AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತಾರಾಷ್ಟ್ರೀಯ ಪ್ರಯಾಣದ ನಿರ್ಬಂಧ ಸಡಿಸಿಲಿದ ದುಬೈ; ಭಾರತದಿಂದ ಹೋಗುವವರಿದ್ದರೆ ಈ ನಿಯಮಗಳ ಪಾಲನೆ ಕಡ್ಡಾಯ

ಭಾರತದಿಂದ ದುಬೈಗೆ ಹೊರಡುವ ಪ್ರಯಾಣಿಕರೂ ಸಹ ನಾಲ್ಕು ಗಂಟೆ ಮೊದಲು ರ್ಯಾಪಿಡ್​ ಪಿಸಿಆರ್​ ಟೆಸ್ಟ್​​ಗೆ ಒಳಗಾಗಬೇಕು. ಹಾಗೇ ದುಬೈ ತಲುಪಿದ ನಂತರ ಇನ್ನೊಮ್ಮೆ ಪಿಸಿಆರ್​ ಟೆಸ್ಟ್ ಮಾಡಿಸಬೇಕು.   ಟೆಸ್ಟ್​ಗೆ ಒಳಗಾಗುವವರೆಗೂ ಅವರು ಸಾಂಸ್ಥಿಕ ಕ್ವಾರಂಟೈನ್​​ನಲ್ಲೇ ಇರಬೇಕಾಗುತ್ತದೆ.

ಅಂತಾರಾಷ್ಟ್ರೀಯ ಪ್ರಯಾಣದ ನಿರ್ಬಂಧ ಸಡಿಸಿಲಿದ ದುಬೈ; ಭಾರತದಿಂದ ಹೋಗುವವರಿದ್ದರೆ ಈ ನಿಯಮಗಳ ಪಾಲನೆ ಕಡ್ಡಾಯ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 20, 2021 | 9:57 AM

Share

ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಭಾರತ ಸೇರಿ ಹಲವು ರಾಷ್ಟ್ರಗಳ ಪ್ರಯಾಣಿಕರಿಗೆ ನಿರ್ಬಂಧ ಹೇರಿದ್ದ ದುಬೈ ಸರ್ಕಾರ ಅದನ್ನೀಗ ಸಡಿಲಿಸಿದೆ. ಅಂದರೆ ದುಬೈನ ನಿವಾಸಿಗಳಾಗಿದ್ದು ಭಾರತದಕ್ಕೆ ಬಂದು, ಲಾಕ್​ಡೌನ್ ಕಾರಣದಿಂದ ಅಲ್ಲಿಗೆ ಹೋಗಲು ಸಾಧ್ಯವಾಗದೆ ಇದ್ದವರು ಈಗ ದುಬೈಗೆ ತೆರಳಬಹುದು. ಆದರೆ ಯುಎಇ ಅನುಮೋದಿತ ಕೊವಿಡ್​ ಲಸಿಕೆ ಎರಡೂ ಡೋಸ್​ ಪಡೆದವರು ದುಬೈ ಪ್ರವೇಶಿಸಬಹುದಾಗಿದೆ ಎಂದು ಅಲ್ಲಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದೀಗ ಭಾರತ, ದಕ್ಷಿಣಾಫ್ರಿಕಾ, ನೈಜೀರಿಯಾ ದೇಶಗಳ ಪ್ರಯಾಣಿಕರು ಜೂ.23ರಿಂದ ದುಬೈನ್ನು ಪ್ರವೇಶಿಸಬಹುದಾಗಿದೆ. ಆದರೆ ಕೊವಿಡ್​ 19 ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ. ಅದರೊಂದಿಗೆ ಕೆಲವು ಪರಿಷ್ಕೃತ ಶಿಷ್ಟಾಚಾರಗಳನ್ನು ದುಬೈ ಆಡಳಿತ ಪ್ರಕಟಿಸಿದ್ದು, ಅದನ್ನು ಪಾಲಿಸಲೇಬೇಕು ಎಂದು ಹೇಳಲಾಗಿದೆ.

ಭಾರತದಿಂದ ದುಬೈಗೆ ಪ್ರಯಾಣ ಬೆಳೆಸುವವರು ಮಾನ್ಯತೆ ಇರುವ ರೆಸಿಡೆನ್ಸ್​ ವೀಸಾ ಹೊಂದಿರಬೇಕು. ಯುಎಇಯಿಂದಲೂ ಅನುಮೋದನೆ ಹೊಂದಿದ ಕೊವಿಡ್​ 19 ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದಿರಬೇಕು. ಅಂದರೆ ಕೊವಿಶೀಲ್ಡ್​ ಲಸಿಕೆಯ ಎರಡೂ ಡೋಸ್​ ಪಡೆದಿರಬೇಕು. ಇನ್ನುಳಿದಂತೆ ಯುಎಇ ಸರ್ಕಾರ ಚೀನಾದ ಸಿನೋಫಾರ್ಮ್​ ಲಸಿಕೆ, ಫೈಝರ್​, ಸ್ಪುಟ್ನಿಕ್​ ವಿ ಲಸಿಕೆಗಳಿಗೆ ಅನುಮೋದನೆ ನೀಡಿದೆ. ಹಾಗೇ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾದ ಪ್ರಯಾಣಿಕರೂ ಕೂಡ (ಇಲ್ಲಿನ ನಿವಾಸಿಗಳು ಅಲ್ಲದಿದ್ದರೂ) ದುಬೈಗೆ ಪ್ರವೇಶ ಮಾಡಬಹುದಾಗಿದ್ದು, ಲಸಿಕೆ ಹಾಕಿಸಿಕೊಂಡಿರಬೇಕು ಮತ್ತು ಪಿಸಿಆರ್​ ನೆಗೆಟಿವ್​ ರಿಪೋರ್ಟ್ ಹೊಂದಿರಬೇಕು.

ಭಾರತದಿಂದ ದುಬೈಗೆ ಹೊರಡುವ ಪ್ರಯಾಣಿಕರೂ ಸಹ ನಾಲ್ಕು ಗಂಟೆ ಮೊದಲು ರ್ಯಾಪಿಡ್​ ಪಿಸಿಆರ್​ ಟೆಸ್ಟ್​​ಗೆ ಒಳಗಾಗಬೇಕು. ಹಾಗೇ ದುಬೈ ತಲುಪಿದ ನಂತರ ಇನ್ನೊಮ್ಮೆ ಪಿಸಿಆರ್​ ಟೆಸ್ಟ್ ಮಾಡಿಸಬೇಕು.   ಟೆಸ್ಟ್​ಗೆ ಒಳಗಾಗುವವರೆಗೂ ಅವರು ಸಾಂಸ್ಥಿಕ ಕ್ವಾರಂಟೈನ್​​ನಲ್ಲೇ ಇರಬೇಕಾಗುತ್ತದೆ. ಟೆಸ್ಟ್​ಗೆ ಒಳಗಾಗಿ 24ಗಂಟೆಯಲ್ಲಿ ರಿಪೋರ್ಟ್​ ಬರುವುದರಿಂದ ಈ ನಿಯಮ ಪಾಲನೆ ಕಡ್ಡಾಯವಾಗಿದೆ.

ಇದನ್ನೂ ಓದಿ: ನಾಳೆಯಿಂದ ಬೆಂಗಳೂರಿನಲ್ಲಿ ಎಲ್ಲವೂ ಬಹುತೇಕ ನಾರ್ಮಲ್.. ಹೋಟೆಲ್​ನಲ್ಲಿ ಟೇಬಲ್ ಸರ್ವಿಸ್ ಶುರು

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?