Delta Plus Variant ಹಿಂದಿನ ರೂಪಾಂತರಿಗೆ ಹೋಲಿಸಿದರೆ ಡೆಲ್ಟಾ ಪ್ಲಸ್ ವೈರಸ್ ಹೆಚ್ಚು ಸಾಂಕ್ರಾಮಿಕ: ಡಾ.ರಣದೀಪ್ ಗುಲೇರಿಯಾ
Covid Delta Plus: ಪ್ರಸ್ತುತ, ನಾವು ಕೊವಿಡ್‌ನ ಡೆಲ್ಟಾ ಪ್ಲಸ್ ರೂಪಾಂತರದ ಸುಮಾರು 42 ಪ್ರಕರಣಗಳನ್ನು ಮಾತ್ರ ಹೊಂದಿದ್ದೇವೆ. ಆದ್ದರಿಂದ, ಡೆಲ್ಟಾ ಪ್ಲಸ್ ರೂಪಾಂತರವು ಭಾರತದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳುವುದು ಕಷ್ಟ.
ದೆಹಲಿ: ಡೆಲ್ಟಾ ಪ್ಲಸ್ ಕಾಳಜಿಯ ರೂಪಾಂತರವಾಗಿ ಮಾರ್ಪಟ್ಟಿದೆಯೇ ಎಂಬುದರ ಬಗ್ಗೆ ಏಮ್ಸ್ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ ಮಾತನಾಡಿದ್ದು, ಸರಿಯಾದ ಕೋವಿಡ್ ಪ್ರೋಟೋಕಾಲ್‌ಗಳ ಮೂಲಕ ಹೊಸ ರೂಪಾಂತರದ ಹರಡುವಿಕೆಯನ್ನು ಪರಿಶೀಲಿಸಬಹುದು ಎಂದು ಹೇಳಿದರು. ಡೆಲ್ಟಾ ಪ್ಲಸ್ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಜತೆ ಮಾತನಾಡಿದ ಗುಲೇರಿಯಾ “ಕುತೂಹಕಾರಿ ರೂಪಾಂತರಿ ಮತ್ತು ಕಾಳಜಿಯ ರೂಪಾಂತರಿ ನಡುವಿನ ವ್ಯತ್ಯಾಸವನ್ನು ನಾವು ಅರ್ಥಮಾಡಿಕೊಳ್ಳಬೇಕು. ವೈರಸ್ ರೂಪಾಂತರಗೊಳ್ಳುವುದನ್ನು ಮುಂದುವರಿಸುತ್ತದೆ, ಇದು ತಿಂಗಳಿಗೆ ಎರಡು ಬಾರಿ ರೂಪಾಂತರಗೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಅದು ರೂಪಾಂತರಗೊಂಡಾಗಲೆಲ್ಲಾ ಅದು ಚಿಂತೆಗೀಡಾಗುವ ವಿಷಯವಲ್ಲ. ಹಿಂದಿನ ರೂಪಾಂತರಿಗೆ ಹೋಲಿಸಿದರೆ ಈ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದೆ. ವೈರಸ್ನಿಂದಾಗಿ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು ಮತ್ತು ಹೆಚ್ಚು ಜನರ ಸಾವಿಗೆ ಕಾರಣವಾದರೆ, ಅದು ಕಾಳಜಿಯ ರೂಪಾಂತರವಾಗುತ್ತದೆ.
ಪ್ರಸ್ತುತ, ನಾವು ಕೊವಿಡ್‌ನ ಡೆಲ್ಟಾ ಪ್ಲಸ್ ರೂಪಾಂತರದ ಸುಮಾರು 42 ಪ್ರಕರಣಗಳನ್ನು ಮಾತ್ರ ಹೊಂದಿದ್ದೇವೆ. ಆದ್ದರಿಂದ, ಡೆಲ್ಟಾ ಪ್ಲಸ್ ರೂಪಾಂತರವು ಭಾರತದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳುವುದು ಕಷ್ಟ. ಆದರೆ ನೋಂದಾಯಿತ ಪ್ರಕರಣಗಳಲ್ಲಿನ ಯಾವುದೇ ಉಲ್ಬಣವನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ನಾವು ಆಕ್ರಮಣಶೀಲವಾಗಿ ಪರೀಕ್ಷಿಸುವ, ಟ್ರ್ಯಾಕ್ ಮಾಡುವ ಮತ್ತು ಕಂಟೈನ್ಮೆಂಟ್ ತಂತ್ರಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Delta Plus Variant ಕೊರೊನಾ ಲಸಿಕೆಗಿದೆಯಂತೆ ಡೆಲ್ಟಾ ಪ್ಲಸ್ ಓಡಿಸುವ ಶಕ್ತಿ.. ಲಸಿಕೆ ಪಡೆದ್ರೆ ಸೋಂಕಿನಿಂದ ಮುಕ್ತ
ಇದನ್ನೂ ಓದಿ: Coronavirus cases in India: ದೇಶದಲ್ಲಿ 54,336 ಹೊಸ ಕೊವಿಡ್ ಪ್ರಕರಣ ಪತ್ತೆ, 1321 ಮಂದಿ ಸಾವು