ರಾಮಮಂದಿರದ ಉಗ್ರಾಣದಲ್ಲಿ ತುಂಬಿ ತುಳುಕಿದ ಭಕ್ತರು ತಂದ ಆಹಾರ ಧಾನ್ಯಗಳು, ಇದು ಭಕ್ತಿಯ ಪರಾಕಾಷ್ಠೆ

ರಾಮನ ಮೇಲಿನ ಭಕ್ತಿಯ ಪರಾಕಾಷ್ಠೆಯನ್ನು ಇದು ತಿಳಿಸುತ್ತದೆ. ರಾಮಮಂದಿರ ಟ್ರಸ್ಟ್​​ಗೆ ಇದೀಗ ಆಹಾರ ಧಾನ್ಯಗಳ ಸಂಗ್ರಹವೇ ದೊಡ್ಡ ಸವಾಲಾಗಿದೆ ಎಂದು ಹೇಳಿದೆ. ರಾಮಮಂದಿರಕ್ಕೆ ಪ್ರಸಾದ ರೂಪದಲ್ಲಿ ಬಂದಿರುವ ಈ ಹೊರಕಾಣಿಕೆಗಳನ್ನು ಸಂಗ್ರಹ ಮಾಡಲು ಸ್ಥಳವಿಲ್ಲ. ಈಗಾಗಲೇ ರಾಮಮಂದಿರದಲ್ಲಿ ನಿರ್ಮಾಣ ಮಾಡಿರುವ ಉಗ್ರಾಣದಲ್ಲಿ ಭಕ್ತರು ತಂದಿರುವ ಆಹಾರ ಧಾನ್ಯಗಳನ್ನು ಸಂಗ್ರಹ ಮಾಡಲು ಸ್ಥಳವಿಲ್ಲ

ರಾಮಮಂದಿರದ ಉಗ್ರಾಣದಲ್ಲಿ ತುಂಬಿ ತುಳುಕಿದ ಭಕ್ತರು ತಂದ ಆಹಾರ ಧಾನ್ಯಗಳು, ಇದು ಭಕ್ತಿಯ ಪರಾಕಾಷ್ಠೆ

Updated on: Jan 24, 2024 | 4:20 PM

ಅಯೋಧ್ಯೆ, ಜ.24: ಅಯೋಧ್ಯೆಯ ರಾಮಮಂದಿದಲ್ಲಿ ರಾಮ ಲಲ್ಲಾ ವಿರಾಜಮಾನರಾಗಿದ್ದಾರೆ. ಲಕ್ಷಾಂತರ ಭಕ್ತರು ರಾಮಮಂದಿರದತ್ತ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಮಮಂದಿರಕ್ಕೆ ಅನೇಕ ಭಕ್ತರು ಭಕ್ತಿಪೂರ್ವಕವಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಕೆಲವರು ಚಿನ್ನ, ವಜ್ರ, ಇನ್ನು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಇದರ ಜತೆಗೆ ಭಕ್ತರು ಆಹಾರ ಧಾನ್ಯಗಳನ್ನು ನೀಡಿದ್ದಾರೆ. ಆದರೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಮುಗಿದರು. ಇನ್ನು ಆಹಾರ ಧಾನ್ಯಗಳು ಬರುತ್ತಿದೆ. ಅದನ್ನು ಸಂಗ್ರಹ ಮಾಡಿಕೊಳ್ಳಲು ಸ್ಥಳವಿಲ್ಲ, ಅಷ್ಟೊಂದು ಆಹಾರ ಧಾನ್ಯಗಳು ಬಂದಿದೆ ಎಂದು ಹೇಳಲಾಗಿದೆ.

ರಾಮನ ಮೇಲಿನ ಭಕ್ತಿಯ ಪರಾಕಾಷ್ಠೆಯನ್ನು ಇದು ತಿಳಿಸುತ್ತದೆ. ರಾಮಮಂದಿರ ಟ್ರಸ್ಟ್​​ಗೆ ಇದೀಗ ಆಹಾರ ಧಾನ್ಯಗಳ ಸಂಗ್ರಹವೇ ದೊಡ್ಡ ಸವಾಲಾಗಿದೆ ಎಂದು ಹೇಳಿದೆ. ರಾಮಮಂದಿರಕ್ಕೆ ಪ್ರಸಾದ ರೂಪದಲ್ಲಿ ಬಂದಿರುವ ಈ ಹೊರಕಾಣಿಕೆಗಳನ್ನು ಸಂಗ್ರಹ ಮಾಡಲು ಸ್ಥಳವಿಲ್ಲ. ಈಗಾಗಲೇ ರಾಮಮಂದಿರದಲ್ಲಿ ನಿರ್ಮಾಣ ಮಾಡಿರುವ ಉಗ್ರಾಣದಲ್ಲಿ ಭಕ್ತರು ತಂದಿರುವ ಆಹಾರ ಧಾನ್ಯಗಳನ್ನು ಸಂಗ್ರಹ ಮಾಡಲು ಸ್ಥಳವಿಲ್ಲ, ಇನ್ನು ಕೆಲವು ಟ್ರಕ್​​​ಗಳು ಉಗ್ರಾಣ ಹೊರಗೆ ಆಹಾರ ಧ್ಯಾನಗಳನ್ನು ತುಂಬಿಕೊಂಡು ನಿಂತಿದೆ ಎಂದು ಹೇಳಲಾಗಿದೆ.


ಆಹಾರ ಧಾನ್ಯಗಳು ರಾಮಮಂದಿರದ ಉಗ್ರಾಣದಲ್ಲಿ ತುಂಬಿರುವ ವಿಡಿಯೋ ಎಲ್ಲ ಕಡೆ ವೈರಲ್​​ ಆಗಿದೆ. ರಾಮನ ಮೇಲಿರುವ ಪ್ರೀತಿ , ವಿಶ್ವಾಸ, ನಂಬಿಕೆಗೆ ಇದು ಸಾಕ್ಷಿಯಾಗಿದೆ. ಭಕ್ತರ ಈ ಸೇವೆಯಿಂದ ರಾಮ ಸಂತೃಪ್ತನಾಗಿದ್ದಾನೆ ಎಂದು ಹೇಳಾಗಿದೆ, ದೇಶದ ಮೂಲೆ ಮೂಲೆಗಳಿಂದ ಈ ಹೊರಕಾಣಿಕೆ ಬಂದಿದೆ. ಖಂಡಿತ ಇದು ರಾಮನಿಗೆ ಸಮರ್ಪಿತವಾಗಿದೆ ಎಂದು ಹೇಳಲಾಗಿದೆ. ಆಹಾರ ಧಾನ್ಯಗಳನ್ನು ದೇಶದ ಎಲ್ಲ ಭಕ್ತರಿಗೆ ನೀಡುವ ಸಾಧ್ಯತೆಗಳು ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಮಮಂದಿರಕ್ಕೆ 3 ಲಕ್ಷ ಭಕ್ತರ ಆಗಮನ, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ: ಅರ್ಚಕರು

ಜನವರಿ 22ರಂದು ಅಯೋಧ್ಯೆ ರಾಮಮಂದಿರದಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆಯಾಗಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ರಾಮಮಂದಿರ ಉದ್ಘಾಟನೆಯಾಗಿದೆ. ಈ ಪುಣ್ಯ ಕ್ಷಣಕ್ಕೆ ಈಡಿ ಭಾರತವೇ ಸಾಕ್ಷಿಯಾಗಿತ್ತು. ಇದೀಗ ರಾಮಮಂದಿರಕ್ಕೆ ಲಕ್ಷಾಂತರ ರಾಮಭಕ್ತರು ಬರುತ್ತಿದ್ದಾರೆ.

Published On - 4:13 pm, Wed, 24 January 24