ಜಮ್ಮು-ಕಾಶ್ಮೀರದ ಮೊದಲ ಮಹಿಳಾ ಬಸ್​ ಡ್ರೈವರ್​ ಆದ ಮೂರು ಮಕ್ಕಳ ತಾಯಿ!

|

Updated on: Dec 26, 2020 | 5:25 PM

ಜಮ್ಮು-ಕಥುವಾ ಮಾರ್ಗದಲ್ಲಿ ಪೂಜಾ ಬಸ್​ ಚಾಲನೆ ಮಾಡಿದ್ದಾರೆ. ಸಾಕಷ್ಟು ಪ್ರಯಾಣಿಕರು ಬಸ್​ನಲ್ಲಿ ಕೂತಿದ್ದರು. ಇವರು ಬಸ್​ ಚಲಾವಣೆ ಮಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಜಮ್ಮು-ಕಾಶ್ಮೀರದ ಮೊದಲ ಮಹಿಳಾ ಬಸ್​ ಡ್ರೈವರ್​ ಆದ ಮೂರು ಮಕ್ಕಳ ತಾಯಿ!
ಮೊದಲ ಮಹಿಳಾ ಬಸ್​ ಡ್ರೈವರ್
Follow us on

ಜಮ್ಮು: ಅವರ ಹೆಸರು ಪೂಜಾ ದೇವಿ. ಚಿಕ್ಕ ವಯಸ್ಸಿನಲ್ಲಿ ಸರಿಯಾದ ಶಿಕ್ಷಣ ಸಿಕ್ಕಿರಲಿಲ್ಲ. ಆದರೆ, ದೊಡ್ಡ ದೊಡ್ಡ ವಾಹನಗಳನ್ನು ಅನಾಯಾಸವಾಗಿ ಚಲಾಯಿಸುವ ಕಲೆ ಇವರಿಗೆ ಕರಗತವಾಗಿತ್ತು. ಈಗ ಜಮ್ಮು-ಕಾಶ್ಮೀರದ ಮೊದಲ ಮಹಿಳಾ ಬಸ್​ ಚಾಲಕಿಯಾಗಿ ಪೂಜಾ ದೇವಿ ನೇಮಕಗೊಂಡಿದ್ದಾರೆ.

ಜಮ್ಮು-ಕಥುವಾ ಮಾರ್ಗದಲ್ಲಿ ಪೂಜಾ ಬಸ್​ ಚಾಲನೆ ಮಾಡಿದ್ದಾರೆ. ಸಾಕಷ್ಟು ಪ್ರಯಾಣಿಕರು ಬಸ್​ನಲ್ಲಿ ಕೂತಿದ್ದರು. ಇವರು ಬಸ್​ ಚಲಾವಣೆ ಮಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇವರು ಮೂರು ಮಕ್ಕಳ ತಾಯಿ. ತಾಯಿ ಬಸ್​ ಓಡಿಸುವಾಗ ಓರ್ವ ಮಗ ಬಸ್​​ನಲ್ಲಿ ಇವರ ಜೊತೆ ಇದ್ದ.

ಪೂಜಾ ಬಡ ಕುಟುಂಬದಿಂದ ಬಂದವರು. ಹೀಗಾಗಿ ಶಿಕ್ಷಣ ಎಂಬುದು ಗಗನ ಕುಸುಮವಾಗಿತ್ತು. ಶಿಕ್ಷಣವಂತೂ ಸಿಕ್ಕಿಲ್ಲ. ಹೀಗಾಗಿ, ಬೇರೆ ಏನಾದರೂ ಮಾಡಬೇಕು ಎನ್ನುವ ಕನಸು ಇವರದ್ದಾಗಿತ್ತು. ಬಸ್​ ಡ್ರೈವ್​ ಮಾಡುವುದನ್ನು ಕಲಿತ ನಂತರ ಪೂಜಾ ಲೈಸೆನ್ಸ್​ ಕೂಡ ಪಡೆದುಕೊಂಡಿದ್ದರು.

ಈ ಬಗ್ಗೆ ಸಂತಸ ಹಂಚಿಕೊಂಡಿರುವ ಪೂಜಾ, ನಾನು ಅನೇಕ ವರ್ಷಗಳಿಂದ ಬಸ್​ ಚಾಲಕಿ ಆಗಬೇಕು ಎನ್ನುವ ಕನಸು ಕಂಡಿದ್ದೆ. ಆದರೆ, ಈಗ ಕನಸು ನನಸಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಗಂಡು-ಹೆಣ್ಣು ಭೇದ-ಭಾವ ಹೋಗಬೇಕು ಎನ್ನುವುದೇ ನನ್ನ ಉದ್ದೇಶ ಎಂದು ಅವರು ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಅವಂತಿಪುರದಲ್ಲಿ ನಾಲ್ವರು ಉಗ್ರರ ಸೆರೆ

Published On - 5:19 pm, Sat, 26 December 20