ಸಲಿಂಗ ವಿವಾಹವನ್ನು ಬೆಂಬಲಿಸುವ ಹಾಗೂ ವಿರೋಧಿಸುವವರ ವಾದವೇನು?

ಸಲಿಂಗ ವಿವಾಹದ ವಿಷಯದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ವಿಷಯದ ಕುರಿತು ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ 18 ಏಪ್ರಿಲ್ 2023 ರಿಂದ ಪ್ರಾರಂಭವಾಯಿತು ಮತ್ತು ನ್ಯಾಯಾಲಯವು ನಿರ್ಧಾರವನ್ನು ಮೇ 11 ರಂದು ಕಾಯ್ದಿರಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠದ ಮುಂದೆ ವಿವಾಹದ ಪರ ಮತ್ತು ವಿರುದ್ಧ ಕುತೂಹಲಕಾರಿ ವಾದಗಳನ್ನು ಮಂಡಿಸಲಾಯಿತು. ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದು, ನೈಸರ್ಗಿಕ ವ್ಯವಸ್ಥೆಯನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರ ವಿರೋಧಿಸಿದೆ.

ಸಲಿಂಗ ವಿವಾಹವನ್ನು ಬೆಂಬಲಿಸುವ ಹಾಗೂ ವಿರೋಧಿಸುವವರ ವಾದವೇನು?
Follow us
ನಯನಾ ರಾಜೀವ್
|

Updated on:Oct 17, 2023 | 12:07 PM

ಸಲಿಂಗ ವಿವಾಹದ ವಿಷಯದ ಕುರಿತು ಸುಪ್ರೀಂ ಕೋರ್ಟ್​ನ ಪಂಚ ಸದಸ್ಯ ಪೀಠ ವಿಭಿನ್ನ ತೀರ್ಪು ನೀಡಿದೆ. ಈ ವಿಷಯದ ಕುರಿತು ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ 18 ಏಪ್ರಿಲ್ 2023 ರಿಂದ ಪ್ರಾರಂಭವಾಯಿತು ಮತ್ತು ನ್ಯಾಯಾಲಯವು ನಿರ್ಧಾರವನ್ನು ಮೇ 11 ರಂದು ಕಾಯ್ದಿರಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠದ ಮುಂದೆ ವಿವಾಹದ ಪರ ಮತ್ತು ವಿರುದ್ಧ ಕುತೂಹಲಕಾರಿ ವಾದಗಳನ್ನು ಮಂಡಿಸಲಾಯಿತು. ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದು, ನೈಸರ್ಗಿಕ ವ್ಯವಸ್ಥೆಯನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರ ವಿರೋಧಿಸಿದೆ.

ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರಿದ್ದ ಪಂಚಪೀಠವು ಈ ತೀರ್ಪು ನೀಡಿದೆ. ಸಲಿಂಗಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು ಎಂದು ಕೋರಿ 18 ಸಲಿಂಗಿ ಸಂಪತಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯನ್ನು ಕೋರ್ಟ್​ ಏಪ್ರಿಲ್ 18ರಿಂದ ಆರಂಭಿಸಿತ್ತು. ಅರ್ಜಿದಾರರು ಮತ್ತು ಪ್ರತಿವಾದಿಗಳ ದೀರ್ಘ ವಾದ ಆಲಿಸಿದ ಕೋರ್ಟ್​ ಕಡೆಗೆ ಮೇ 11ರಂದು ವಿಚಾರಣೆ ನಡೆಸಿತ್ತು.

ಕೇಂದ್ರ ಸರ್ಕಾರದ ವಾದ

-ಇದೊಂದು ಸಂಕೀರ್ಣ ವಿಷಯವಾಗಿದ್ದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ -ಈ ಕುರಿತು ಸಮಿತಿ ರಚಿಸಲು ಸರ್ಕಾರ ಸಿದ್ಧವಿದೆ -ಸಲಿಂಗ ವಿವಾಹವನ್ನು ವಿವಿಧ ಧರ್ಮಗಳಲ್ಲಿ ಗುರುತಿಸಲಾಗಿಲ್ಲ -ಸಲಿಂಗ ದಂಪತಿಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಆಕ್ಷೇಪಣೆ

ಅರ್ಜಿದಾರರ ವಾದವೇನು? ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರು, ಭಾರತವು ವಿವಾಹ ಆಧರಿತ ಸಂಸ್ಕೃತಿಯಾಗಿದೆ,  ಬೇರೆ ದಂಪತಿಗೆ ನೀಡಲಾಗುವ ಸ್ಥಾನಮಾನವನ್ನೇ ಸಲಿಂಗ ದಂಪತಿಗೆ ನೀಡಬೇಕು. ಆರ್ಥಿಕ, ಬ್ಯಾಂಕಿಂಗ್ ಹಾಗೂ ವಿಮಾ, ವೈದ್ಯಕೀಯ, ಪಿತ್ರಾರ್ಜಿತ, ದತ್ತು ಸ್ವೀಕಾರ ಮತ್ತು ಬಾಡಿಗೆ ತಾಯ್ತನದ ವಿಚಾರಗಳಲ್ಲೂ ಅಂಥದ್ದೇ ಅವಕಾಶ ನೀಡಬೇಕು ಎಂದು ಕೇಳಿದ್ದಾರೆ. -ವಿಶೇಷ ವಿವಾಹದ ಅಡಿಯಲ್ಲಿ ಗುರುತಿಸಬೇಕು – ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದೆ -ಪ್ರಕರಣ ಸಾಂವಿಧಾನಿಕ ವ್ಯವಸ್ಥೆಗೆ ಸಂಬಂಧಿಸಿದ್ದಲ್ಲ

ರಾಜ್ಯಗಳ ವಿರೋಧ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಕೆಲ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಈ ಕುರಿತು ಕೇಂದ್ರ ಸರ್ಕಾರ ಅಭಿಪ್ರಾಯ ಹಂಚಿಕೊಳ್ಳಲು ರಾಜಸ್ಥಾನ, ಆಂಧ್ರಪ್ರದೇಶ, ಅಸ್ಸಾಂ ಸೇರಿದಂತೆ 7 ರಾಜ್ಯಗಳಿಗೆ ಹೇಳಿತ್ತು, ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯಗಳು ವಿವಾಹಕ್ಕೆ ಅವಕಾಶ ನೀಡಬಾರದು ಎಂದು ಹೇಳಿವೆ.

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ಈ ಮದುವೆಗಳ ಬಗ್ಗೆ ಸರ್ಕಾರ ಏನನ್ನೂ ಹೇಳದಿದ್ದರೂ, ಕೆಲವು ಮಾನದಂಡಗಳನ್ನು ನೀಡಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಮದುವೆಯನ್ನು ಗುರುತಿಸದಿದ್ದರೆ ದಂಪತಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದೇ ಎಂದು ಸರ್ಕಾರ ಪರಿಗಣಿಸಬೇಕು.

ಸಲಿಂಗ ಸಂಬಂಧದಲ್ಲಿಯೂ ಒಬ್ಬ ಸಂಗಾತಿ ಮಗುವನ್ನು ದತ್ತು ತೆಗೆದುಕೊಳ್ಳುವುದಕ್ಕೆ ನಿರ್ಬಂಧವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಗು ಶಾಲೆಗೆ ಹೋದರೆ ಒಬ್ಬ ಸಂಗಾತಿಯನ್ನು ಸಿಂಗಲ್ ಪೇರೆಂಟ್ ಚೈಲ್ಡ್ ಎಂದು ಗುರುತಿಸಬಹುದಲ್ಲವೇ? ಸಲಿಂಗಕಾಮಿ ವಿವಾಹಗಳನ್ನು 34 ದೇಶಗಳಲ್ಲಿ ಗುರುತಿಸಲಾಗಿದೆ.

ವಿಶ್ವದ 34 ದೇಶಗಳಲ್ಲಿ ಸಲಿಂಗಕಾಮಿ ವಿವಾಹಗಳನ್ನು ಗುರುತಿಸಲಾಗಿದೆ. ಇದರಲ್ಲಿ ಕೆನಡಾ, ಅಮೆರಿಕ, ಬ್ರೆಜಿಲ್, ಅರ್ಜೆಂಟೀನಾ, ಬ್ರಿಟನ್, ಜರ್ಮನಿ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮುಂತಾದ ದೇಶಗಳು ಸೇರಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:06 pm, Tue, 17 October 23

ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಅಂತ ನೆಹರೂ ಅರಿತಿದ್ದರು: ಡಿಕೆಶಿ
ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಅಂತ ನೆಹರೂ ಅರಿತಿದ್ದರು: ಡಿಕೆಶಿ
ಬಿಬಿಎಂಪಿ ಶಾಲಾಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಿದ ಡಿಕೆ ಶಿವಕುಮಾರ್
ಬಿಬಿಎಂಪಿ ಶಾಲಾಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಿದ ಡಿಕೆ ಶಿವಕುಮಾರ್
ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
"ನಾನಾಗಿದ್ದರೆ ಸಿದ್ದರಾಮಯ್ಯ ಕಪಾಳಕ್ಕೆ ಹೊಡೆಯುತ್ತಿದ್ದೆ": ಸ್ವಾಮೀಜಿ
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ