ಹಿಂದೂ ಯುವತಿಯನ್ನು ಮುಸ್ಲಿಂ ವ್ಯಕ್ತಿ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್ಪಿ
ರಂಜಿತಾ ಎನ್ನುವ ಹಿಂದೂ ಯುವತಿಯ ಹತ್ಯೆ ಪ್ರಕಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣದ ಆರೋಪಿ ಯಲ್ಲಾಪುರದ ರಾಮಾಪುರ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಳಮ್ಮನಗರದ ಆರೋಪಿ ಮಹಮ್ಮದ್ ರಫೀಕ್ ಇಮಾಮ್‌ಸಾಬ್ (30) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಮಾಪುರ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ರಫಿಕ್‌ನ ಮೃತದೇಹ ಪತ್ತೆಯಾಗಿದೆ. ನಿನ್ನೆ ಆಶ್ರಯ ನಗರ ನಿವಾಸಿ ರಂಜಿತಾ ಮಲ್ಲಪ್ಪ ಬನ್ಸೊಡೆ (30) ಎಂಬ ಮಹಿಳೆಯ ಕೊಲೆಯಾಗಿತ್ತು. ಆರೋಪಿ ಮಹಮ್ಮದ್ ರಫೀಕ್ ಇಮಾಮ್‌ಸಾಬ್ ಕೊಲೆ ಮಾಡಿ ಪರಾರಿಯಾದ ಆರೋಪ ಕೇಳಿಬಂದಿತ್ತು. ಇನ್ನು ಈ ಕೊಲೆ ಖಂಡಿಸಿ ಇಂದು (ಜನವರಿ 04) ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಯಲ್ಲಾಪುರ ಬಂದ್ ಯಶಸ್ವಿಯಾಗಿದೆ.
ಶಿರಸಿ, (ಜನವರಿ 04): ರಂಜಿತಾ ಎನ್ನುವ ಹಿಂದೂ ಯುವತಿಯ ಹತ್ಯೆ ಪ್ರಕಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣದ ಆರೋಪಿ ಯಲ್ಲಾಪುರದ ರಾಮಾಪುರ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಳಮ್ಮನಗರದ ಆರೋಪಿ ಮಹಮ್ಮದ್ ರಫೀಕ್ ಇಮಾಮ್‌ಸಾಬ್ (30) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಮಾಪುರ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ರಫಿಕ್‌ನ ಮೃತದೇಹ ಪತ್ತೆಯಾಗಿದೆ. ನಿನ್ನೆ ಆಶ್ರಯ ನಗರ ನಿವಾಸಿ ರಂಜಿತಾ ಮಲ್ಲಪ್ಪ ಬನ್ಸೊಡೆ (30) ಎಂಬ ಮಹಿಳೆಯ ಕೊಲೆಯಾಗಿತ್ತು. ಆರೋಪಿ ಮಹಮ್ಮದ್ ರಫೀಕ್ ಇಮಾಮ್‌ಸಾಬ್ ಕೊಲೆ ಮಾಡಿ ಪರಾರಿಯಾದ ಆರೋಪ ಕೇಳಿಬಂದಿತ್ತು. ಇನ್ನು ಈ ಕೊಲೆ ಖಂಡಿಸಿ ಇಂದು (ಜನವರಿ 04) ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಯಲ್ಲಾಪುರ ಬಂದ್ ಯಶಸ್ವಿಯಾಗಿದೆ. ಇನ್ನು ಈ ಪ್ರಕರಣ ಸಂಬಂಧ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ

