AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣದಲ್ಲಿ ನಾಳೆಯಿಂದಲೇ ಸಂಪೂರ್ಣ ಅನ್​ಲಾಕ್​; ಯಾವುದಕ್ಕೂ ನಿರ್ಬಂಧ ಇಲ್ಲ

ಕೊರೊನಾ ತೀವ್ರವಾಗಿ ಬಾಧಿಸಿದ ರಾಜ್ಯಗಳಲ್ಲಿ ತೆಲಂಗಾಣವೂ ಒಂದಾಗಿತ್ತು. ಶುಕ್ರವಾರ ಒಂದೇ ದಿನ ಅಲ್ಲಿ 1400 ಹೊಸ ಕೊರೊನಾ ಕೇಸ್​ಗಳು ದಾಖಲಾಗಿವೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.1.14ರಷ್ಟಿದೆ.

ತೆಲಂಗಾಣದಲ್ಲಿ ನಾಳೆಯಿಂದಲೇ ಸಂಪೂರ್ಣ ಅನ್​ಲಾಕ್​; ಯಾವುದಕ್ಕೂ ನಿರ್ಬಂಧ ಇಲ್ಲ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jun 19, 2021 | 6:21 PM

Share

ಹೈದರಾಬಾದ್: ಕೊರೊನಾ ಸೋಂಕಿನ ಪ್ರಮಾಣ ತಗ್ಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಸಂಪೂರ್ಣವಾಗಿ ಲಾಕ್​ಡೌನ್​ ನಿರ್ಬಂಧ ತೆರವುಗೊಳಿಸಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಇನ್ನು ಕೊರೊನಾ ನಿಯಂತ್ರಣ ಲಾಕ್​ಡೌನ್​ ಬೇಡ ಎಂದು ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರಂತೆ ಭಾನುವಾರದಿಂದಲೇ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಕೊರೊನಾ ತೀವ್ರವಾಗಿ ಬಾಧಿಸಿದ ರಾಜ್ಯಗಳಲ್ಲಿ ತೆಲಂಗಾಣವೂ ಒಂದಾಗಿತ್ತು. ಶುಕ್ರವಾರ ಒಂದೇ ದಿನ ಅಲ್ಲಿ 1400 ಹೊಸ ಕೊರೊನಾ ಕೇಸ್​ಗಳು ದಾಖಲಾಗಿವೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.1.14ರಷ್ಟಿದೆ. ಪ್ರತಿದಿನವೂ ದಾಖಲಾಗುವ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ, ವೈದ್ಯಕೀಯ ಉನ್ನತ ಅಧಿಕಾರಿಗಳ ತಂಡ ನೀಡಿದ ವರದಿಯ ಅನ್ವಯ ಈ ನಿರ್ಬಂಧ ತೆರವುಗೊಳಿಸಲಾಗುತ್ತಿದೆ. ಕೊರೊನಾ ನಮ್ಮ ರಾಜ್ಯದಲ್ಲಿ ಅಪಾಯಕಾರಿಯಲ್ಲದ ಮಟ್ಟದಲ್ಲಿ ನಿಯಂತ್ರಣಕ್ಕೆ ಬಂದಿದೆ ಎಂದೂ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯದಲ್ಲಿ ಲಾಕ್​ಡೌನ್​ ತೆರವು ಮಾಡುವ ಸಂಬಂಧ ಎಲ್ಲ ಇಲಾಖೆಗಳಿಗೂ ಸೂಚನೆ ನೀಡಲಾಗಿದೆ ಎಂದೂ ಹೇಳಿದೆ.

ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆಯ ಅಬ್ಬರ ಇಳಿಮುಖವಾಗುತ್ತಿರುವ ಬೆನ್ನಲ್ಲೇ ಹಲವು ರಾಜ್ಯಗಳು ನಿರ್ಬಂಧ ತೆರವುಗೊಳಿಸುತ್ತಿವೆ. ಆದರೆ ಒಂದೇ ಸಲಕ್ಕೆ ಯಾವುದೇ ರಾಜ್ಯದಲ್ಲೂ ಎಲ್ಲ ನಿರ್ಬಂದವನ್ನೂ ತೆಗೆದಿಲ್ಲ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂದಂತ, ಅರ್ಧ ಅನ್​ಲಾಕ್​ದಂತಹ ಕ್ರಮಗಳು ಇನ್ನೂ ಇವೆ. ಕೇಂದ್ರ ಸರ್ಕಾರವೂ ಕೂಡ ಒಮ್ಮಲೇ ಲಾಕ್​ಡೌನ್​ ತೆಗೆಯಬೇಡಿ ಎಂದೇ ಹೇಳಿದೆ. ಇಂದು ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್​ ಕುಮಾರ್​ ಬಲ್ಲಾ ಅವರು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು, ಟೆಸ್ಟ್​-ಟ್ರ್ಯಾಕ್​-ಟ್ರೀಟ್​-ವ್ಯಾಕ್ಸಿನೇಶನ್​ಗಳನ್ನು ಒಳಗೊಂಡ ಅನ್​ಲಾಕ್​ ಮಾಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: Sanchari Vijay : ನಟಿ ಕಂಗನಾ sanchari Vijay ಕರೆದು ಪಕ್ಕದಲ್ಲಿ ಕೂರುಸ್ಕೋಂಡ್ರಂತೆ!

Published On - 6:19 pm, Sat, 19 June 21