ಕಾಶ್ಮೀರದಲ್ಲಿ 24ಗಂಟೆಯಲ್ಲಿ ಐವರು ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆಗಳು; ಮುಂದುವರಿದ ಕಾರ್ಯಾಚರಣೆ

| Updated By: Lakshmi Hegde

Updated on: Jul 08, 2021 | 10:21 AM

ಕಾಶ್ಮೀರದ ಪೊಲೀಸ್​ ಇಲಾಖೆ ಈ ಉಗ್ರರ ವಿರುದ್ಧ ಕಾರ್ಯಾಚರಣೆಯ ಬಗ್ಗೆ ಕಾಲಕಾಲಕ್ಕೆ ಟ್ವಿಟರ್​ ಮೂಲಕ ಮಾಹಿತಿ ನೀಡಲಿದೆ. ಇಂದು ಮುಂಜಾನೆ ಮತ್ತೆ ಇಬ್ಬರು ಅಪರಿಚಿತ ಉಗ್ರರು ಭದ್ರತಾ ಪಡೆಗಳ ದಾಳಿಗೆ ಹತರಾಗಿದ್ದಾರೆ.

ಕಾಶ್ಮೀರದಲ್ಲಿ 24ಗಂಟೆಯಲ್ಲಿ ಐವರು ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆಗಳು; ಮುಂದುವರಿದ ಕಾರ್ಯಾಚರಣೆ
ಪ್ರಾತಿನಿಧಿಕ ಚಿತ್ರ
Follow us on

ಜಮ್ಮು-ಕಾಶ್ಮೀರದ ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ. ಕಳೆದ 24ಗಂಟೆಯಲ್ಲಿ ಐವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ಬಗ್ಗೆ ಪೊಲೀಸರೇ ಅಧಿಕೃತ ಮಾಹಿತಿ ನೀಡಿದ್ದು, ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದೂ ತಿಳಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಸದ್ಯ ಪುಲ್ವಾಮಾದ ಪುಚಾಲ್​ನಲ್ಲಿ ಉಗ್ರರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆದಿದೆ.
24ಗಂಟೆಯಲ್ಲಿ ಕಾಶ್ಮೀರದಲ್ಲಿ ಐವರು ಉಗ್ರರ ಹತ್ಯೆ ಮಾಡಲಾಗಿದೆ. ಭದ್ರತಾ ಪಡೆಗಳಲ್ಲಿ ಯಾರ ಪ್ರಾಣಿ ಹಾನಿಯೂ ಆಗಿಲ್ಲ. ಇದು ಅಭಿನಂದನಾರ್ಹ ಎಂದು ಕಾಶ್ಮೀರ ವಲಯದ ಐಜಿ ವಿಜಯ್​ಕುಮಾರ್​ ತಿಳಿಸಿದ್ದಾರೆ.

ಕಾಶ್ಮೀರದ ಪೊಲೀಸ್​ ಇಲಾಖೆ ಈ ಉಗ್ರರ ವಿರುದ್ಧ ಕಾರ್ಯಾಚರಣೆಯ ಬಗ್ಗೆ ಕಾಲಕಾಲಕ್ಕೆ ಟ್ವಿಟರ್​ ಮೂಲಕ ಮಾಹಿತಿ ನೀಡಲಿದೆ. ಇಂದು ಮುಂಜಾನೆ ಮತ್ತೆ ಇಬ್ಬರು ಅಪರಿಚಿತ ಉಗ್ರರು ಭದ್ರತಾ ಪಡೆಗಳ ದಾಳಿಗೆ ಹತರಾಗಿದ್ದಾರೆ. ಅವರ ಬಳಿ ಇದ್ದ ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೀಗೆ ಹತ್ಯೆಯಾದವರೆಲ್ಲ ಬಹುತೇಕ ಪಾಕಿಸ್ತಾನದ ಲಷ್ಕರ್​ ಎ ತೊಯ್ಬಾ ಉಗ್ರಸಂಘಟನೆಗೆ ಸೇರಿದವರೇ ಆಗಿದ್ದಾರೆಂದೂ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ; ಜಾಗೋ ಮೈಸೂರು ಅಧ್ಯಕ್ಷರಿಂದ ಪ್ರಧಾನಿ ಮೋದಿಗೆ ರಕ್ತದ ಪತ್ರ

Five militants killed in 24 hours in Kashmir