
ನೋಯ್ಡಾ, ಜನವರಿ 05: ಕ್ಷುಲ್ಲಕ ಕಾರಣಕ್ಕೆ ಮಣಿಪುರ(Manipur)ದ ಯುವತಿಯೊಬ್ಬಳು ತನ್ನ ಗೆಳೆಯನನ್ನು ಚಾಕುವಿನಿಂದ ಇರಿದು ಹತ್ಯೆ(Murder) ಮಾಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಆಕೆಯ ಗೆಳೆಯ ದಕ್ಷಿಣ ಕೊರಿಯಾದವರಾಗಿದ್ದಾರೆ. ಇಬ್ಬರ ನಡುವೆ ಯಾವುದೋ ಸಣ್ಣ ವಿಚಾರಕ್ಕೆ ಜಗಳ ನಡೆದಿದೆ. ಅದು ಅತಿರೇಕಕ್ಕೇರಿ ಆಕೆ ಕೊಲೆ ಮಾಡುವ ಹಂತಕ್ಕೆ ತಲುಪಿದ್ದಾಳೆ. ನೋಯ್ಡಾದಲ್ಲಿ ತನ್ನ ಫ್ಲಾಟ್ನಲ್ಲಿ ಗೆಳೆಯನನ್ನು ಹತ್ಯೆ ಮಾಡಿದ್ದಾಳೆ.
ಮೃತ ವ್ಯಕ್ತಿಯನ್ನು ಡಕ್ ಹೀ ಯುಹ್ ಎಂದು ಗುರುತಿಸಲಾಗಿದೆ. ಆತನಿಗೆ ಇರಿದ ಸ್ವಲ್ಪ ಹೊತ್ತಲ್ಲೇ ಆಕೆಯೇ ಡಕ್ನನ್ನು ಜಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಳು. ಕೂಡಲೇ ಆಸ್ಪತ್ರೆ ಸಿಬ್ಬಂದಿ ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಲುಂಜೀನಾ ಪಮೈ ಎಂದು ಗುರುತಿಸಲಾದ ಆರೋಪಿಯು ವಿಚಾರಣೆಯ ಸಮಯದಲ್ಲಿ ತನಿಖಾಧಿಕಾರಿಗಳಿಗೆ ಕೆಲವು ಮಾಹಿತಿ ನೀಡಿದ್ದಾಳೆ. ಡಕ್ ಹೀ ಮದ್ಯ ಸೇವಿಸಿದ ನಂತರ ಆಗಾಗ ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದ, ತಾನು ಹತಾಷಳಾಗಿದ್ದೆ ಎಂದು ತಿಳಿಸಿದ್ದಾಳೆ.
ಮತ್ತಷ್ಟು ಓದಿ: ಮದುವೆಗೆ ಒಪ್ಪದಿದ್ದಕ್ಕೆ ಮಹಿಳೆ ಕೊಲೆ ಕೇಸ್ಗೆ ಟ್ವಿಸ್ಟ್: ಆರೋಪಿ ಕೂಡ ನೇಣಿಗೆ ಶರಣು
ಇಬ್ಬರೂ ಗ್ರೇಟರ್ ನೋಯ್ಡಾದ ಬಹುಮಹಡಿ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ಡಕ್ ಹೀ ಮೊಬೈಲ್ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಪೊಲೀಸರ ಪ್ರಕಾರ, ಕೊಲೆಯಾದ ದಿನದಂದು ಮದ್ಯಪಾನ ಮಾಡುತ್ತಿದ್ದಾಗ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಆ ಕ್ಷಣದಲ್ಲಿ ಪಮೈ ಗೆಳಯನ ಎದೆಗೆ ಚಾಕುವಿನಿಂದ ಇರಿದಿದ್ದಾಳೆ. ನಂತರ ಆಕೆಗೆ ತನ್ನ ತಪ್ಪಿನ ಅರಿವಾಗಿ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಳು.
ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕುಡಿದ ನಂತರ ತನ್ನ ಗೆಳೆಯ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದರಿಂದ ಕಪದಲ್ಲಿ ತಾನು ಅವನಿಗೆ ಇರಿದಿದ್ದೇನೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ. ಅವನನ್ನು ಕೊಲ್ಲುವುದು ತನ್ನ ಉದ್ದೇಶವಾಗಿರಲಿಲ್ಲ ಎಂದು ಆಕೆ ಪೊಲೀಸರಿಗೆ ಹೇಳಿಕೊಂಡಿದ್ದಾಳೆ.
ಇರಿತದ ಗಾಯಗಳ ನಿಖರ ಸಂಖ್ಯೆ ಮತ್ತು ಸಾವಿಗೆ ನಿಖರವಾದ ಕಾರಣವನ್ನು ದೃಢೀಕರಿಸಲು ಅಧಿಕಾರಿಗಳು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಭಾನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ