Lalu Yadav Health Update ಲಾಲೂ ಪ್ರಸಾದ್ ಯಾದವ್ ಜಾರಿ ಬಿದ್ದು ಮೂಳೆ ಮುರಿತ, ಆರೋಗ್ಯ ಸ್ಥಿರ: ತೇಜಸ್ವಿ ಯಾದವ್

| Updated By: ರಶ್ಮಿ ಕಲ್ಲಕಟ್ಟ

Updated on: Jul 07, 2022 | 12:44 PM

ಲಾಲೂ ಅವರಿಗೆ ಒಂದಕ್ಕಿಂತ ಹೆಚ್ಚು ಫ್ರ್ಯಾಕ್ಚರ್ ಆಗಿರುವುದಿಂದ ಅವರ ದೇಹ ಲಾಕ್ ಆದಂತಾಗಿದೆ. ಅವರಿಗೆ ಹೆಚ್ಚು ಚಲನೆ ಸಾಧ್ಯವಾಗುತ್ತಿಲ್ಲ ಎಂದು ಮಗ ತೇಜಸ್ವಿ ಯಾದವ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ

Lalu Yadav Health Update ಲಾಲೂ ಪ್ರಸಾದ್ ಯಾದವ್ ಜಾರಿ ಬಿದ್ದು ಮೂಳೆ ಮುರಿತ, ಆರೋಗ್ಯ ಸ್ಥಿರ: ತೇಜಸ್ವಿ ಯಾದವ್
ಲಾಲೂ ಪ್ರಸಾದ್ ಯಾದವ್
Follow us on

ಪಟನಾ: ಬಿಹಾರದ (Bihar) ಮಾಜಿ ಸಿಎಂ, ರಾಷ್ಟ್ರೀಯ ಜನತಾ ದಳ(RJD) ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಅವರನ್ನು ಬುಧವಾರ ರಾತ್ರಿ ಏರ್ ಲಿಫ್ಟ್ ಮಾಡಿ ದೆಹಲಿ ಏಮ್ಸ್ ಗೆ ದಾಖಲಿಸಲಾಗಿದೆ. ಪಟನಾದಲ್ಲಿರುವ ತಮ್ಮ ಮನೆಯ ಮೆಟ್ಟಿಲಿನಿಂದ ಜಾರಿ ಬಿದ್ದು ಲಾಲೂ ಅವರ ಮೂಳೆ ಮುರಿದಿದ್ದು ಚಿಕಿತ್ಸೆ ಮುಂದುವರಿದಿದೆ. ಲಾಲೂ ಅವರಿಗೆ ಒಂದಕ್ಕಿಂತ ಹೆಚ್ಚು ಫ್ರ್ಯಾಕ್ಚರ್ ಆಗಿರುವುದಿಂದ ಅವರ ದೇಹ ಲಾಕ್ ಆದಂತಾಗಿದೆ. ಅವರಿಗೆ ಹೆಚ್ಚು ಚಲನೆ ಸಾಧ್ಯವಾಗುತ್ತಿಲ್ಲ ಎಂದು ಮಗ ತೇಜಸ್ವಿ ಯಾದವ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಕಿಡ್ನಿ ಕಸಿಗಾಗಿ ಅವರನ್ನು ಸಿಂಗಾಪುರ್​​ಗೆ ಕರೆದುಕೊಂಡುವ ಯೋಜನೆ ಇತ್ತು. ಆದರೆ ಈಗ ಮೂಳೆ ಮುರಿತ ಸಂಭವಿಸಿರುವುದರಿಂದ ದೆಹಲಿಯ ವೈದ್ಯರ ಸಲಹೆಯನ್ನು ನಾವು ಪಾಲಿಸುತ್ತೇವೆ. ಅವರು ಸಮ್ಮತಿಸಿದರೆ ನಾವು ವಿದೇಶಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದು ತೇಜಸ್ವಿ ಹೇಳಿದ್ದಾರೆ.

ಏತನ್ಮಧ್ಯೆ, ಲಾಲೂ ಅವರ ಪತ್ನಿ ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ ಅವರು ಬುಧವಾರ ದೆಹಲಿಗೆ ತಲುಪಿದ್ದು, ಅವರ ಆರೋಗ್ಯ ಈಗ ಸ್ವಲ್ಪ ಸುಧಾರಿಸಿದೆ ಎಂದು ಹೇಳಿದ್ದಾರೆ.ಚಿಂತಿಸ ಬೇಡಿ, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಅವರು ಗುಣಮುಖವಾಗುತ್ತಾರೆ. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸಿ ಎಂದು ರಾಬ್ರಿ ಹೇಳಿದ್ದಾರೆ.

ಲಾಲೂ ಭೇಟಿ ಮಾಡಿದ ನಿತೀಶ್ ಕುಮಾರ್

ದೆಹಲಿ ಏಮ್ಸ್ ಗೆ ಲಾಲೂ ಅವರನ್ನು ಶಿಫ್ಟ್ ಮಾಡುವ ಮುನ್ನ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಲಾಲೂ ಅವರನ್ನು ಭೇಟಿ ಮಾಡಿದ್ದಾರೆ. ನಿತೀಶ್ ಅವರ ವೈದ್ಯರಲ್ಲಿ ಮಾತನಾಡಿದ್ದು, ಲಾಲೂ ಪುತ್ರರಾದ ತೇಜಸ್ವಿ ಮತ್ತು ತೇಜಸ್ವಿ ಪ್ರತಾಪ್ ಅವರನ್ನೂ ಭೇಟಿ ಮಾಡಿದ್ದಾರೆ.  ಆಸ್ಪತ್ರೆಗೆ ದಾಖಲಾದ ನಂತರ ಲಾಲೂ ಅವರ ಆರೋಗ್ಯ ಸುಧಾರಿಸಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ದೆಹಲಿಗೆ ಕರೆದೊಯ್ಯುವುದು ಉತ್ತಮ. ಅವರು ಶೀಘ್ರ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ನಿತೀಶ್ ಹೇಳಿದ್ದಾರೆ.

Published On - 12:33 pm, Thu, 7 July 22