ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಮಿಳುನಾಡಿನ ಮಾಜಿ ಸಚಿವನ ಬಂಧನವಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ, AIADMK ನಾಯಕ ಮಣಿಕಂಠನ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮಣಿಕಂಠನ್ ಸಚಿವರಾಗಿದ್ದಾಗ ನಟಿಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡು, ಗರ್ಭಪಾತ ಮಾಡಿಸಿ ಈಗ ಖಾಸಗಿ ಫೋಟೋ ತೋರಿಸಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ನಟಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಎಂ.ಮಣಿಕಂಠನ್ನನ್ನು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಮಣಿಕಂಠನ್ರಿಗೆ ಮದ್ರಾಸ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಅಂದಿನಿಂದಲೂ ಮಣಿಕಂಠನ್ ತಲೆಮರೆಸಿಕೊಂಡಿದ್ದರು. ಸದ್ಯ ಈಗ ಅರೆಸ್ಟ್ ಆಗಿದ್ದಾರೆ.
Former AIADMK minister M Manikandan arrested in Bengaluru by Chennai City Police for allegedly raping a Malaysian woman, causing miscarriage as well as for criminal intimidation. He was evading arrest after Madras High Court had refused him anticipatory bail: Tamil Nadu Police
— ANI (@ANI) June 20, 2021
ಇದನ್ನೂ ಓದಿ: ಅಂತಾರಾಷ್ಟ್ರೀಯ ಪ್ರಯಾಣದ ನಿರ್ಬಂಧ ಸಡಿಸಿಲಿದ ದುಬೈ; ಭಾರತದಿಂದ ಹೋಗುವವರಿದ್ದರೆ ಈ ನಿಯಮಗಳ ಪಾಲನೆ ಕಡ್ಡಾಯ
Published On - 10:13 am, Sun, 20 June 21