Sign In

By signing in or creating an account, you agree with Associated Broadcasting Company's Terms & Conditions and Privacy Policy.

Eknath Shinde: ಆ ಘಟನೆಯಿಂದ ಬದುಕೇ ಸಾಕೆನಿಸಿತ್ತು; ಮಕ್ಕಳ ನೆನೆದು ಭಾವುಕರಾದ ಏಕನಾಥ್ ಶಿಂಧೆ

ಅದು ನನ್ನ ಜೀವನದ ಕರಾಳ ದಿನ. ಈ ಘಟನೆ ನಡೆದದ್ದು 2000ರ ಜೂನ್ 2ರಂದು. ಆಗ ನನ್ನೊಳಗೆ ಏನೂ ಉಳಿದಿರಲಿಲ್ಲ, ನಾನು ಮಾನಸಿಕವಾಗಿ ದಣಿದಿದ್ದೆ ಎಂದು ಸಿಎಂ ಏಕನಾಥ್ ಶಿಂಧೆ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

Eknath Shinde: ಆ ಘಟನೆಯಿಂದ ಬದುಕೇ ಸಾಕೆನಿಸಿತ್ತು; ಮಕ್ಕಳ ನೆನೆದು ಭಾವುಕರಾದ ಏಕನಾಥ್ ಶಿಂಧೆ
ಸಿಎಂ ಏಕನಾಥ್ ಶಿಂಧೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 05, 2022 | 9:13 AM

ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ತಮ್ಮ ಮೊದಲ ಭಾಷಣ ಮಾಡಿದ್ದಾರೆ. ತಮ್ಮ ಭಾಷಣದ ಸಮಯದಲ್ಲಿ ಸಿಎಂ ಏಕನಾಥ್ ಶಿಂಧೆ ತಮ್ಮ ಕುಟುಂಬವು ಎದುರಿಸುತ್ತಿರುವ ಕಷ್ಟಗಳನ್ನು ವಿವರಿಸುವಾಗ ಭಾವುಕರಾಗಿ, ಕೆಲಕಾಲ ಮಾತು ನಿಲ್ಲಿಸಿದರು. ತಮ್ಮ ಮಕ್ಕಳು ಸಾವನ್ನಪ್ಪಿದ ದಿನಗಳನ್ನು ನೆನೆದು ಭಾವುಕರಾದ ಅವರು ಕರಾಳ ದಿನಗಳ ಬಗ್ಗೆ ಅಧಿವೇಶನದಲ್ಲಿ ಹೇಳಿಕೊಂಡರು.

ಶಿವಸೇನೆಯು ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗ ನಾನು ಬಹುತೇಕ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವವನಿದ್ದೆ. ಆದರೆ, ಶಿವಸೇನೆ ಪಕ್ಷದೊಳಗೆ ಆಕ್ಷೇಪ ವ್ಯಕ್ತವಾದ ನಂತರ ನಾನು ಸಿಎಂ ಹುದ್ದೆಯನ್ನು ನಿರಾಕರಿಸಿದೆ ಎಂದು ಏಕನಾಥ್ ಶಿಂಧೆ ಸದನದಲ್ಲಿ ಬಹಿರಂಗಪಡಿಸಿದ್ದಾರೆ.

ಮಹಾರಾಷ್ಟ್ರದ ಮಾಜಿ ಸಿಎಂ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಾಗ ನನ್ನ ಕುಟುಂಬಕ್ಕೆ ಬೆದರಿಕೆ ನೀಡಲಾಯಿತು ಎಂದು ಏಕನಾಥ್ ಶಿಂಧೆ ಆರೋಪಿಸಿದ್ದಾರೆ. ಶಿಂಧೆ ತಮ್ಮ ಮಕ್ಕಳು ಮತ್ತು ಅವರ ತಾಯಿ ಕೆಲವು ವರ್ಷಗಳ ಹಿಂದೆ ಹೇಗೆ ಸಾವನ್ನಪ್ಪಿದರು ಎಂಬ ಬಗ್ಗೆ ತಮ್ಮ ಭಾಷಣದಲ್ಲಿ ಹೇಳುವಾಗ ಭಾವುಕರಾಗಿ ಕಣ್ಣೀರು ಹಾಕಿದರು.

ಅವರು ನನ್ನ ಕುಟುಂಬದ ಮೇಲೆ ದಾಳಿ ಮಾಡಿದರು. ನನ್ನ ತಂದೆ ಬದುಕಿದ್ದಾರೆ, ಆದರೆ, ನನ್ನ ತಾಯಿ ಸಾವನ್ನಪ್ಪಿದರು. ನನ್ನ ಹೆತ್ತವರಿಗೆ ನಾನು ಹೆಚ್ಚು ಸಮಯ ನೀಡಲು ಸಾಧ್ಯವಾಗಲಿಲ್ಲ. ನಾನು ಮನೆಗೆ ಬರುವಾಗ ಅವರು ಮಲಗಿರುತ್ತಿದ್ದರು. ನಾನು ಮಲಗಿರುವಾಗ ಅವರು ಕೆಲಸಕ್ಕೆ ಹೋಗುತ್ತಿದ್ದರು ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.

ಇದನ್ನೂ ಓದಿ: Maharashtra Politics: ಏಕನಾಥ್ ಶಿಂಧೆ ಬೆಂಬಲಿಗ ಶಾಸಕರಿಗೆ ಅಧಿವೇಶನದಲ್ಲಿ ಭಾಗವಹಿಸಲು ಅವಕಾಶ ನೀಡಬಾರದು; ಠಾಕ್ರೆ ತಂಡದಿಂದ ಸುಪ್ರೀಂ ಕೋರ್ಟ್​ಗೆ ಮನವಿ

ನನ್ನ ಮಗ ಶ್ರೀಕಾಂತ್‌ಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗಲಿಲ್ಲ. ನನ್ನ ಇಬ್ಬರು ಮಕ್ಕಳು ಕೂಡ ಸಾವನ್ನಪ್ಪಿದರು. ಆ ಸಮಯದಲ್ಲಿ ಬದುಕೇ ಮುಗಿದುಹೋಯಿತು ಎನಿಸಿಬಿಟ್ಟಿತ್ತು. ಆಗ ಆನಂದ್ ದಿಘೆ ಅವರು ನನಗೆ ಸಾಂತ್ವನ ಹೇಳಿದರು. ಇನ್ನು ಬದುಕಲು ಏನಿದೆ? ಇನ್ನಾದರೂ ನಾನು ನನ್ನ ಕುಟುಂಬದೊಂದಿಗೆ ಇರಬೇಕು ಎಂದು ನಿರ್ಧರಿಸಿದ್ದೆ. ಆದರೆ, ಆನಂದ್ ದಿಘೆ ಅವರು ನೀನು ಬೇರೆಯವರ ಕಣ್ಣೀರನ್ನು ಒರೆಸುವ ಕೆಲಸ ಮಾಡಬೇಕು, ಹೀಗೆಲ್ಲ ಕಣ್ಣೀರು ಹಾಕುತ್ತಾ ಕೂರಬಾರದು ಎಂದು ನನಗೆ ಧೈರ್ಯ ತುಂಬಿದರು. ನನ್ನ ರಾಜಕೀಯದ ಎಲ್ಲ ಗೆಲುವಿಗೆ ಆನಂದ್ ದಿಘೆ ಅವರೇ ಕಾರಣ. ಆನಂದ್ ದಿಘೆ ನನಗೆ ಮಕ್ಕಳ ಸಾವಿನ ಆಘಾತದಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿದರು. ನನ್ನನ್ನು ವಿಧಾನಸಭೆಯಲ್ಲಿ ಶಿವಸೇನೆಯ ನಾಯಕನನ್ನಾಗಿ ಮಾಡಿದರು ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.

ಅದು ನನ್ನ ಜೀವನದ ಕರಾಳ ದಿನ. ಈ ಘಟನೆ ನಡೆದದ್ದು 2000ರ ಜೂನ್ 2ರಂದು. ಆಗ ನನ್ನೊಳಗೆ ಏನೂ ಉಳಿದಿರಲಿಲ್ಲ, ನಾನು ಮಾನಸಿಕವಾಗಿ ದಣಿದಿದ್ದೆ. ಆ ಸಮಯದಲ್ಲಿ ಆನಂದ್ ದಿಘೆ ಸಾಹೇಬರು ಪ್ರತಿದಿನ ನನ್ನ ಮನೆಗೆ ಬಂದು ನನ್ನೊಂದಿಗೆ ಮಾತನಾಡುತ್ತಿದ್ದರು. ತಾವು ಯಾವಾಗಲೂ ನನ್ನ ಹಿಂದೆ ಬೆಂಬಲವಾಗಿ ನಿಲ್ಲುವುದಾಗಿ ನನಗೆ ಭರವಸೆ ನೀಡಿದ್ದರು ಎಂದು ಏಕನಾಥ್ ಶಿಂಧೆ ಕಣ್ತುಂಬಿಕೊಂಡರು.

ಇದನ್ನೂ ಓದಿ: Maharashtra Floor Test Result 2022: ವಿಶ್ವಾಸಮತಯಾಚನೆಯಲ್ಲಿ ಗೆದ್ದು ಬೀಗಿದ ಏಕನಾಥ್ ಶಿಂಧೆ; ಸಿಎಂಗೆ 164 ಶಾಸಕರ ಬೆಂಬಲ

ಏಕನಾಥ್ ಶಿಂಧೆಯವರ ಹಿರಿಯ ಮಗ ಶಿವಸೇನೆಯ ಸಂಸದರಾಗಿದ್ದಾರೆ. ಅವರ ಇಬ್ಬರು ಮಕ್ಕಳು 2000ರಲ್ಲಿ ತಮ್ಮ ಗ್ರಾಮಕ್ಕೆ ಹೋದಾಗ ದೋಣಿ ಮುಳುಗಿ ಸಾವನ್ನಪ್ಪಿದ್ದರು. ಆಗ ಅವರ ಮಗನಿಗೆ 11 ವರ್ಷವಾಗಿತ್ತು. ಮಗಳಿಗೆ 7 ವರ್ಷವಾಗಿತ್ತು. ಆ ಕಹಿ ಘಟನೆಯಿಂದ ಅವರು ಹೊರಬರಲು ಬಹಳ ಸಮಯ ಬೇಕಾಯಿತು. ಅದಾದ ನಂತರ ಅವರು ಶಿವಸೇನೆಯ ಶಾಸಕರಾದರು.

Published On - 9:11 am, Tue, 5 July 22

ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!