ಕ್ಯಾನ್ಸರ್ ರೋಗದ ಪತ್ತೆಗೆ ಕೃತಕ ಬುದ್ಧಿಮತ್ತೆ ಮೊರೆ ಹೋದ ಆರೋಗ್ಯ ಇಲಾಖೆ
ಕ್ಯಾನ್ಸರ್ ಪತ್ತೆಗೆ ಪರೀಕ್ಷೆ ವೇಗ ಹೆಚ್ಚಿಸುವ ಉದ್ದೇಶದಿಂದ ರಾಜ್ಯದ 19 ಜಿಲ್ಲಾ ಆಸ್ಪತ್ರೆಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಶ್ವಾಸಕೋಶ ಕ್ಯಾನ್ಸರ್ ತಪಾಸಣೆ ಸ್ಕ್ರೀನಿಂಗ್ ತಂತ್ರಜ್ಞಾನ ಅಳವಡಿಸಲಿದ್ದು, ಆರಂಭಿಕ ಹಂತದಲ್ಲೇ ಶ್ವಾಸಕೋಶ ಕ್ಯಾನ್ಸರ್ ಪತ್ತೆಗೆ ಅನುಕೂಲವಾಗಲಿದೆ.
ಬೆಂಗಳೂರು, ಅ.30: ಕಳೆದ ಎರಡು ವರ್ಷದಿಂದ ಅಂದ್ರೆ ಕೊರೊನಾ (Coronavirus) ಕಾಲಘಟದಲ್ಲಿ ಕೊಂಚ ಮರೆಯಾಗಿದ್ದ ಕ್ಯಾನ್ಸರ್ (Cancer) ಈಗ ಮಹಿಳೆಯರು ಹಾಗೂ ಪುಟಾಣಿ ಮಕ್ಕಳ ಜೀವ ತೆಗೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ಮಹಿಳೆಯರು ಸೇರಿದಂತೆ ಮಕ್ಕಳಲ್ಲಿ ಏರಿಕೆ ಕಾಣ್ತೀರುವ ಕ್ಯಾನ್ಸರ್ ಆತಂಕ ಹೆಚ್ಚಿಸಿದ್ದು ಆರೋಗ್ಯ ಇಲಾಖೆ ಆರಂಭದಲ್ಲಿ ಕ್ಯಾನ್ಸರ್ ಬಗ್ಗುಬಡೆಯಲು AI ಮೊರೆ ಹೋಗ್ತೀದೆ.
ಕೊರೊನಾ ಕಾಲಘಟದಲ್ಲಿ ಜನರು ಸಾಮಾನ್ಯ ಕೆಮ್ಮು, ನೆಗಡಿ, ಜ್ವರಕ್ಕೆ ಬೆಚ್ಚಿ ಬೀಳುತಿದ್ರು. ಆದ್ರೆ ಈ ನಡುವೆಯೇ ಕ್ಯಾನ್ಸರ್ ರಾಜ್ಯದಲ್ಲಿ ಏರಿಕೆ ಕಾಣ್ತಿದೆ. ಸದ್ದಿಲ್ಲದೆ ಮಹಿಳೆಯರು, ವಯೋವೃದ್ಧರು, ಮಕ್ಕಳಿಗೆ ಅಟ್ಯಾಕ್ ಮಾಡ್ತೀದೆ. ರಾಜ್ಯದಲ್ಲಿ ಕ್ಯಾನ್ಸರ್ ಗೆ ತುತ್ತಾಗುತ್ತಿರೊ ಸಂಖ್ಯೆ ಹೆಚ್ಚಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಕ್ಯಾನ್ಸರ್ ಪತ್ತೆಗೆ ಪರೀಕ್ಷೆ ವೇಗ ಹೆಚ್ಚಿಸುವ ಉದ್ದೇಶದಿಂದ ಅಸ್ಟ್ರಾಜೆನೆಕಾ ಇಂಡಿಯಾ ಹಾಗೂ ರಾಜ್ಯ ಸರ್ಕಾರ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ.
ಪ್ರಾಥಮಿಕ ಹಂತದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಕೆ ಸಿ ಜನರಲ್ ಆಸ್ಪತ್ರೆ ಸೇರಿದಂತೆ 29 ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಪತ್ತೆಗೆ AI ಬಳಕೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಹಿಳೆಯರು ಹಾಗೂ ಮಕ್ಕಳಲ್ಲಿ ಕ್ಯಾನ್ಸರ್ ಪ್ರಕರಣ ಏರಿಕೆ ಹಿನ್ನಲೆ ಟಿವಿ9 ನ್ಯೂಸ್ ಕೂಡಾ ಸುದ್ದಿ ಮಾಡಿತ್ತು. ಪುಟಾಣಿಗಳು ಹಾಗೂ ಮಹಿಳೆಯರು ಬಲಿಯಾಗ್ತೀರೊ ಬಗ್ಗೆ ವರದಿ ಮಾಡಿತ್ತು. ಈಗ ರಾಜ್ಯದಲ್ಲಿ ಕ್ಯಾನ್ಸರ್ ಪ್ರಕರಣ ಏರಿಕೆ ಹಿನ್ನಲೆ ಆರೋಗ್ಯ ಇಲಾಖೆ AI ಮೊರೆ ಹೋಗಿದೆ. ಕ್ಯಾನ್ಸರ್ ಪತ್ತೆಗೆ ಪರೀಕ್ಷೆ ವೇಗ ಹೆಚ್ಚಿಸುವ ಉದ್ದೇಶದಿಂದ ರಾಜ್ಯದ 19 ಜಿಲ್ಲಾ ಆಸ್ಪತ್ರೆಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಶ್ವಾಸಕೋಶ ಕ್ಯಾನ್ಸರ್ ತಪಾಸಣೆ ಸ್ಕ್ರೀನಿಂಗ್ ತಂತ್ರಜ್ಞಾನ ಅಳವಡಿಸಲಿದ್ದು, ಆರಂಭಿಕ ಹಂತದಲ್ಲೇ ಶ್ವಾಸಕೋಶ ಕ್ಯಾನ್ಸರ್ ಪತ್ತೆಗೆ ಅನುಕೂಲವಾಗಲಿದೆ.
ಇದನ್ನೂ ಓದಿ: ಗ್ರಾಮಾಂತರ ಭಾಗದಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಪ್ರಕರಣಗಳು, ರಾಜ್ಯಾದ್ಯಂತ ಅಗತ್ಯವಿದೆ ವಿಶೇಷ ಆಸ್ಪತ್ರೆಗಳ ಸ್ಥಾಪನೆ
ಕ್ಯಾನ್ಸರ್‌ನ್ನು ಆರಂಭಿಕವಾಗಿ ಪತ್ತೆ ಹಚ್ಚಲಿದ್ದು, ಒಂದು ವರ್ಷದವರೆಗೆ ಉಚಿತ ತಪಾಸಣೆ ಸೇವೆ ಒದಗಿಸಲು ಸಂಸ್ಥೆ ಒಪ್ಪಿಕೊಂಡಿದೆ. ಹೀಗಾಗಿ ಒಂದು ವರ್ಷದ ಪ್ರಾಯೋಗಿಕ ಉಪಕ್ರಮವನ್ನು ನೀಡಲು ಸಂಸ್ಥೆ ಮುಂದಾಗಿದೆ. ಸಂಸ್ಥೆ ಒದಗಿಸಿದ ಸೇವೆ ಯಶಸ್ವಿಯಾದರೆ ಉಳಿದ ಜಿಲ್ಲೆಗಳಿಗೂ ಈ ತಂತ್ರಜ್ಞಾನ ವಿಸ್ತರಿಸಲಿದೆ. ಸದ್ಯ ಪ್ರಾಥಮಿಕ ಹಂತದ ಕ್ಯಾನ್ಸರ್ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಆರೋಗ್ಯ ಇಲಾಖೆ IA ಮೊರೆ ಹೋಗಿದೆ.
ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಈ ತಂತ್ರಜ್ಞಾನ ಮುಂದಿನ ವಾರದಿಂದಲೇ ಅಳವಡಿಕೆಯಾಗಲಿದೆ. ಈ ಎಐ ತಂತ್ರಜ್ಞಾನ ಬಳಕೆ ಶುರುವಾದ್ರೆ ಪ್ರಾರಂಭದಲ್ಲಿಯೇ ಕ್ಯಾನ್ಸರ್ ಪತ್ತೆ ಹಚ್ಚಬಹುದಾಗಿದ್ದು ಇದರಿಂದ ಕ್ಯಾನ್ಸರ್ ನಿಂದ ಉಂಟಾಗುವ ಸಾವು ಪ್ರಕರಣ ಕಡಿಮೆ ಮಾಡಬಹುದು. ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಿದೆ. ವಿಶೇಷವಾಗಿ ಆರ್ಥಿಕ ಸಮಸ್ಯೆಯಿಂದ ಪ್ರಾಥಮಿಕ ಆರೈಕೆ ಪಡೆಯಲು ಸಾಧ್ಯವಾಗದವರಿಗೆ ಇದು ಅತ್ಯಂತ ಪ್ರಯೋಜನಕಾರಿ ಎಂದು ವೈದ್ಯರು ತಿಳಿಸಿದ್ದಾರೆ.
ಒಟ್ನಲ್ಲಿ ಕೊರೊನಾ ಬಳಿಕ ಸದಿಲ್ಲದೇ ಕ್ಯಾನ್ಸರ್ ಮಕ್ಕಳು ಹಾಗೂ ಮಹಿಳೆಯರಿಗೆ ಅಟ್ಯಾಕ್ ಮಾಡ್ತೀದ್ದು ಆತಂಕ ಹೆಚ್ಚಿಸಿದೆ. 2025ರ ವೇಳೆಗೆ ಮತಷ್ಟು ಕ್ಯಾನ್ಸರ್ ಪ್ರಕರಣ ರಾಜ್ಯದಲ್ಲಿ ಏರಿಕೆಯಾಗವ ಆತಂಕಕಾರಿ ಮಾಹಿತಿಯನ್ನ ಐಸಿಎಮ್ ಆರ್ ನೀಡಿದೆ. ಹೀಗಾಗಿ ಆರಂಭದಲ್ಲಿಯೇ ಕ್ಯಾನ್ಸರ್ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಗುರಿಯನ್ನ ಆರೋಗ್ಯ ಇಲಾಖೆ ತಂತ್ರಜ್ಞನದ ಮೊರೆ ಹೋಗಿರುವುದು ಉತ್ತಮ ಬೆಳವಣಿಗೆಯಾಗಿದ್ದು ಇದು ಎಷ್ಟರ ಮಟ್ಟಿಗೆ ಆಸ್ಪತ್ರೆಯಲ್ಲಿ ಜಾರಿಯಾಗುತ್ತೆ ಅಂತಾ ಕಾದು ನೋಡಬೇಕಿದೆ
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ