ಹೆಚ್ಚುತ್ತಿರುವ ಕೊರೊನಾ ವೈರಸ್ ಆತಂಕದ ನಡುವೆಯೂ ಈ ಸೀಸನ್ನ ಮೊದಲ ಮ್ಯಾಂಗೋ ವಿಶೇಷ ರೈಲು ಇಂದು ಆಂಧ್ರಪ್ರದೇಶದ ವಿಜಯನಗರಂನಿಂದ ದೆಹಲಿಯ ಆದರ್ಶನಗರ ರೈಲ್ವೆ ಸ್ಟೇಶನ್ ತಲುಪಿದೆ. ಈ ರೈಲಿನಲ್ಲಿ ಒಟ್ಟು 200 ಟನ್ ಹಣ್ಣುಗಳ, 11, 600 ಬಾಕ್ಸ್ಗಳನ್ನು ತರಲಾಗಿದೆ. ಆಂಧ್ರಪ್ರದೇಶದ ಉತ್ತರದಲ್ಲಿರುವ ವಿಜಯನಗರಂ ಮಾವಿನ ಹಣ್ಣು ಸಾಗಣೆಯ ಪ್ರಮುಖ ಕೇಂದ್ರವಾಗಿದೆ.
ಆಂಧ್ರಪ್ರದೇಶದಿಂದ ಮಾವಿನ ಹಣ್ಣು ಸಾಗಣೆಯ ಬಗ್ಗೆ ಮಾತನಾಡಿದ ದೆಹಲಿ ಆಝಾದ್ಪುರ ಮಂಡಿಯ ತೇಜಿಂದರ್ ಸಿಂಗ್, ಬರೀ ಮಾವಿನಹಣ್ಣಷ್ಟೇ ಅಲ್ಲ, ಹೀಗೆ ರೈಲಿನ ಮೂಲಕ ಚಿಕ್ಕು, ಬಾಳೆಹಣ್ಣು, ಕಿತ್ತಳೆ ಹಣ್ಣುಗಳನ್ನೂ ಸಾಗಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ವಾಸ್ತವದಲ್ಲಿ ಮೊದಲು ಶುರುವಾಗಿದ್ದು ಕಿತ್ತಳೆ ಹಣ್ಣುಗಳ ಸಾಗಣೆ. ನಂತರ ಬಾಳೆಹಣ್ಣು, ಮಾವಿನ ಹಣ್ಣುಗಳ ಟ್ರಾನ್ಸ್ಪೋರ್ಟ್ಗೂ ಅದನ್ನು ವಿಸ್ತರಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಹೀಗೆ ಹಣ್ಣುಗಳ ಸಾಗಣೆ ಸೇವೆಯನ್ನು ಮೊದಲು ಪ್ರಾರಂಭಿಸಿದ್ದು, ಪೂರ್ವ ಕರಾವಳಿ ರೈಲ್ವೆಯ ವಾಲ್ಟೇರ್ ವಿಭಾಗ. ಅಗತ್ಯ ಸೇವೆಗಳ ನಿರಂತರ ಪೂರೈಕೆ ಮಾಡುವ ಉದ್ದೇಶದಿಂದ ಈ ಸೇವೆ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎ.ಕೆ.ತ್ರಿಪಾಠಿ, ಮಾವು ಸೇರಿ ಇತರ ಹಣ್ಣು ವ್ಯಾಪಾರಿಗಳ ಅಗತ್ಯತೆಯನ್ನು ಪರಿಗಣಿಸಿ, ವಾಲ್ಟೇರ್ ವಿಭಾಗೀಯ ರೈಲ್ವೆ ವಿಶೇಷ ಪಾರ್ಸೆಲ್ ರೈಲುಗಳ ಸಂಚಾರ ಮಾಡಿಸುತ್ತಿದೆ. ಕೊವಿಡ್ 19 ಸಂದರ್ಭದ ಹೊರತಾಗಿಯೂ, ಈ ರೈಲು ಅಗತ್ಯ ವಸ್ತುಗಳ ನಿರಂತರವಾಗಿ ಪೂರೈಕೆ ಮಾಡಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು. ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟು 4350 ಟನ್ ಮಾವಿನ ಹಣ್ಣುಗಳ ಸಾಗಣೆಗಾಗಿ 20 ವಿಶೇಷ ರೈಲುಗಳು ಸಂಚಾರ ಮಾಡಿದ್ದವು. ಪ್ರಸಕ್ತ ವರ್ಷದ ಮೊದಲ ರೈಲು ಇಂದು ದೆಹಲಿಗೆ ತೆರಳಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಟ್ರೇನ್ಗಳನ್ನು ಇದಕ್ಕೆ ಬಳಸಲಾಗುತ್ತದೆ.
ಇದನ್ನೂ ಓದಿ: Explainer: ಭಾರತದಲ್ಲಿ ಕೊವಿಡ್ ಲಸಿಕೆ ಕೊರತೆ: ನಮ್ಮ ಸರ್ಕಾರ ಎಡವಿದ್ದು ಎಲ್ಲಿ? ಏನು ಪರಿಹಾರ?
Immunity Boosters: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯಾವೆಲ್ಲಾ ಜ್ಯೂಸ್ ಕುಡಿಯಬೇಕು?