ಇಸ್ರೋದ ಕನಸಿನ ಕೂಸು ಆಗಿರುವ ಗಗನ್‌ಯಾನ್ (Gaganyaan) ಮಿಷನ್ ಹಾರಟಕ್ಕೆ ಸಕಲ ಸಿದ್ಧತೆಗಳನ್ನು ಇಸ್ರೋ ನಡೆಸಿದೆ. ಅನೇಕ ಪರೀಕ್ಷೆಗಳನ್ನು ಭಾರತೀಯ ವಿಜ್ಞಾನ ಸಂಸ್ಥೆ ಇಸ್ರೋ ಮಾಡುತ್ತಿದೆ. ಇದೀಗ ಗಗನ್‌ಯಾನ್ ಮಿಷನ್ ಪರೀಕ್ಷೆಯ ಮುಂದುವರಿದ ಭಾಗವಾಗಿ ಸಿಬ್ಬಂದಿ ಎಸ್ಕೇಪ್ ಸಿಸ್ಟಂನ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡಲು ಅಕ್ಟೋಬರ್ 21ರಂದು ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 7ರಿಂದ 9ವರೆಗೆ ಪರೀಕ್ಷಾ ವಾಹಕದ ಉಡಾವಣೆ ಮಾಡುವ ಮೂಲಕ ಗಗನ್ಯಾನ ಮಾನವ ರಹಿತ ಹಾರಾಟ ಪರೀಕ್ಷೆಯನ್ನು ನಡೆಸಲಿದೆ ಎಂದು ಇಸ್ರೋ ಹೇಳಿದೆ. ಈ ಬಗ್ಗೆ ಇಸ್ರೋ ಎಕ್ಸ್ನಲ್ಲಿ (ಈ ಹಿಂದಿನ ಟ್ವಿಟರ್) ಹಂಚಿಕೊಂಡಿದೆ. ಶ್ರೀಹರಿಕೋಟಾದಲ್ಲಿ ಗಗನ್‌ಯಾನ್ ಮಿಷನ್ನ ಹಾರಾಟಕ್ಕೂ ಮುನ್ನ ಟಿವಿ-ಡಿ 1 ಪರೀಕ್ಷಾ ಹಾರಾಟ ಅಕ್ಟೋಬರ್ 21, 2023 ಬೆಳಿಗ್ಗೆ 7ರಿಂದ 9ವರೆಗೆ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಲ್ಲಿ ನಡೆಯಲಿದೆ ಎಂದು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಅಕ್ಟೋಬರ್ 21ರಂದು ಟಿವಿ-ಡಿ 1 ಪರೀಕ್ಷಾ ಹಾರಾಟದ ನಂತರ ಗಗನ್‌ಯಾನ್ ಕಾರ್ಯಕ್ರಮದಡಿಯಲ್ಲಿ ಇನ್ನೂ ಮೂರು ಪರೀಕ್ಷಾ ವಾಹನ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು. ಇನ್ನು ಗಗನ್ಯಾನದಲ್ಲಿ 400 ಕಿ.ಮೀವರೆಗೆ ಮಾನವರನ್ನು ಕಳುಹಿಸಲಾಗುವುದು ಅಲ್ಲಿಂದ ಅವರನ್ನು ಸುರಕ್ಷಿತವಾಗಿ ಗಗನ್ಯಾನ ಮಿಷನ್ನಿಂದ ಸಮುದ್ರ ಇರುವ ಪ್ರದೇಶದಲ್ಲಿ ಇಳಿಸಲಾಗುವುದು ಎಂದು ಹೇಳಿದೆ.
ಇದನ್ನೂ ಓದಿ: 2024ರಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ‘ಗಗನಯಾನ್’; ಕೇಂದ್ರ
ಈ ಟೆಸ್ಟ್ ವೆಹಿಕಲ್ ಡೆವಲಪ್‌ಮೆಂಟ್ ಫ್ಲೈಟ್ (TV-D1) (ಪರೀಕ್ಷಾ ವಾಹನ ಅಭಿವೃದ್ಧಿ ವಿಮಾನ) ಗಗನಯಾನ ಸಮಯದಲ್ಲಿ ಭಾರತೀಯ ಗಗನಯಾತ್ರಿಗಳನ್ನು ಹೊತ್ತೊಯ್ಯುವ ಸಿಬ್ಬಂದಿ ಮಾಡ್ಯೂಲ್ (CM)ನ್ನು ಪರೀಕ್ಷಿಸುವ ಪ್ರಮುಖ ಹಂತವಾಗಿರುತ್ತದೆ ಎಂದು ಇಸ್ರೋ ಹೇಳಿದೆ. TV-D1 ಪರೀಕ್ಷಾ ಹಾರಾಟವು ಮಾನವರಹಿತ ಸಿಬ್ಬಂದಿ ಮಾಡ್ಯೂಲ್ನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಹಾಯ ಮಾಡುತ್ತದೆ. ಜತೆಗೆ ಮತ್ತೆ ಮರಳಿ ಭೂಮಿಗೆ ತರಲು ಹಾಗೂ ಈಗಾಗಲೇ ನಿಗದಿಪಡಿಸಿರುವಂತೆ ಬಂಗಾಳ ಕೊಲ್ಲಿಯಲ್ಲಿ ಇವುಗಳನ್ನು ಇಳಿಸುತ್ತದೆ ಎಂದು ಇಸ್ರೋ ಹೇಳಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ