ರೈತರ ನೆರವಿಗೂ ಬಂತು ಎಐ ತಂತ್ರಜ್ಞಾನ: ಕೃಷಿ ಸುದ್ದಿ ಮೇಲ್ವಿಚಾರಣೆ, ವಿಶ್ಲೇಷಣೆಗೆ ‘ಕೃಷಿ 24/7’
ಕೃತಕ ಬುದ್ಧಿಮತ್ತೆ ಆಧಾರಿತ ‘ಕೃಷಿ 24/7’, ಕೃಷಿ ಸಂಬಂಧಿತ ಸುದ್ದಿಗಳನ್ನು ಗುರುತಿಸುವುದು, ಸಮಯಕ್ಕೆ ಅನುಗುಣವಾಗಿ ಎಚ್ಚರಿಕೆ ಸಂದೇಶಗಳನ್ನು ಕಳುಹಿಸುವುದು, ರೈತರ ಹಿತಾಸಕ್ತಿಗೆ ಸಂಬಂಧಿಸಿದ ನಿಲುವುಗಳನ್ನು ತೆಗೆದುಕೊಳ್ಳುವುದು, ಸುಸ್ಥಿರ ಕೃಷಿ ಅಭಿವೃದ್ಧಿಗೆ ಪ್ರೋತ್ಸಾಹ ಹಾಗೂ ಡಿಸಿಷನ್ ಮೇಕಿಂಗ್ ವಿಚಾರದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಗೆ ನೆರವಾಗಲಿದೆ.
ನವದೆಹಲಿ, ನವೆಂಬರ್ 6: ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿಂದು ಮನೆಮಾತಾಗಿರುವ ಕೃತಕ ಬುದ್ಧಿಮತ್ತೆ ಅಥವಾ ಎಐ (Artificial Intelligence) ತಂತ್ರಜ್ಞಾನ ಇದೀಗ ರೈತರ ನೆರವಿಗೂ ಸಿದ್ಧವಾಗಿದೆ. ಕೃಷಿ ಸಂಬಂಧಿತ ಸುದ್ದಿಗಳ ವಿಶ್ಲೇಷಣೆ ಹಾಗೂ ಮೇಲ್ವಿಚಾರಣೆಗೆಂದೇ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ (DA&FW) ‘ಕೃಷಿ 24/7’ (Krishi 24/7) ಎಂಬ ಎಐ ಆಧಾರಿತ ತಾಣವನ್ನು ಅಭಿವೃದ್ಧಿಪಡಿಸಿದೆ. ವಾಧ್ವನಿ ಇನ್ಸ್ಟಿಟ್ಯೂಟ್ ಆಫ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (Wadhwani AI) ಸಹಯೋಗದೊಂದಿಗೆ, ಗೂಗಲ್ ಡಾಟ್ ಆರ್ಗ್ ಡಾಟ್ ನೆರವಿನೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ಕೃಷಿ 24/7 ಉಪಯೋಗವೇನು?
ಕೃತಕ ಬುದ್ಧಿಮತ್ತೆ ಆಧಾರಿತ ‘ಕೃಷಿ 24/7’, ಕೃಷಿ ಸಂಬಂಧಿತ ಸುದ್ದಿಗಳನ್ನು ಗುರುತಿಸುವುದು, ಸಮಯಕ್ಕೆ ಅನುಗುಣವಾಗಿ ಎಚ್ಚರಿಕೆ ಸಂದೇಶಗಳನ್ನು ಕಳುಹಿಸುವುದು, ರೈತರ ಹಿತಾಸಕ್ತಿಗೆ ಸಂಬಂಧಿಸಿದ ನಿಲುವುಗಳನ್ನು ತೆಗೆದುಕೊಳ್ಳುವುದು, ಸುಸ್ಥಿರ ಕೃಷಿ ಅಭಿವೃದ್ಧಿಗೆ ಪ್ರೋತ್ಸಾಹ ಹಾಗೂ ಡಿಸಿಷನ್ ಮೇಕಿಂಗ್ ವಿಚಾರದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಗೆ ನೆರವಾಗಲಿದೆ. ಪರಿಣಾಮವಾಗಿ ರೈತರ ಅಗತ್ಯಗಳಿಗೆ ಸ್ಪಂದಿಸುವುದು ಸಚಿವಾಲಯಕ್ಕೆ ಇನ್ನಷ್ಟು ಸುಲಭವಾಗಲಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಸಮಯೋಚಿತ ನಿರ್ಧಾರ ತೆಗೆದುಕೊಳ್ಳಲು, ಆಸಕ್ತಿಯ ಕೃಷಿ ಸುದ್ದಿ, ಲೇಖನಗಳನ್ನು ಗುರುತಿಸಲು ಮತ್ತು ನಿರ್ವಹಿಸಲು ಸಮರ್ಥ ಕಾರ್ಯವಿಧಾನದ ಅಗತ್ಯವನ್ನು ಕೃಷಿ 24/7 ತಿಳಿಸುತ್ತದೆ. ಇದು ಬಹು ಭಾಷೆಗಳ ಸುದ್ದಿ, ಲೇಖನಗಳನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ಅವುಗಳನ್ನು ಇಂಗ್ಲಿಷ್‌ಗೆ ಅನುವಾದಿಸುತ್ತದೆ. ಇದು ಸುದ್ದಿ ಲೇಖನಗಳಿಂದ ಅಗತ್ಯ ಮಾಹಿತಿಯನ್ನು ಹೊರತೆಗೆಯುತ್ತದೆ. ಉದಾಹರಣೆಗೆ ಶೀರ್ಷಿಕೆ, ಬೆಳೆ ಹೆಸರು, ಇವೆಂಟ್ನ ಪ್ರಕಾರ, ದಿನಾಂಕ, ಸ್ಥಳ, ತೀವ್ರತೆ, ಸಾರಾಂಶ ಮತ್ತು ಮೂಲ ಲಿಂಕ್, ವೆಬ್‌ನಲ್ಲಿ ಪ್ರಕಟವಾದ ಸಂಬಂಧಿತ ಇವೆಂಟ್‌ಗಳ ಕುರಿತು ಸಚಿವಾಲಯವು ಸಮಯೋಚಿತ ಮಾಹಿತಿ ಪಡೆಯುದನ್ನು ಖಾತರಿಪಡಿಸಲಿದೆ.
ಈ ಸುದ್ದಿ ಮಾನಿಟರಿಂಗ್ ವ್ಯವಸ್ಥೆಯು ನಮಗೆ ಮಾಹಿತಿ ನೀಡುವುದಷ್ಟೇ ಅಲ್ಲ, ಆದರ ನಿರೂಪಣೆಯನ್ನು ರೂಪಿಸಲು ನಮಗೆ ಅಧಿಕಾರ ನೀಡುತ್ತದೆ. ನಿರಂತರ ಸುಧಾರಣೆಯ ಉತ್ಸಾಹದಲ್ಲಿ ನಾವು ಮುಂದುವರಿಯುತ್ತಿರುವಾಗ ಈ ವ್ಯವಸ್ಥೆಯನ್ನು ಸುಧಾರಿಸಲು ನಾವು ಮುಕ್ತರಾಗಿರುತ್ತೇವೆ ಎಂದು ಕೃಷಿ 24/7ಗೆ ಚಾಲನೆ ನೀಡಿದ ಬಳಿಕ ವಾಧ್ವನಿ ಇನ್ಸ್ಟಿಟ್ಯೂಟ್ ಆಫ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನ ಕಾರ್ಯದರ್ಶಿ ಮನೋಜ್ ಅಹುಜಾ ಹೇಳಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ರೋಗದ ಪತ್ತೆಗೆ ಕೃತಕ ಬುದ್ಧಿಮತ್ತೆ ಮೊರೆ ಹೋದ ಆರೋಗ್ಯ ಇಲಾಖೆ
ಜಗತ್ತು ವಿಕಾಸಗೊಳ್ಳುತ್ತಿರುವಂತೆ ನಮ್ಮ ಉಪಕರಣಗಳು ಮತ್ತು ವಿಧಾನಗಳು ಕೂಡ ವಿಕಾಸ ಹೊಂದಬೇಕು. ಈ ಸುದ್ದಿ ಮಾನಿಟರಿಂಗ್ ವ್ಯವಸ್ಥೆಯು ಕ್ರಿಯಾತ್ಮಕ ಶಕ್ತಿಯಾಗಿ, ಮಾಹಿತಿಯ ಬದಲಾಗುತ್ತಿರುವ ಭೂದೃಶ್ಯಕ್ಕೆ ಹೊಂದಿಕೊಳ್ಳುತ್ತದೆ. ನಮ್ಮ ರೈತರಿಗೆ ಉತ್ತಮ ಸೇವೆ ಸಲ್ಲಿಸುವ ನಮ್ಮ ಧ್ಯೇಯದಲ್ಲಿ ಅಮೂಲ್ಯವಾದ ಆಸ್ತಿಯಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡೋಣ ಎಂದು ಅವರು ಕರೆ ನೀಡಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ