Delta Plus Variant ಕೊರೊನಾ ಲಸಿಕೆಗಿದೆಯಂತೆ ಡೆಲ್ಟಾ ಪ್ಲಸ್ ಓಡಿಸುವ ಶಕ್ತಿ.. ಲಸಿಕೆ ಪಡೆದ್ರೆ ಸೋಂಕಿನಿಂದ ಮುಕ್ತ

ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆಯೇ ಡೆಲ್ಟಾ ಪ್ಲಸ್ಗೂ ಮದ್ದು. 2 ಲಸಿಕೆಗಳು ರೋಗದ ತೀವ್ರ ಲಕ್ಷಣಗಳನ್ನು ತಡೆಯಲಿವೆ. ಈ ಲಸಿಕೆ ಹಾಕಿಸಿಕೊಂಡವರಲ್ಲಿ ಡೆಲ್ಟಾ ಪ್ಲಸ್ ಕಾಣಿಸಿಕೊಂಡರೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.

Delta Plus Variant ಕೊರೊನಾ ಲಸಿಕೆಗಿದೆಯಂತೆ ಡೆಲ್ಟಾ ಪ್ಲಸ್ ಓಡಿಸುವ ಶಕ್ತಿ.. ಲಸಿಕೆ ಪಡೆದ್ರೆ ಸೋಂಕಿನಿಂದ ಮುಕ್ತ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 24, 2021 | 9:54 AM

ಬೆಂಗಳೂರು: ಭಾರತದಲ್ಲಿ ಕೊರೊನಾ ಎರಡನೇ ಅಲೆ ಕಡಿಮೆಯಾದ ಬಳಿಕ ರೂಪ ಬದಲಿಸಿ ಡೆಲ್ಟಾ ಪ್ಲಸ್ ಅವತಾರದಲ್ಲಿ ಕಾಣಿಸಿಕೊಂಡಿರೋ ಕೊರೊನಾ ಬಗ್ಗೆ ಭಾರಿ ಚರ್ಚೆ ನಡೀತಿದೆ. ದೇಶದಲ್ಲಿ ಏಪ್ರಿಲ್ನಲ್ಲೇ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಇತ್ತು ಅನ್ನೋದು ಜಿನೋಮ್ ಸೀಕ್ವೇನ್ಸಿಂಗ್ನಿಂದ ದೃಢಪಟ್ಟಿದೆ. ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಸೋಂಕಿದ್ರೂ ಈಗಾಗಲೇ ಹಲವರು ಗುಣಮುಖರಾಗಿದ್ದಾರೆ. ಡೆಲ್ಟಾ ಪ್ಲಸ್ಗಾಗಿ ಮದ್ದು ಕಂಡು ಹಿಡಿಯದಿದ್ದರೂ ಈ ಸೋಂಕಿನಿಂದ ಗುಣಮುಖರಾಗಬಹುದು. ಕೊರೊನಾ ಡೆಲ್ಟಾ ಪ್ಲಸ್ ನಿಯಂತ್ರಣಕ್ಕೂ ಲಸಿಕೆ ಮುಲಾಮಾಗುತ್ತಿದೆ.

ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆಯೇ ಡೆಲ್ಟಾ ಪ್ಲಸ್ಗೂ ಮದ್ದು. 2 ಲಸಿಕೆಗಳು ರೋಗದ ತೀವ್ರ ಲಕ್ಷಣಗಳನ್ನು ತಡೆಯಲಿವೆ. ಈ ಲಸಿಕೆ ಹಾಕಿಸಿಕೊಂಡವರಲ್ಲಿ ಡೆಲ್ಟಾ ಪ್ಲಸ್ ಕಾಣಿಸಿಕೊಂಡರೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಕೊವಿಡ್ ಲಸಿಕೆ ಹಾಕಿಸಿಕೊಂಡರೆ ಆಸ್ಪತ್ರೆಗೆ ದಾಖಲಾಗುವುದನ್ನ ತಡೆಯಬಹುದು ಎಂಬ ಮಾಹಿತಿ ಬಹಿರಂಗವಾಗಿದೆ. 1 ಡೋಸ್ ಲಸಿಕೆ ಪಡೆದ್ರೂ ರೋಗನಿರೋಧಕ ಶಕ್ತಿ ವೃದ್ಧಿಸುತ್ತೆ. ಲಸಿಕೆ ಪಡೆದವರಲ್ಲಿ ಡೆಲ್ಟಾ ಪ್ಲಸ್ ಕಾಣಿಸಿಕೊಂಡ್ರೂ ಬೇಗ ಚೇತರಿಕೆ ಕಾಣಬಹುದು. ಹೀಗಾಗಿ ದೇಶದಲ್ಲಿ ಡೆಲ್ಟಾ ಪ್ಲಸ್ ನಿಯಂತ್ರಿಸಲು ಎಲ್ಲರೂ ಲಸಿಕೆ ಪಡೆಯಬೇಕು.

ಟೆಸ್ಟಿಂಗ್, ಜಿನೋಮ್ ಅನುಕ್ರಮ ಸಕ್ರಿಯವಾಗಿ ಮಾಡಬೇಕು. ಕೊವಿಡ್ ನಿಯಮವನ್ನು ಜನ ಕಡ್ಡಾಯವಾಗಿ ಪಾಲಿಸಬೇಕು. ಜನದಟ್ಟಣೆ ಇರುವ ಕಡೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಎಲ್ಲಾ ವರ್ಗದ ಜನರಿಗೂ ಆದಷ್ಟು ಬೇಗ ಲಸಿಕೆ ಹಾಕಬೇಕು. ಸಿರೋ-ಸಮೀಕ್ಷೆ ನಡೆಸಿ ಸೋಂಕಿತರನ್ನು ಪ್ರತ್ಯೇಕಿಸಿ ಲಸಿಕೆ ಹಾಕಬೇಕು. ಡೆಲ್ಟಾ ಪ್ಲಸ್ ನಿಯ್ರಂತಿಸಲು ತಜ್ಞರ ಮಾಹಿತಿ ಪಡೆಯಬೇಕು. ಧೈರ್ಯ ಕಳೆದುಕೊಳ್ಳದೆ ರೋಗದ ವಿರುದ್ಧ ಹೋರಾಡಬೇಕು. ಆಗ ಮಾತ್ರ ಈ ಸೋಂಕಿನಿಂದ ಪಾರಾಗಲು ಸಾಧ್ಯವಾಗುತ್ತೆ. ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ನೀಡಿರುವ ದೇಶಗಳಲ್ಲಿ ಡೆಲ್ಟಾ ಪ್ಲಸ್ ಕ್ಷೀಣಿಸಿದೆ. ಅಂತಹ ದೇಶಗಳಲ್ಲಿ ಕೊವಿಡ್ನಿಂದ ಸಾವಿನ ಸಂಖ್ಯೆ ಕ್ಷೀಣಿಸಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಇಳಿಮುಖವಾಗಿದೆ.

ಭಾರತದಲ್ಲಿ ಸದ್ಯ 40 ಡೆಲ್ಟಾ ಪ್ಲಸ್ ವೈರಸ್ ಸೋಂಕಿತರು ಪತ್ತೆ ಮಹಾರಾಷ್ಟ್ರವೊಂದರಲ್ಲೇ 21 ಡೆಲ್ಟಾ ಪ್ಲಸ್ ಸೋಂಕಿತರಿದ್ದಾರೆ. ಮಹಾರಾಷ್ಟ್ರದಲ್ಲಿ ಏಪ್ರಿಲ್ 5ರಂದೇ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಇತ್ತು ಅನ್ನೋದು ಜಿನೋಮ್ ಸೀಕ್ವೆನ್ಸಿಂಗ್ನಿಂದ ದೃಢಪಟ್ಟಿದೆ. ಹೀಗಾಗಿ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಡೆಲ್ಟಾ ಪ್ಲಸ್ ಪ್ರಭೇದ ಹರಡಿಲ್ಲ ಅನ್ನೋದು ಗೊತ್ತಾಗ್ತಿದೆ. ಕೆಲ ರಾಜ್ಯಗಳಲ್ಲಿ ಕಳೆದ 2 ತಿಂಗಳಿನಿಂದ ಡೆಲ್ಟಾ ಪ್ಲಸ್ ವೈರಸ್ ಇದೆ ಅಂತಾ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಏಪ್ರಿಲ್ 5 ಮತ್ತು ಏಪ್ರಿಲ್ 15ರಂದು ಮಹಾರಾಷ್ಟ್ರದಲ್ಲಿ ಇಬ್ಬರು ಡೆಲ್ಟಾ ಪ್ಲಸ್ ಸೋಂಕಿತರು ಪತ್ತೆಯಾಗಿದ್ರು. ಥಾಣೆಯ ಒಬ್ಬ ನಿವಾಸಿ, ಮುಂಬೈನ 78 ವರ್ಷದ ಮತ್ತೊಬ್ಬ ವ್ಯಕ್ತಿಗೆ ಡೆಲ್ಟಾ ಪ್ಲಸ್ ವೈರಸ್ ಸೋಂಕಿತ್ತು. ಇವರು ಕೊರೊನಾ ಲಸಿಕೆ ಹಾಕಿಸಿಕೊಂಡಿರಲಿಲ್ಲ. ಮುಂಬೈ ಪಾಲಿಕೆ ಅಧಿಕಾರಿಗಳ ಪ್ರಕಾರ, 78 ವರ್ಷದ ವ್ಯಕ್ತಿ ಕೊರೊನಾದಿಂದ ಗುಣಮುಖ ಆಗಿದ್ದಾರೆ. ಈ ವ್ಯಕ್ತಿಯ ಕುಟುಂಬದ ಮತ್ತೊಬ್ಬರಿಗೂ ಕೊರೊನಾ ಸೋಂಕು ತಗುಲಿತ್ತು. ಅವರು ಈಗಾಗಲೇ ಕೊರೊನಾದಿಂದ ಗುಣಮುಖ ಆಗಿದ್ದಾರೆ.

ಮಹಾರಾಷ್ಟ್ರದ ಆರು ಜಿಲ್ಲೆಗಳಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿತ್ತು. ರತ್ನಗಿರಿ ಜಿಲ್ಲೆಯಲ್ಲಿ 9, ಜಲಗಾಂವ್ ಜಿಲ್ಲೆಯಲ್ಲಿ 7 ಪ್ರಕರಣಗಳು ಪತ್ತೆಯಾಗಿವೆ. ಬಹುತೇಕರಿಗೆ ಮೇ ತಿಂಗಳಿನಲ್ಲಿ ಕೊರೊನಾ ಸೋಂಕು ತಗುಲಿದ್ದು, ಈಗಾಗಲೇ ಗುಣಮುಖರಾಗಿದ್ದಾರೆ. ಡೆಲ್ಟಾ ಪ್ಲಸ್ ವೈರಸ್ ಸೋಂಕಿದ್ದವರ ಮನೆ ಬಳಿ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಅವರ ಸಂಪರ್ಕದಲ್ಲಿದ್ದವರು, ನೆರೆಹೊರೆಯವರ ಕೊರೊನಾ ಸ್ಯಾಂಪಲ್ ಪರೀಕ್ಷೆ ಮಾಡಲಾಗುತ್ತಿದೆ. ಜಲಗಾಂವ್ ಜಿಲ್ಲೆಯಲ್ಲಿ ಜೂನ್ 12, 13 ರಂದು ಕ್ಯಾಂಪ್ ನಡೆಸಿ, 165 ಮಂದಿಯ ಕೊರೊನಾ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಇಬ್ಬರಿಗೆ ಮಾತ್ರ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಆದರೆ, ಇಬ್ಬರಿಗೂ ಕೊರೊನಾ ರೋಗಲಕ್ಷಣಗಳಿಲ್ಲ.

ಜಲಗಾಂವ್ ಜಿಲ್ಲೆಯ ಏಳು ಮಂದಿ ಡೆಲ್ಟಾ ಪ್ಲಸ್ ಸೋಂಕಿತರು ವಿಚಖೇಡಾ ಅನ್ನೋ ಒಂದೇ ಗ್ರಾಮದವರು. ಈ ಗ್ರಾಮದಲ್ಲಿ 1,200ಜನಸಂಖ್ಯೆ ಇದೆ. ಮೇ 5 ರಂದು ಏಳು ಮಂದಿಗೆ ಟೆಸ್ಟಿಂಗ್ ನಡೆಸಿದಾಗ ಕೊರೊನಾ ಪಾಸಿಟಿವ್ ಬಂದಿತ್ತು. 60 ವರ್ಷದ ಎಲೆಕ್ಟ್ರಿಷಿಯನ್ಗೆ ಡೆಲ್ಟಾ ಪ್ಲಸ್ ಸೋಂಕಿರೋದು ದೃಢಪಟ್ಟಿತ್ತು.

ಸಿಂಧುದುರ್ಗ ಜಿಲ್ಲೆಯಲ್ಲಿ ಶಿಕ್ಷಕರೊಬ್ಬರಿಗೆ ಡೆಲ್ಟಾ ಪ್ಲಸ್ ಸೋಂಕಿರೋದು ಜಿನೋಮ್ ಸಿಕ್ವೇನ್ಸಿಂಗ್ನಿಂದ ದೃಢಪಟ್ಟಿದೆ. ಮೇ.22 ರಂದು ಕೊರೊನಾ ಪಾಸಿಟಿವ್ ಬಂದಿತ್ತು. ಆದರೆ, ಶಿಕ್ಷಕ ಈಗಾಗಲೇ ಕೊರೊನಾದಿಂದ ಗುಣಮುಖ ಆಗಿದ್ದಾರೆ. ಶಿಕ್ಷಕರ ಸಂಪರ್ಕದಲ್ಲಿದ್ದ ಮೂವರು ಹೈ ರಿಸ್ಕ್ ವ್ಯಕ್ತಿಗಳಿಗೆ ಕೊರೊನಾ ಸೋಂಕು ತಗುಲಿತ್ತು. ಎಲ್ಲರೂ ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖ ಆಗಿದ್ದಾರೆ. ಒಟ್ನಲ್ಲಿ ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ವೈರಸ್ ತಗುಲಿದ್ದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ. ಜೊತೆಗೆ ಕೊರೊನಾ ವೈರಸ್ ಕೂಡ ವೇಗವಾಗಿ ಹರಡಿಲ್ಲ. ಡೆಲ್ಟಾ ಪ್ಲಸ್ ವೈರಸ್ ಸೋಂಕಿದವರು ಕೂಡ ಕೊರೊನಾದಿಂದ ಗುಣಮುಖ ಆಗಿದ್ದಾರೆ. ಹೀಗಾಗಿ ಡೆಲ್ಟಾ ಪ್ಲಸ್ ಬಗ್ಗೆ ಬಾರಿ ಭಯ, ಆತಂಕ ಬೇಡ. ಜನ ತಮ್ಮ ಎಚ್ಚರಿಕೆಯಲ್ಲಿ ಇರಬೇಕು ಲಸಿಕೆ ಪಡೆಯಬೇಕು.

ಇದನ್ನೂ ಓದಿ: Delta Plus Variant ಮೈಸೂರಿನಲ್ಲಿ ಮತ್ತೆ 3 ಡೆಲ್ಟಾ ಪ್ಲಸ್ ಕೇಸ್‌ಗಳು ಪತ್ತೆ, ಆತಂಕ ಹೆಚ್ಚಿಸುತ್ತಿದೆ ಈ ವೈರಸ್

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್