Eknath Shinde: ಮರ್ಸಿಡಿಸ್ ಬೆಂಜ್ ಕಾರನ್ನು ಆಟೋರಿಕ್ಷಾ ಹಿಂದಿಕ್ಕಿದೆ; ಉದ್ಧವ್ ಠಾಕ್ರೆಗೆ ಏಕನಾಥ್ ಶಿಂಧೆ ತಿರುಗೇಟು
ಬಿಜೆಪಿ ಎಂವಿಎ ಸರ್ಕಾರವನ್ನು ತ್ರಿಚಕ್ರ ಸರ್ಕಾರ ಎಂದು ಕರೆಯುತ್ತಿತ್ತು. ಆದರೆ ಈಗ ತ್ರಿಚಕ್ರ ವಾಹನವಾದ ಆಟೋ ಚಲಾಯಿಸಿದ ವ್ಯಕ್ತಿಯೇ ಸರ್ಕಾರ ನಡೆಸುತ್ತಿದ್ದಾರೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದರು. ಅದಕ್ಕೆ ಏಕನಾಥ್ ಶಿಂಧೆ ತಿರುಗೇಟು ನೀಡಿದ್ದಾರೆ.
ಮುಂಬೈ: ಶಿವಸೇನೆಯ ಬಂಡಾಯ ಶಾಸಕರನ್ನು (Shiv Sena Rebels) ಮಂಗಳವಾರ ಟೀಕಿಸಿದ್ದ ಮಾಜಿ ಸಿಎಂ ಉದ್ಧವ್ ಠಾಕ್ರೆ (Uddhav Thackeray) ಸಿಎಂ ಏಕನಾಥ್ ಶಿಂಧೆ (Eknath Shinde) ಅವರನ್ನು ಆಟೋ ಡ್ರೈವರ್ ಎಂದು ಕರೆದಿದ್ದರು. ಆಟೋ ಬಹಳ ವೇಗವಾಗಿ ಓಡುತ್ತಿದೆ. ಡಿಸಿಎಂ ದೇವೇಂದ್ರ ಫಡ್ನವಿಸ್ ಸಿಎಂ ಶಿಂಧೆಗೆ ಆಟೋ ನಿಲ್ಲಿಸಲು ಹೇಳಿದರೂ ಅದು ನಿಲ್ಲಲಾಗದ ಪರಿಸ್ಥಿತಿ ತಲುಪಲಿದೆ. ಏಕೆಂದರೆ ಆ ಆಟೋದ ಬ್ರೇಕ್ ಫೇಲ್ ಆಗಿದೆ ಎಂದು ಹೇಳಿದ್ದರು. ಆ ಹೇಳಿಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ, ನಮ್ಮ ಆಟೋರಿಕ್ಷಾ ಮರ್ಸಿಡಿಸ್ ಬೆಂಜ್ ಕಾರನ್ನೇ ಹಿಂದಿಕ್ಕಿ ಗೆದ್ದಿದೆ ಎಂದು ಹೇಳಿದ್ದಾರೆ.
ಎಎನ್‌ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಸಿಎಂ ಏಕನಾಥ್ ಶಿಂಧೆ, ತಮ್ಮ ನೇತೃತ್ವದ ಸರ್ಕಾರವು ಸಾಮಾನ್ಯ ಜನರಿಗಾಗಿ ಇರುವ ಸರ್ಕಾರವಾಗಿದೆ. ಸಮಾಜದ ಎಲ್ಲಾ ವರ್ಗಗಳಿಗೆ ನ್ಯಾಯವನ್ನು ನೀಡಲು ಬದ್ಧವಾಗಿದೆ. ಪ್ರತಿಯೊಬ್ಬರೂ ಇದು ನಮ್ಮ ಸರ್ಕಾರ ಎಂದು ಭಾವಿಸುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡುತ್ತದೆ ಎಂದಿದ್ದಾರೆ.
#WATCH | We held discussions (with Uddhav Thackeray) several times that we aren’t getting any benefit from Maha Vikas Aghadi. Despite our party’s CM, we came at no.4 in Nagar Panchayat(polls)…We tried but we didn’t succeed(in making him understand): Maharashtra CM Eknath Shinde pic.twitter.com/xtk18LY1lX
— ANI (@ANI) July 6, 2022
“ಆಟೋ ರಿಕ್ಷಾ ಮರ್ಸಿಡಿಸ್ ಅನ್ನು ಹಿಂದೆ ಹಾಕಿದೆ. ಈ ಸರ್ಕಾರವು ಸಾಮಾನ್ಯ ಜನರಿಗಾಗಿ ಇದೆ. ಇದು ಪ್ರತಿ ವರ್ಗಕ್ಕೂ ನ್ಯಾಯವನ್ನು ನೀಡುವ ಸರ್ಕಾರವಾಗಿದೆ. ಪ್ರತಿಯೊಂದು ಘಟಕವೂ, ಪ್ರತಿಯೊಬ್ಬರೂ ಇದು ನನ್ನ ಸರ್ಕಾರ ಎಂದು ಭಾವಿಸುವ ರೀತಿಯಲ್ಲಿ ನಾವು ಕಾರ್ಯನಿರ್ವಹಿಸುತ್ತೇವೆ. ಹಿಂದಿನ ಸರ್ಕಾರಕ್ಕೂ ಈಗಿನ ಸರ್ಕಾರಕ್ಕೂ ಇರುವ ವ್ಯತ್ಯಾಸ ಸದ್ಯದಲ್ಲೇ ಜನರಿಗೆ ಗೊತ್ತಾಗಲಿದೆ ಎಂದು ಶಿಂಧೆ ಹೇಳಿದ್ದಾರೆ.
ಇದನ್ನೂ ಓದಿ: Eknath Shinde: ಆ ಘಟನೆಯಿಂದ ಬದುಕೇ ಸಾಕೆನಿಸಿತ್ತು; ಮಕ್ಕಳ ನೆನೆದು ಭಾವುಕರಾದ ಏಕನಾಥ್ ಶಿಂಧೆ
ಬಿಜೆಪಿ ಎಂವಿಎ ಸರ್ಕಾರವನ್ನು ತ್ರಿಚಕ್ರ ಸರ್ಕಾರ ಎಂದು ಕರೆಯುತ್ತಿತ್ತು. ಆದರೆ ಈಗ ತ್ರಿಚಕ್ರ ವಾಹನವಾದ ಆಟೋ ಚಲಾಯಿಸಿದ ವ್ಯಕ್ತಿಯೇ ಸರ್ಕಾರ ನಡೆಸುತ್ತಿದ್ದಾರೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. ಏಕನಾಥ್ ಶಿಂಧೆ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.
#WATCH | “…In 2019, we contested polls with BJP but govt was formed with Congress, NCP & due to that when issues like Hindutva, Savarkar, Mumbai bomb blasts, Dawood Ibrahim, and others came, we were not able to take any decision..,” says Maharashtra CM Eknath Shinde (1/2) pic.twitter.com/V1A5lklmqF
— ANI (@ANI) July 6, 2022
ಸರ್ಕಾರ ರಚನೆಯಲ್ಲಿ ಬಿಜೆಪಿ ಬೆಂಬಲವನ್ನು ಉಲ್ಲೇಖಿಸಿದ ಏಕನಾಥ್ ಶಿಂಧೆ, ಬಿಜೆಪಿ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಇತ್ತು. ಆದರೆ ಈ 50 ಜನರು ಹಿಂದುತ್ವದ ನಿಲುವು, ಸೈದ್ಧಾಂತಿಕ ನಿಲುವು ತಳೆದಿದ್ದಾರೆ, ಅವರ ಅಜೆಂಡಾ ಅಭಿವೃದ್ಧಿ ಮತ್ತು ಹಿಂದುತ್ವವಾಗಿದೆ. ಹೀಗಾಗಿ, ನಾವು ಅವರನ್ನು ಬೆಂಬಲಿಸಬೇಕು ಎಂದು ಬಿಜೆಪಿ ನಾಯಕರು ನಮಗೆ ಬೆಂಬಲ ನೀಡಿ ಸರ್ಕಾರ ರಚಿಸಲು ಸಹಾಯ ಮಾಡಿದ್ದಾರೆ. ಅವರ ಪಕ್ಷದಲ್ಲಿ ಹೆಚ್ಚು ಸಂಖ್ಯೆಯ ಶಾಸಕರಿದ್ದರೂ ಅವರು ನಮ್ಮನ್ನು ಬೆಂಬಲಿಸಿದ್ದಾರೆ. ಅವರು ನಮಗೆ ಮುಖ್ಯಮಂತ್ರಿ ಹುದ್ದೆಯನ್ನೂ ನೀಡಿದ್ದಾರೆ ಎಂದು ಶಿಂಧೆ ಹೇಳಿದ್ದಾರೆ.
ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯಿರಿ, ಅಭಿವೃದ್ಧಿಯತ್ತ ಕೊಂಡೊಯ್ಯಿರಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮುಂದಕ್ಕೆ ಕೊಂಡೊಯ್ಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಹೇಳಿದ್ದಾರೆ. ಅಭಿವೃದ್ಧಿಯ ಪ್ರಯತ್ನಗಳಲ್ಲಿ ತಮ್ಮ ಮತ್ತು ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲ ನೀಡುವ ಭರವಸೆಯನ್ನು ಪ್ರಧಾನಮಂತ್ರಿಯವರು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಶಿಂಧೆ ಹೇಳಿದ್ದಾರೆ.