
ನವದೆಹಲಿ, ಡಿಸೆಂಬರ್ 6: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಡಾಕಾದ ನ್ಯಾಯಮಂಡಳಿ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ಕಳೆದ ವರ್ಷದಿಂದ ಶೇಖ್ ಹಸೀನಾ (Sheikh Hasina) ದೆಹಲಿಯಲ್ಲಿ ಆಶ್ರಯ ಪಡೆದಿದ್ದಾರೆ. ಮರಣದಂಡನೆ ಶಿಕ್ಷೆಗೆ ಒಳಗಾಗಿರುವುದರಿಂದ ಅವರು ಭಾರತದಲ್ಲಿಯೇ ಇನ್ನೂ ಎಷ್ಟು ಸಮಯ ವಾಸ್ತವ್ಯ ಹೂಡಬಹುದು ಎಂಬುದರ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾಹಿತಿ ನೀಡಿದ್ದಾರೆ. ಶೆಕ್ ಹಸೀನಾ ಭಾರತವನ್ನು ತೊರೆಯುವುದು ಅಥವಾ ಇಲ್ಲೇ ಇರುವುದು ಅವರ ವೈಯಕ್ತಿಕ ನಿರ್ಧಾರ. ಅವರು ಎಷ್ಟು ಸಮಯ ಬೇಕಾದರೂ ಇಲ್ಲಿಯೇ ಇರಬಹುದು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಭಾರತವು ಶೇಖ್ ಹಸೀನಾಗೆ ಬಯಸಿದಷ್ಟು ಕಾಲ ಇರಲು ಅವಕಾಶ ನೀಡುತ್ತದೆಯೇ? ಎಂದು ಕೇಳಿದಾಗ ಉತ್ತರಿಸಿರುವ ಸಚಿವ ಜೈಶಂಕರ್, ಅವರು ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಇಲ್ಲಿಗೆ ಬಂದರು. ಅದು ಅವರ ನಿರ್ಧಾರವಾಗಿತ್ತು. ಹಾಗೆಯೇ ಇಲ್ಲಿಂದ ತೆರಳುವುದು ಕೂಡ ಅವರ ವೈಯಕ್ತಿಕ ನಿರ್ಧಾರವಾಗಿರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: Sheikh Hasina: ಶೇಖ್ ಹಸೀನಾಗೆ ಗಲ್ಲುಶಿಕ್ಷೆ; ಭಾರತದಿಂದ ಬಾಂಗ್ಲಾದೇಶಕ್ಕೆ ಹಸ್ತಾಂತರವಾಗುತ್ತಾರಾ ಮಾಜಿ ಪ್ರಧಾನಿ?
ಬಾಂಗ್ಲಾದೇಶದಲ್ಲಿ ಉಂಟಾದ ರಾಜಕೀಯ ಅಶಾಂತಿಯ ನಂತರ ಕಳೆದ ವರ್ಷ ಆಗಸ್ಟ್‌ನಲ್ಲಿ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದರು. ಅವರ ಅಧಿಕಾರಾವಧಿಯಲ್ಲಿ ಗಲಭೆ ಉಂಟಾಗಿ ನೂರಾರು ಜನರು ಸಾವನ್ನಪ್ಪಿದರು ಮತ್ತು ಸಾವಿರಾರು ಜನರು ಗಾಯಗೊಂಡರು. ಹೀಗಾಗಿ, ಕಳೆದ ತಿಂಗಳು ಶೇಖ್ ಹಸೀನಾ ಅವರಿಗೆ ವಿಶೇಷ ನ್ಯಾಯಮಂಡಳಿಯು ಮರಣದಂಡನೆ ವಿಧಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ