Eknath Shinde: ಪ್ರಜ್ಞೆ ತಪ್ಪಿದ ಮಹಿಳಾ ಕಾನ್ಸ್ಟೆಬಲ್ಗೆ ಸಹಾಯ ಮಾಡಿದ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ; ವಿಡಿಯೋ ವೈರಲ್
ಮಹಿಳಾ ಕಾನ್‌ಸ್ಟೆಬಲ್ ಮೂರ್ಛೆ ತಪ್ಪಿ ಬೀಳುವುದನ್ನು ನೋಡಿದ ಏಕನಾಥ್ ಶಿಂಧೆ, ಕೂಡಲೇ ಅತ್ತ ಹೋಗಿ, ಆಕೆಗೆ ನೀರು, ಕುರ್ಚಿ ನೀಡಿ ಆಸ್ಪತ್ರೆಗೆ ದಾಖಲಿಸಲು ತನ್ನ ಸಿಬ್ಬಂದಿಗೆ ಸೂಚಿಸಿದ್ದಾರೆ.
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಥಾಣೆ ಕಲೆಕ್ಟರ್ ಕಚೇರಿಗೆ ಹೋಗಿದ್ದಾಗ ಅಲ್ಲಿ ಕರ್ತವ್ಯದಲ್ಲಿದ್ದ ಥಾಣೆ ಪೊಲೀಸ್ ಕಮಿಷನರೇಟ್‌ನ ಮಹಿಳಾ ಕಾನ್‌ಸ್ಟೆಬಲ್ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ನೋಡಿ, ಕೂಡಲೇ ಆಕೆಗೆ ಏನಾಗಿದೆ ಎಂದು ವಿಚಾರಿಸಿದ್ದಾರೆ. ಆ ಮಹಿಳಾ ಕಾನ್‌ಸ್ಟೆಬಲ್ ಸಹಾಯಕ್ಕೆ ಧಾವಿಸಿದ ಸಿಎಂ ಏಕನಾಥ್ ಶಿಂಧೆ ಆಕೆಯನ್ನು ಆಸ್ಪತ್ರೆಗೆ ಕಳುಹಿಸಲು ವ್ಯವಸ್ಥೆ ಮಾಡಿದ್ದಾರೆ.
ಮಹಿಳಾ ಕಾನ್‌ಸ್ಟೆಬಲ್ ಮೂರ್ಛೆ ತಪ್ಪಿ ಬೀಳುವುದನ್ನು ನೋಡಿದ ಏಕನಾಥ್ ಶಿಂಧೆ, ಕೂಡಲೇ ಅತ್ತ ಹೋಗಿ, ಆಕೆಗೆ ನೀರು, ಕುರ್ಚಿ ನೀಡಿ ಆಸ್ಪತ್ರೆಗೆ ದಾಖಲಿಸಲು ತನ್ನ ಸಿಬ್ಬಂದಿಗೆ ಸೂಚಿಸಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜನಸಂದಣಿಯಲ್ಲಿ ಮಹಿಳಾ ಕಾನ್‌ಸ್ಟೇಬಲ್ ಅಸ್ವಸ್ಥಗೊಂಡು ಬಿದ್ದು, ಆಕೆಯ ಕೈ ಮತ್ತು ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆಳಗೆ ಬಿದ್ದಿದ್ದ ಆಕೆಗೆ ಏಳಲು ಸಹಾಯ ಮಾಡಿದ ಸಿಎಂ ಶಿಂಧೆ ಕುರ್ಚಿ ನೀಡಿ, ನೀರು ಕೊಟ್ಟು ಉಪಚರಿಸಿದ್ದಾರೆ. ಬಳಿಕ ಆಸ್ಪತ್ರೆಗೂ ಕಳುಹಿಸಿದ್ದಾರೆ.
ಇದನ್ನೂ ಓದಿ: Maharashtra Rain: ಮಹಾರಾಷ್ಟ್ರದ ಥಾಣೆಯಲ್ಲಿ ಪ್ರವಾಹ ಭೀತಿ; ಸಿಎಂ ಏಕನಾಥ್ ಶಿಂಧೆ ಮನೆ ಆವರಣಕ್ಕೂ ನುಗ್ಗಿದ ಮಳೆ ನೀರು
ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ಗಾಯಗೊಂಡಿದ್ದ ಮಹಿಳಾ ಕಾನ್ಸ್ಟೆಬಲ್ರನ್ನು ಚಿಕಿತ್ಸೆಗಾಗಿ ಥಾಣೆಯ ಖಾಸಗಿ ಆಸ್ಪತ್ರೆಗೆ ಕಳುಹಿಸಲು ಸಿಎಂ ಶಿಂಧೆ ವ್ಯವಸ್ಥೆ ಮಾಡಿದ್ದಾರೆ. ನಿನ್ನೆ ಥಾಣೆ ಕಲೆಕ್ಟರೇಟ್‌ನಲ್ಲಿ ಸಿಎಂ ಏಕನಾಥ್ ಶಿಂಧೆ ಸಭೆ ನಡೆಸಿ ವಾಪಾಸ್ ತೆರಳುವಾಗ ಮಹಿಳಾ ಕಾನ್‌ಸ್ಟೆಬಲ್ ಅನಾರೋಗ್ಯದಿಂದ ಕೆಳಗೆ ಬಿದ್ದಿದ್ದರು.
ಹಿಂದಿನ ಉದ್ಧವ್ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯ ಎದ್ದ ನಂತರ ಏಕನಾಥ್ ಶಿಂಧೆ ಕಳೆದ ವಾರ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಬಿಜೆಪಿಯ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಬಂಡಾಯ ಶಿವಸೇನೆ ಬಣವನ್ನು ಬೆಂಬಲಿಸಿದ್ದರು. ಅವರ ಬೆಂಬಲದಿಂದ ಸರ್ಕಾರ ರಚಿಸಿದ ಶಿಂಧೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
Published On - 1:19 pm, Thu, 7 July 22