Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಿಗರೂ ಕೆಲಸ ಹುಡುಕಿಕೊಂಡು ಪಂಜಾಬ್​ಗೆ ಬರುವಂತೆ ಮಾಡುತ್ತೇನೆ ಎಂದ ಸಿಎಂ ಭಗವಂತ್ ಮಾನ್​; ಕಾಂಗ್ರೆಸ್​ನಿಂದ ಟೀಕೆ

ಪ್ರತಿಭಾ ಪಲಾಯನವೆಂಬುದು ಒಂದು ಸಮಸ್ಯೆಯಾಗುತ್ತಿದೆ. ಈ ವರ್ಷವೂ ಕೂಡ ಸುಮಾರು 3 ಲಕ್ಷ ಜನರು ವಿದೇಶಗಳಿಗೆ ಹೋಗುವ ಸಾಧ್ಯತೆ ಇದೆ ಎಂದೂ ಭಗವಂತ್ ಮಾನ್​ ಹೇಳಿದ್ದನ್ನು ವಿಡಿಯೋದಲ್ಲಿ ಕೇಳಬಹುದು.

ವಿದೇಶಿಗರೂ ಕೆಲಸ ಹುಡುಕಿಕೊಂಡು ಪಂಜಾಬ್​ಗೆ ಬರುವಂತೆ ಮಾಡುತ್ತೇನೆ ಎಂದ ಸಿಎಂ ಭಗವಂತ್ ಮಾನ್​; ಕಾಂಗ್ರೆಸ್​ನಿಂದ ಟೀಕೆ
ಸಿಎಂ ಭಗವಂತ್ ಮಾನ್​
Follow us
TV9 Web
| Updated By: Lakshmi Hegde

Updated on:Apr 10, 2022 | 10:31 AM

ಪಂಜಾಬ್​ನಲ್ಲಿ ಈ ಬಾರಿ ಆಮ್​ ಆದ್ಮಿ ಪಕ್ಷ ಸರ್ಕಾರ ರಚಿಸಿದ್ದು, ಮುಖ್ಯಮಂತ್ರಿ ಹುದ್ದೆಗೆ ಏರಿರುವ ಭಗವಂತ್ ಮಾನ್ ಭರ್ಜರಿ ಉತ್ಸಾಹದಲ್ಲಿ ಆಡಳಿತ ಶುರು ಮಾಡಿದ್ದಾರೆ. ಪಂಜಾಬ್​ನ್ನು ಅಭಿವೃದ್ಧಿಗೊಳಿಸುವುದೇ ಪರಮ ಗುರಿ ಎಂದು ಈಗಾಗಲೇ ಹೇಳಿಕೊಂಡಿರುವ ಅವರು ಇತ್ತೀಚೆಗೆ ಮಾಡಿದ ಭಾಷಣವೊಂದರಲ್ಲಿ ಪ್ರತಿಭಾ ಪಲಾಯನ ( Brain Drain)ದ ಬಗ್ಗೆ ಮಾತನಾಡಿದ್ದರು. ‘ಪಂಜಾಬ್​​ನಿಂದ ಪ್ರತಿಭಾ ಪಲಾಯನ ಹೆಚ್ಚುತ್ತಿದೆ. ಈ ಪ್ರತಿಭಾ ಪಲಾಯನ ತಡೆಯಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು. ನೋಡುತ್ತಿರಿ ಮುಂದೊಂದು ದಿನ ವಿದೇಶಿಯರೂ ಕೆಲಸ ಹುಡುಕಿಕೊಂಡು ಪಂಜಾಬ್​ಗೆ ಬರುವಂತೆ ಮಾಡುತ್ತೇನೆ’ ಎಂದು ಭಗವಂತ್​ ಮಾನ್​ ಹೇಳಿದ್ದರು. ((Brain Drain ಅಥವಾ ಪ್ರತಿಭಾ ಪಲಾಯನ ಎಂದರೆ, ಇಲ್ಲಿ ಅತ್ಯುತ್ತಮ, ಉನ್ನತ ಶಿಕ್ಷಣ ಪಡೆದು, ಅದಕ್ಕೆ ತಕ್ಕುದಾದ ಕೆಲಸ ಸಿಗದೆ, ಅಥವಾ ಕೆಲಸ ಸಿಕ್ಕರೂ ಅದಕ್ಕೆ ಸರಿಯಾದ ವೇತನ, ಸೌಕರ್ಯ ದೊರೆಯದೆ ವಿದೇಶಗಳಿಗೆ ವಲಸೆ ಹೋಗಿ ಅಲ್ಲಿ ದುಡಿಯುವುದು). ಆದರೆ ಈ ಭಾಷಣಕ್ಕೆ ಪ್ರತಿಪಕ್ಷಗಳಿಂದ ಟೀಕೆ ವ್ಯಕ್ತವಾಗಿದೆ. ಪಂಜಾಬ್​ಗೆ ಕೆಲಸ ಹುಡುಕಿಕೊಂಡು ಬಿಳಿಯರು ಬರುತ್ತಾರೆ ಎಂಬ ಭ್ರಮೆಯಿಂದ ಮಾನ್​ ಹೊರಬರಲಿ, ಮೊದಲು ಇಲ್ಲಿಯೇ ಇರುವ ಅನೇಕ ಸಮಸ್ಯೆಗಳನ್ನು ಪರಿಹರಿಸಲಿ ಎಂದು ವಿಪಕ್ಷಗಳ ನಾಯಕರು ಹೇಳಿದ್ದಾರೆ.

ಸಿಎಂ ಮಾನ್​ ಹೇಳಿದ್ದೇನು? 

ಭಗವಂತ್ ಮಾನ್​ ತಮ್ಮ ಟ್ವಿಟರ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದು ಅವರೇ ಮಾಡಿದ ಭಾಷಣದ ತುಣಿಕನ ವಿಡಿಯೋ. ‘ಪ್ರತಿಭಾ ಪಲಾಯನವೆಂಬುದು ಒಂದು ಸಮಸ್ಯೆಯಾಗುತ್ತಿದೆ. ಈ ವರ್ಷವೂ ಕೂಡ ಸುಮಾರು 3 ಲಕ್ಷ ಜನರು ವಿದೇಶಗಳಿಗೆ ಹೋಗುವ ಸಾಧ್ಯತೆ ಇದೆ. ಮೂರು ಲಕ್ಷ ಮಂದಿ ಹೋದರೂ ನಮ್ಮ ದೇಶಕ್ಕೆ ನಷ್ಟ. ಒಬ್ಬರಿಗೆ 15 ಲಕ್ಷ ರೂ.ನಂತೆ ವಿದೇಶಕ್ಕೆ ಹೋದಂತಾಗುತ್ತದೆ. ನಮಗೆ ಸ್ವಲ್ಪ ಸಮಯ ಕೊಡಿ. ನಾವಿದನ್ನು ಬದಲಿಸುತ್ತೇವೆ. ವಿದೇಶಿಗರೂ ಕೂಡ ಕೆಲಸ ಹುಡುಕಿಕೊಂಡು ಪಂಜಾಬ್​ಗೆ ಬರುವಂತೆ ಮಾಡುತ್ತೇವೆ’  ಎಂದು ಮಾನ್ ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕೇಳಿಸಿಕೊಳ್ಳಬಹುದು.  ಅಷ್ಟಲ್ಲದೆ, ದೇಶ ಬಿಟ್ಟು ಹೋಗಬೇಡಿ, ಇಲ್ಲಿ ಕಲಿತು, ನಮ್ಮ ದೇಶಕ್ಕೇ ನಿಮ್ಮ ಸೇವೆ ಮಾಡಿ. ಅವಕಾಶಕ್ಕಾಗಿ ಹುಡುಕಿಕೊಂಡು ಯಾರೂ ಬೇರೆ ದೇಶಗಳಿಗೆ ಹೋಗದಂತೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆಯನ್ನೂ ನೀಡಿದ್ದಾರೆ.

ಪಂಜಾಬ್​ ಸಿಎಂ ಈ ಭರವಸೆಯನ್ನು ನೀಡುತ್ತಿದ್ದಂತೆ ಕಾಂಗ್ರೆಸ್​ ಶಾಸಕ ಸುಖ್​ಪಾಲ್ ಸಿಂಗ್​ ಖೈರಾ ಪ್ರತಿಕ್ರಿಯೆ ನೀಡಿದ್ದಾರೆ.  ಪಂಜಾಬ್​​ಗೆ ವಿದೇಶಿಯರೂ ಉದ್ಯೋಗ ಹುಡುಕಿಕೊಂಡು ಬರಲಿ ಎಂದು ನಾನೂ ಆಶಿಸುತ್ತೇನೆ. ಆದರೆ ಹೀಗೆ ಪರದೇಶಗಳಿಂದ ಇಲ್ಲಿಗೆ ಜನ ಬರುವುದಕ್ಕೂ ಮೊದಲು ಪಂಜಾಬ್​​ನಲ್ಲಿಯೇ ಇರುವ ಹಲವು ಸಮಸ್ಯೆಗಳನ್ನು ಸಿಎಂ ಬಗೆಹರಿಸಿಕೊಳ್ಳಬೇಕು. ಮೊದಲು ಇಲ್ಲಿನ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಕಾನೂನು-ಸುವ್ಯವಸ್ಥೆಯನ್ನು ಸರಿಪಡಿಸಬೇಕು, ಭ್ರಷ್ಟಾಚಾರ ತೊಡೆದುಹಾಕಬೇಕು, ಪೊಲೀಸ್ ಮತ್ತು ನಾಗರಿಕ ಆಡಳಿತವನ್ನು ರಾಜಕೀಯಮುಕ್ತಗೊಳಿಸಬೇಕು. ಸಾಲ ಮಾಡಿಕೊಂಡ ರೈತರು, ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: Viral: ವೇಗವಾಗಿ ತಿರುಗುತ್ತಿದ್ದ ಫ್ಯಾನನ್ನು ಬರಿಗೈಲಿ ನಿಲ್ಲಿಸಿದ ಯುವಕ; ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು

Published On - 9:40 am, Sun, 10 April 22

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ