Mann Ki Baat: ‘ಮೊದಲು ಎಲ್ಲರಿಗೂ ಲಸಿಕೆ ಕೊಡಿ..ನಂತರ ಮನ್​ ಕೀ ಬಾತ್​ನಲ್ಲಿ ಮಾತಾಡಿ’-ರಾಹುಲ್​ ಗಾಂಧಿ

ಮನ್​ ಕೀ ಬಾತ್​ ಪ್ರಧಾನಿ ಮೋದಿಯವರ ತಿಂಗಳ ರೇಡಿಯೋ ಕಾರ್ಯಕ್ರಮವಾಗಿದೆ. ಪ್ರತಿ ತಿಂಗಳ ಕೊನೇ ಭಾನುವಾರದಂದು ಈ ಕಾರ್ಯಕ್ರಮದ ಮೂಲಕ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ. ಇಲ್ಲಿ ರಾಜಕೀಯ ಹೊರತು ಪಡಿಸಿ ಬೇರೆ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಾರೆ.

Mann Ki Baat: ‘ಮೊದಲು ಎಲ್ಲರಿಗೂ ಲಸಿಕೆ ಕೊಡಿ..ನಂತರ ಮನ್​ ಕೀ ಬಾತ್​ನಲ್ಲಿ ಮಾತಾಡಿ’-ರಾಹುಲ್​ ಗಾಂಧಿ
ರಾಹುಲ್ ಗಾಂಧಿ
Edited By:

Updated on: Jun 27, 2021 | 12:47 PM

ಪ್ರತಿಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರು ಮನ್​ ಕೀ ಬಾತ್​ ನಡೆಸಿದ ಕೂಡಲೇ ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ ಅವರಿಗೆ ತಿರುಗೇಟು ನೀಡುತ್ತಾರೆ. ಪ್ರಧಾನಿ ಮೋದಿಯವರ ಮನ್​ ಕೀ ಬಾತ್​​ ಬಗ್ಗೆ ವ್ಯಂಗ್ಯವಾಡುತ್ತಾರೆ. ಹಾಗೇ ಇಂದಿನ ಮನ್​ ಕೀ ಬಾತ್​​ನ್ನೂ ಕೂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮನ್​ ಕೀ ಬಾತ್​ ಮುಗಿಯುತ್ತಿದ್ದಂತೆ ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ ರಾಹುಲ್​ ಗಾಂಧಿ, ಮೊದಲು ಈ ದೇಶದ ಪ್ರತಿಯೊಬ್ಬರಿಗೂ ಕೊವಿಡ್ 19 ಲಸಿಕೆ ತಲುಪುವಂತೆ ಮಾಡಿ. ಬಳಿಕ ನಿಮ್ಮ ಮನ್​ ಕೀ ಬಾತ್​ ನಡೆಸಿ ಎಂದು ಹೇಳಿದ್ದಾರೆ. ಹಾಗೇ, ಕೊವಿಡ್​ 19 ಲಸಿಕೆ ಬಗೆಗಿನ ಸತ್ಯಗಳು ಎಂಬ, ಗ್ರಾಪ್​​ ಚಾರ್ಟ್​ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಕೊರೊನಾ ಲಸಿಕೆ ನೀಡಿದ ಡಾಟಾ ಉಲ್ಲೇಖವಾಗಿದೆ.

ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದೇ ಮೊದಲಿನಿಂದಲೂ ಹೇಳುತ್ತಿರುವ ರಾಹುಲ್​ ಗಾಂಧಿ, ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದ ಕೊವಿಡ್​-19 ಸಂದರ್ಭ ನಿರ್ವಹಣೆ ಬಗ್ಗೆ ಶ್ವೇತಪತ್ರವನ್ನೂ ಹೊರಡಿಸಿದ್ದರು. ಎರಡನೇ ಅಲೆಯಲ್ಲಿ ಸೋಂಕು ನಿಯಂತ್ರಣದ ಬಗ್ಗೆ ಸರಿಯಾಗಿ ಕ್ರಮ ಕೈಗೊಳ್ಳದೆ ಇದ್ದರೆ, ಮೂರನೇ ಅಲೆ ಇನ್ನಷ್ಟು ಭೀಕರವಾಗಿರಲಿದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಮನ್​ ಕೀ ಬಾತ್​ ಪ್ರಧಾನಿ ಮೋದಿಯವರ ತಿಂಗಳ ರೇಡಿಯೋ ಕಾರ್ಯಕ್ರಮವಾಗಿದೆ. ಪ್ರತಿ ತಿಂಗಳ ಕೊನೇ ಭಾನುವಾರದಂದು ಈ ಕಾರ್ಯಕ್ರಮದ ಮೂಲಕ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ. ಇಲ್ಲಿ ರಾಜಕೀಯ ಹೊರತು ಪಡಿಸಿ ಬೇರೆ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಸಾಧಕರನ್ನು ಗುರುತಿಸಿ ಶ್ಲಾಘಿಸುತ್ತಾರೆ. ಹಾಗೇ ಇಂದೂ ಸಹ ಮೋದಿಯವರು ದೇಶದ ಕೊರೊನಾ ಲಸಿಕೆ ಅಭಿಯಾನದ ಬಗ್ಗೆ ಮಾತನಾಡಿದ್ದಾರೆ. ಜೂ.21ರಂದು ಒಂದೇ ದಿನ 88 ಲಕ್ಷ ಜನರಿಗೆ ಲಸಿಕೆ ನೀಡಿ, ದಾಖಲೆ ಬರೆದಿದ್ದನ್ನು ಶ್ಲಾಘಿಸಿದರು. ನಂತರ ಇದೇ ವಿಚಾರ ಇಟ್ಟುಕೊಂಡು ರಾಹುಲ್​ ಗಾಂಧಿ ಟೀಕೆ ಮಾಡಿದರು.

ಇದನ್ನೂ ಓದಿ: ಉತ್ತರಪ್ರದೇಶ, ಉತ್ತರಾಖಂಡ ಚುನಾವಣೆಗಳಲ್ಲಿ ಮೈತ್ರಿ ಇಲ್ಲದೆ ಕಣಕ್ಕಿಳಿಯಲಿದೆ ಬಿಎಸ್​​ಪಿ: ಮಾಯಾವತಿ