಸಿಕೆಯಿಂದ ತಪ್ಪಿಸಿಕೊಳ್ಳಬಹುದು ಎಂದು ತಿಳಿಸಿದೆ.

ಇದನ್ನೂ ಓದಿ: Delta Plus Variant ಹಿಂದಿನ ರೂಪಾಂತರಿಗೆ ಹೋಲಿಸಿದರೆ ಡೆಲ್ಟಾ ಪ್ಲಸ್ ವೈರಸ್ ಹೆಚ್ಚು ಸಾಂಕ್ರಾಮಿಕ: ಡಾ.ರಣದೀಪ್ ಗುಲೇರಿಯಾ