ನಾಳೆಯಿಂದ ಬೆಂಗಳೂರಿನಲ್ಲಿ ಎಲ್ಲವೂ ಬಹುತೇಕ ನಾರ್ಮಲ್.. ಹೋಟೆಲ್​ನಲ್ಲಿ ಟೇಬಲ್ ಸರ್ವಿಸ್ ಶುರು

ಬೆಂಗಳೂರಿಗರ ಮನೆವಾಸಕ್ಕೆ ಬಹುತೇಕ ಮುಕ್ತಿ ಸಿಕ್ಕಿದೆ. ನಾಳೆಯಿಂದ ಬೆಂಗಳೂರು ನಾರ್ಮಲ್ ಆಗಲಿದೆ. ಅರ್ಧ ಓಪನ್ ಆಗಿರೋ ಬೆಂಗಳೂರು, ನಾಳೆಯಿಂದ ಮುಕ್ಕಾಲು ತೆರೆದುಕೊಳ್ಳಲಿದೆ. ರಸ್ತೆ, ರಸ್ತೆಗಳು.. ಗಲ್ಲಿ ಗಲ್ಲಿಗಳು ಮತ್ತಷ್ಟು ಗಿಜಿಗುಡಲು ಸಜ್ಜಾಗಿದೆ. ಆದ್ರೆ, ಕಟ್ಟು ನಿಟ್ಟಿನ ನಿಯಮ ರೂಪಿಸಿರೋ ಸರ್ಕಾರ ಕೆಲವು ಕಂಡೀಷನ್ ಹಾಕಿದೆ.

ನಾಳೆಯಿಂದ ಬೆಂಗಳೂರಿನಲ್ಲಿ ಎಲ್ಲವೂ ಬಹುತೇಕ ನಾರ್ಮಲ್.. ಹೋಟೆಲ್​ನಲ್ಲಿ ಟೇಬಲ್ ಸರ್ವಿಸ್ ಶುರು
Follow us
TV9 Web
| Updated By: ಆಯೇಷಾ ಬಾನು

Updated on:Jun 20, 2021 | 9:54 AM

ಬೆಂಗಳೂರು: ಹೋಟೆಲ್‌ನಲ್ಲಿ ಕೂತು ತಿನ್ನೋ ಹಾಗಿರಲಿಲ್ಲ. ರಸ್ತೆಗಳ ಮೇಲಿನ ಬ್ಯಾರಿಕೇಡ್ ಎತ್ತಂಗಡಿಯಾಗಿದ್ರು ಎಲ್ಲಂದ್ರಲ್ಲಿ ಸುತ್ತಾಡಂಗಿರಲಿಲ್ಲ. ಜಿಮ್‌ನಲ್ಲಿ ವರ್ಕೌಟ್‌ ಮಾಡೋ ಹಾಗಿರಲಿಲ್ಲ. ಮೊದಲ ಹಂತದ ಅನ್‌ಲಾಕ್ ಆದ್ರೂ, ಲಿಮಿಟೇಷನ್ ಬದುಕು. ಕಂಡಿಷನ್‌ ಲೈಫು.. ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಕೂತು ಕೂತು ಬೆಂಡಾಗಿದ್ದ ಬೆಂಗಳೂರು ಮಂದಿಗೆ ಮತ್ತಷ್ಟು ರಿಲೀಫ್ ಸಿಕ್ಕಿದೆ. ನಾಳೆಯಿಂದ ರಾಜಧಾನಿ ರೀ ಓಪನ್ ಆಗ್ತಿದ್ದು ಸಿದ್ಧತೆ ಜೋರಾಗಿದೆ.

ನಾಳೆಯಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ರಿಲೀಫ್‌ ಈಗ ಜಾರಿಯಲ್ಲಿರೋ ಅನ್‌ಲಾಕ್‌ 1.0 ನಾಳೆಗೆ ಎಂಡ್ ಆಗ್ತಿದೆ. ನಾಳೆಯಿಂದ ಏನಿರುತ್ತೆ ಏನಿರಲ್ಲ ಅಂತಾ ಮಂಡೇ ಬಿಸಿ ಮಾಡ್ಕೊಂಡಿದ್ದ ಬೆಂಗಳೂರು ಮಂದಿಗೆ ಮತ್ತಷ್ಟು ರಿಲೀಫ್ ಸಿಗ್ತಿದೆ. ಸರ್ಕಾರ ರಿಲೀಫ್ ಕೊಡುವ ಜೊತೆಗೆ ಕೆಲವು ಕಂಡಿಷನ್‌ ಹಾಕಿದೆ. ನೀವು ಎಲ್ಲೆ ಹೋದ್ರೂ, ಕೆಲವು ರೂಲ್ಸ್‌ಗಳನ್ನ ಫಾಲೋ ಮಾಡ್ಲೇಬೇಕಿದೆ.

ಹೋಟೆಲ್ನಲ್ಲಿ ಟೇಬಲ್ ಸರ್ವಿಸ್ ಶುರು ಎರಡನೇ ಹಂತದಲ್ಲಿ ಹೋಟೆಲ್ ಸೇವೆಗೆ ಅವಕಾಶ ನೀಡಲಾಗಿದೆ. ಹೋಟೆಲ್ಗಳಲ್ಲಿ ಶೇಕಡಾ 50% ರಷ್ಟು ಗ್ರಾಹಕರಿಗೆ ಅವಕಾಶ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿಯೊಂದಿಗೆ ಸಿದ್ಧತೆ ಶುರುವಾಗಿದೆ. ಈ ಹಿಂದೆ ಒಂದನೇ ಹಂತದಲ್ಲಿ ಹೋಟೆಲ್ಗಳಿಗೆ ಪಾರ್ಸಲ್ ಸೇವೆ ನೀಡಲಾಗಿತ್ತು. ಆದರೆ ಈಗ ಜನರಿಗೆ ಹೋಟೆಲ್ಗಳಲ್ಲೇ ಕೂತು ತಿನ್ನುವ ಅವಕಾಶ ನೀಡಲಾಗಿದೆ. ಗ್ರಾಹಕರ ಸುರಕ್ಷಿತಾ ಕ್ರಮಗಳೊಂದಿಗೆ ಹೋಟೆಲ್ ಸಿದ್ಧತೆ ಆರಂಭವಾಗಿದೆ.

ನಾಳೆಯಿಂದ ಬಿಎಂಟಿಸಿ ಓಡಾಟ ಬೆಂಗಳೂರು ಜನರ ಸಂಚಾರ ಜೀವನಾಡಿ ಬಿಎಂಟಿಸಿ ನಾಳೆಯಿಂದ ರೀ ಸ್ಟಾರ್ಟ್ ಆಗ್ತಿದೆ. ಶೇಕಡಾ 50ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಿ ಬಸ್‌ ರೋಡಿಗಿಳಿಸಲು ಅನುಮತಿ ನೀಡಲಾಗಿದೆ. ಆದ್ರೆ, ಕೆಲವು ಕಂಡಿಷನ್ ಹಾಕಿರುವ ಸರ್ಕಾರ, ಬಸ್‌ನಲ್ಲಿ ನಿಂತು ಪ್ರಯಾಣಿಸಲು ಅವಕಾಶ ಇಲ್ಲ. ಡಬಲ್‌ ಸೀಟ್‌ನಲ್ಲಿ ಒಬ್ಬರು, ತ್ರಿಬಲ್‌ ಸೀಟ್‌ನಲ್ಲಿ ಇಬ್ಬರು ಮಾತ್ರ ಪ್ರಯಾಣಿಸಬಹುದು. ಬಸ್‌ನಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಡ್ಡಾಯ ಮಾಡಲಾಗಿದೆ.

ಇದಿಷ್ಟೇ ಅಲ್ಲ, ಮತ್ತಷ್ಟು ಕಂಡಿಷನ್ ಜೊತೆಗೆ ನಾಳೆಯಿಂದ ಬಸ್ ರೋಡಿಗಿಳಿಸಲು ಬಿಎಂಟಿಸಿ ಸಜ್ಜಾಗಿದೆ. ಮೊದಲ ಹಂತದಲ್ಲಿ ಒಂದೂವರೆ ಸಾವಿರದಿಂದ 2 ಸಾವಿರ ಬಸ್‌ಗಳನ್ನ ಓಡಿಸಲು ನಿರ್ಧರಿಸಿದೆ. ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ವ್ಯಾಕ್ಸಿನ್ ಕಡ್ಡಾಯ ಮಾಡಿದ್ದು, ಎರಡು ಡೋಸ್ ವ್ಯಾಕ್ಸಿನ್ ಪಡೆದವರಿಗೆ ಮಾತ್ರ ಡ್ಯೂಟಿಗೆ ಅವಕಾಶ ನೀಡಲಾಗಿದೆ. ಇನ್ನೂ ಬಿಎಂಟಿಸಿ ಎಸಿ ವೋಲ್ವೋ ಬಸ್‌ ಸ್ಟಾರ್ಟ್ ಮಾಡದಿರಲು ನಿರ್ಧರಿಸಿರುವ ಬಿಎಂಟಿಸಿ, ಕೊರೊನಾ ಹರಡದಂತೆ ತಡೆಯಲು ಗೂಗಲ್‌ ಪೇ, ಫೋನ್ ಪೇ ಮೂಲಕ ಟಿಕೆಟ್ ನೀಡೋ ವ್ಯವಸ್ಥೆ ಮಾಡ್ತಿದೆ.

ನಮ್ಮ ಮೆಟ್ರೋ ಓಡುತ್ತೆ ಇನ್ನೂ ಮೆಟ್ರೋ ಯಾವಾಗಪ್ಪ ಸ್ಟಾರ್ಟ್ ಆಗುತ್ತೆ. ಪರ್ಮಿಷನ್ ಕೊಡ್ತಾರಾ ಇಲ್ವಾ ಅಂತಿದ್ದವರಿಗೂ ಗುಡ್‌ನ್ಯೂಸ್ ಸಿಕ್ಕಿದೆ. ನಾಳೆಯಿಂದ ನಮ್ಮ ಮೆಟ್ರೋ ಮತ್ತೆ ಹಳಿಗೆ ಬರಲಿದೆ. ಆದ್ರೆ, ಶೇಕಡಾ 50 ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಮಾಸ್ಕ್, ದೈಹಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕಿದೆ.

ಬಾರ್‌ಗಳಲ್ಲಿ ಓನ್ಲಿ ಪಾರ್ಸೆಲ್ ಬಾರ್‌ಗಳಲ್ಲಿ ಈಗಿರುವ ರೂಲ್ಸ್‌ಗಳನ್ನೇ ಮುಂದುವರಿಸಲಾಗಿದೆ. ಅಂದ್ರೆ, ಕುಳಿತು ಎಣ್ಣೆ ಹೊಡೆಯೋಕೆ ಪರ್ಮಿಷನ್ ಕೊಟ್ಟಿಲ್ಲ. ಪಾರ್ಸೆಲ್‌ಗೆ ಅನುಮತಿ ನೀಡಲಾಗಿದ್ದು. ಬಾರ್, ಎಂಆರ್ಪಿ ಮಳಿಗೆಗಳಲ್ಲಿ ಮದ್ಯ ಪಾರ್ಸೆಲ್ ಸಿಗುತ್ತೆ. ಬೆಂಗಳೂರಿನಲ್ಲಿ ಈಗಿರುವ ಸಮಯವನ್ನ ಸಂಜೆ 5ಗಂಟೆವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

ಜಿಮ್‌ಗಳು ಓಪನ್ ಜಿಮ್‌ನಲ್ಲಿ ವರ್ಕೌಟ್‌ ಮಾಡೋರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ನಾಳೆಯಿಂದ ಜಿಮ್‌ಗಳು ಓಪನ್ ಆಗಲಿದ್ದು, ಶೇಕಡಾ 50ರಷ್ಟು ಮಂದಿ ವರ್ಕೌಟ್ ಮಾಡಬಹುದು. ಆದ್ರೆ, ಜಿಮ್‌ನಲ್ಲಿ ಯಾವುದೇ ಕಾರಣಕ್ಕೂ ಎಸಿ ಆನ್ ಮಾಡುವಂತಿಲ್ಲ.

ದಿನಸಿ ಖರೀದಿ ಸಮಯ ವಿಸ್ತರಣೆ ಬೆಂಗಳೂರು ಸೇರಿ 16 ಜಿಲ್ಲೆಯಲ್ಲಿ ದಿನಸಿ ಖರೀದಿ ಇಡೀ ದಿನ ಓಪನ್ ಇರುತ್ತೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆವರಗೆ ಅಗತ್ಯ ವಸ್ತು ಖರೀದಿಗೆ ಅನುಮತಿ ನೀಡಲಾಗಿದೆ. ಹಣ್ಣು, ತರಕಾರಿ, ಮಾಂಸ, ದಿನಬಳಕೆ ವಸ್ತು ಖರೀದಿಗೆ ಮುಕ್ತ ಅವಕಾಶ ಸಿಕ್ಕಿದೆ. ದಿನಸಿ ಅಂಗಡಿ ಜೊತೆಗೆ ಬೆಂಗಳೂರಿನಲ್ಲಿ ಎಲ್ಲ ರೀತಿಯ ಅಂಗಡಿಗಳ ಓಪನ್ಗೆ ಪರ್ಮಿಷನ್ ನೀಡಲಾಗಿದ್ದು, ಬಟ್ಟೆ, ಜ್ಯುವೆಲ್ಲರಿ, ಮೊಬೈಲ್ ಶಾಪ್ ಸೇರಿ ನಾಳೆಯಿಂದ ಎಲ್ಲ ಓಪನ್ ಆಗಲಿವೆ.

ನಾಳೆಯಿಂದ ಏನೆಲ್ಲ ರಿಲೀಫ್ ನಾಳೆಯಿಂದ ಸಿನಿಮಾ, ಧಾರಾವಾಹಿ ಚಿತ್ರೀಕರಣಕ್ಕೆ ಅವಕಾಶ ಇದೆ. ಆದ್ರೆ, ಹೊರಾಂಗಣದಲ್ಲಿ ಮಾತ್ರ ಶೂಟಿಂಗ್ ಮಾಡಬಹುದು. ಹೊರಾಂಗಣ ಕ್ರೀಡೆಗಳಿಗೆ ಅವಕಾಶ ಇದ್ದು, ವೀಕ್ಷಕರಿಗೆ ಎಂಟ್ರಿ ಇರೋದಿಲ್ಲ. ಸರ್ಕಾರಿ, ಖಾಸಗಿ ಕಚೇರಿಗಳು ಶೇಕಡಾ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಣೆ ಮಾಡಬಹುದು. ಲಾಡ್ಜ್, ರೆಸಾರ್ಟ್‌ನಲ್ಲೂ 50% ಗ್ರಾಹಕರಿಗೆ ಅವಕಾಶ ನೀಡಲಾಗಿದೆ. ಇಷ್ಟೆಲ್ಲ ಓಪನ್‌ಗೆ ಅವಕಾಶ ಕೊಟ್ಟಿರುವ ಸರ್ಕಾರ ಕೆಲವೊಂದಕ್ಕೆ ನಿರ್ಬಂಧ ಹೇರಿದೆ. ಹಾಗಿದ್ರೆ ಯಾವುದಕ್ಕೆಲ್ಲ ನಿರ್ಬಂಧ ಇರುತ್ತೆ ಅಂತ ನೋಡೋದಾದ್ರೆ..

ಏನೆಲ್ಲಾ ಬಂದ್ ಇರುತ್ತೆ? ಇಷ್ಟು ವಲಯಕ್ಕೆ ಪರ್ಮಿಷನ್ ಕೊಟ್ಟಿರುವ ಸರ್ಕಾರ, ಕೆಲವೊಂದಕ್ಕೆ ನಿರ್ಬಂಧ ಹೇರಿದೆ. ಈಜುಕೊಳ, ಸಭೆ ಸಮಾರಂಭ, ರಾಜಕೀಯ ಸಮಾವೇಶ, ಸ್ಕೂಲ್‌ಗಳು ಇರೋದಿಲ್ಲ. ಅಲ್ಲದೇ ಥಿಯೇಟರ್, ಶಾಪಿಂಗ್ ಮಾಲ್, ಎಸಿ ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಕ್ಲಬ್, ಪಬ್‌ಗಳು ಬೆಂಗಳೂರಿಲ್ಲಿ ಬಂದ್ ಆಗಿರುತ್ತೆ.

ಬೆಂಗಳೂರಿಗರ ವೀಕೆಂಡ್ ಮಸ್ತಿಗೆ ಬ್ರೇಕ್‌ ಬೆಂಗಳೂರು ವಾರದಲ್ಲಿ 5 ದಿನ ಅನ್‌ಲಾಕ್ ಆದ್ರೂ ಎರಡು ದಿನ ಲಾಕ್ ಆಗಲಿದೆ. ವೀಕೆಂಡ್‌ನಲ್ಲಿ ಬೆಂಗಳೂರು ಸ್ತಬ್ಧವಾಗಲಿದೆ. ಅಂದ್ರೆ ರಾಜಧಾನಿಯಲ್ಲೂ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತೆ. ಸಿಲಿಕಾನ್‌ ಸಿಟಿಯಲ್ಲಿ ವೀಕೆಂಡ್‌ ಕರ್ಫ್ಯೂ ಮುಂದುವರಿಯಲಿದ್ದು, ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ವೀಕೆಂಡ್ ಕರ್ಫ್ಯೂ ವೇಳೆ ಬೆಂಗಳೂರಿನಲ್ಲಿ ಸರ್ಕಾರಿ ಕಚೇರಿಗಳು ಓಪನ್ ಇರಲಿವೆ. ಎಲ್ಲ ಕೈಗಾರಿಕೆಗಳು ಓಪನ್ ಇರಲಿದ್ದು, ಕೆಲಸಕ್ಕೆ ತೆರಳುವಾಗ ID ಕಾರ್ಡ್ ತೋರಿಸಿ ತೆರಳಬಹುದು. ವೀಕೆಂಡ್ ಕರ್ಫ್ಯೂನಲ್ಲಿ ಅಗತ್ಯವಸ್ತು ಖರೀದಿಗೆ ಸಮಯ ನೀಡಲಾಗಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅಗತ್ಯವಸ್ತು ಖರೀದಿಗೆ, ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಮದ್ಯದಂಗಡಿ ಓಪನ್ ಇರಲಿದ್ದು, ಮದ್ಯದಂಗಡಿಗಳಲ್ಲಿ ಕೇವಲ ಪಾರ್ಸಲ್ ಅಷ್ಟೇ ಸಿಗುತ್ತೆ. ವೀಕೆಂಡ್ ಕರ್ಫ್ಯೂ ವೇಳೆ ಹೋಂ ಡೆಲಿವರಿಗೆ ರಾಜಧಾನಿಯಲ್ಲಿ ಯಾವುದೇ ನಿರ್ಬಂಧ ಇಲ್ಲ. ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಕೇವಲ ಪಾರ್ಸಲ್‌ಗೆ ಮಾತ್ರ ಅವಕಾಶ ಇರುತ್ತೆ. ಸರಕು ಸಾಗಣೆ ವಾಹನ, ಹೋಂ ಡೆಲಿವರಿಗೆ ಅಡ್ಡಿ ಇಲ್ಲ. ವೀಕೆಂಡ್ ಕರ್ಫ್ಯೂ ವೇಳೆ ಬಸ್, ಟ್ಯಾಕ್ಸಿಗಳ ಸಂಚಾರ ಇರುತ್ತೆ. ಬಸ್‌ನಲ್ಲಿ ಹೋಗೋರು ಬಸ್ ಟಿಕೆಟ್ ತೋರಿಸಿ ಜನರು ಸಂಚರಿಸಬಹುದು.

ರಾಜ್ಯ ರಾಜಧಾನಿಯಲ್ಲಿರುತ್ತೆ ನೈಟ್ ಕರ್ಫ್ಯೂ ಎರಡನೇ ಹಂತದ ಅನ್ಲಾಕ್‌ನಲ್ಲೂ, ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತೆ. ಸಂಜೆ 7ರಿಂದ ಬೆಳಗ್ಗೆ 5ರವರೆಗೆ ಬೆಂಗಳೂರಿನಲ್ಲಿ ನೈಟ್‌ ಕರ್ಫ್ಯೂ ಜಾರಿಯಲ್ಲಿರುತ್ತೆ. ಕರ್ಫ್ಯೂ ವೇಳೆ ಅಗತ್ಯವಸ್ತು ಸರಬರಾಜಿಗೆ ಯಾವುದೇ ಅಡ್ಡಿ ಇಲ್ಲ. ಐಡಿ ಕಾರ್ಡ್ ತೋರಿಸಿ ರಾತ್ರಿ ಪಾಳಿ ಕೆಲಸಕ್ಕೆ ತೆರಳಬಹುದು.

ಒಟ್ಟಿನಲ್ಲಿ ಬೆಂಗಳೂರಿಗೆ ಬೆಂಗಳೂರನ್ನೇ ಒಪನ್ ಮಾಡಿರೋ ಸರ್ಕಾರ, ಶಾಪಿಂಗ್‌, ವೀಕೆಂಡ್‌, ನೈಟ್‌ ಲೈಫ್‌ಗೆ ಬ್ರೇಕ್ ಹಾಕಿದೆ. ಸರ್ಕಾರ ರಿಲೀಫ್ ನೀಡಿದೆ ಅಂತ ನೀವು ಬೇಕಾಬಿಟ್ಟಿ ಓಡಾಡಬೇಡಿ.. ಕೊರೊನಾ ಕೇಸ್‌ಗಳು ಮಾತ್ರ ಕಮ್ಮಿಯಾಗಿದ್ದು ಬಿಟ್ರೆ, ಕಂಪ್ಲೀಟ್ ಆಗಿ ಕೊರೊನಾ ಕಮ್ಮಿಯಾಗಿಲ್ಲ. ಸೋ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರಿ, ಮತ್ತೆ ಲಾಕ್‌ಡೌನ್ ಆಗೋ ಹಾಗೇ ಮಾಡಬೇಡಿ.

ಇದನ್ನೂ ಓದಿ: ಶಿವರಾಜ್​ಕುಮಾರ್​-ಸುಧಾರಾಣಿ ‘ಆನಂದ್’​ ಚಿತ್ರಕ್ಕೆ 35 ವರ್ಷ; ಅಪರೂಪದ ಫೋಟೋ ಹಂಚಿಕೊಂಡ ನಟಿ

Published On - 9:51 am, Sun, 20 June 21