ಕಾಂಟ್ರಾಕ್ಟ್ ಕಿಲ್ಲರ್ ಮೂಲಕ ಹೆತ್ತ ಮಗಳನ್ನೇ ಕೊಲ್ಲಲು ಪ್ಲಾನ್; ಮಾಜಿ ಶಾಸಕನ ಬಂಧನ
ಮರ್ಯಾದಾ ಹತ್ಯೆಗಾಗಿ ಕಾಂಟ್ರಾಕ್ಟ್ ಕಿಲ್ಲರ್ಗೆ 20 ಲಕ್ಷ ರೂ.ಗಳನ್ನು ನೀಡಲಾಗಿತ್ತು. ಆದರೆ, ಕೊಲೆ ಮಾಡಲು ಹೋಗಿದ್ದ ಆರೋಪಿಗಳು ಈ ವಿಷಯವನ್ನು ಬಾಯಿಬಿಟ್ಟಿದ್ದರಿಂದ ಸುರೇಂದ್ರ ಶರ್ಮಾ ಅವರನ್ನು ಬಂಧಿಸಲಾಗಿದೆ.
ಬಿಹಾರ: ಬಿಹಾರದ ಮಾಜಿ ಶಾಸಕ ಸುರೇಂದ್ರ ಶರ್ಮಾ ತನ್ನ ಸ್ವಂತ ಮಗಳನ್ನು ಕೊಲ್ಲಲು ಕಾಂಟ್ರಾಕ್ಟ್ ಕಿಲ್ಲರ್ನನ್ನು (Contract Killer) ನೇಮಿಸಿದ್ದಕ್ಕಾಗಿ ಇದೀಗ ಜೈಲು ಸೇರಿದ್ದಾರೆ. ತನ್ನ ಮಗಳು ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಅವರು ಕೋಪಗೊಂಡಿದ್ದರು. ಇದೇ ಕಾರಣಕ್ಕೆ ಮಗಳನ್ನು ಕೊಲೆ (Murder) ಮಾಡಲು ಬಾಡಿಗೆ ಹಂತಕನನ್ನು ನೇಮಕ ಮಾಡಿದ್ದರು. ಈ ವಿಷಯ ಇದೀಗ ಬಯಲಾಗಿದ್ದು, ಅವರನ್ನು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ. ಮರ್ಯಾದಾ ಹತ್ಯೆಗಾಗಿ ಕಾಂಟ್ರಾಕ್ಟ್ ಕಿಲ್ಲರ್ಗೆ 20 ಲಕ್ಷ ರೂ.ಗಳನ್ನು ನೀಡಲಾಗಿತ್ತು. ಆದರೆ, ಕೊಲೆ ಮಾಡಲು ಹೋಗಿದ್ದ ಆರೋಪಿಗಳು ಈ ವಿಷಯವನ್ನು ಬಾಯಿಬಿಟ್ಟಿದ್ದರಿಂದ ಸುರೇಂದ್ರ ಶರ್ಮಾ ಅವರನ್ನು ಬಂಧಿಸಲಾಗಿದೆ ಎಂದು ಪಾಟ್ನಾ ನಗರ (ಪೂರ್ವ) ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.
ಜುಲೈ 1 ಮತ್ತು 2ರ ಮಧ್ಯರಾತ್ರಿ ಸುರೇಂದ್ರ ಶರ್ಮಾ ಅವರ ಮಗಳ ಮೇಲೆ ಕೊಲೆ ಯತ್ನ ನಡೆದಿತ್ತು. ಶ್ರೀ ಕೃಷ್ಣಪುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ಆ ಯುವತಿ ಅಪರಿಚಿತ ವ್ಯಕ್ತಿಗಳು ತನ್ನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ದೂರು ದಾಖಲಿಸಿದ್ದಾರೆ. ಗುಂಡು ಹಾರಿಸಿದ ಆರೋಪಿಗಳು ಬೈಕ್ನಲ್ಲಿ ವೇಗವಾಗಿ ಹೋಗಿದ್ದಾರೆ.
ಇದನ್ನೂ ಓದಿ: ಮಂಗಳಮುಖಿ ಕೊಲೆ ಪ್ರಕರಣ; 3 ವರ್ಷ ಕಳೆದರೂ ಪತ್ತೆಯಾಗದ ಮತ್ತೋರ್ವ ಮಂಗಳಮುಖಿ, ಮರ್ಯಾದಾ ಹತ್ಯೆ ನಡೆದಿರುವ ಶಂಕೆ
ಅವರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಮಾಜಿ ಶಾಸಕರ ಮಗಳನ್ನು ಕೊಲ್ಲಲು ಬಾಡಿಗೆ ಪಡೆದಿದ್ದ ಗ್ಯಾಂಗ್ ಬಳಿಯಿಂದ 3 ಪಿಸ್ತೂಲ್‌ಗಳು, ಮದ್ದುಗುಂಡುಗಳು ಮತ್ತು ನಂಬರ್ ಪ್ಲೇಟ್ ಇಲ್ಲದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಾಡಿಗೆ ಹಂತಕರ ತಂಡದ ನಾಯಕ ಅಭಿಷೇಕ್‌ನನ್ನು ಬಂಧಿಸಲಾಗಿದ್ದು, ಆತನ ಇತರ ಇಬ್ಬರು ಸಹಚರರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
Bihar Police yesterday arrested former MLA Surendra Sharma for hiring contract killers to kill his own daughter for marrying a man of another caste
A total of four people arrested. A country-made pistol, one magazine, 9 live cartridges and a bike have been recovered, police said pic.twitter.com/yXsV9NJO0T
— ANI (@ANI) July 5, 2022
ಸುರೇಂದ್ರ ಶರ್ಮಾ ಈ ಹಿಂದೆ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಇದುವರೆಗೆ ಯಾವುದೇ ಪಕ್ಷದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಅಭಿಷೇಕ್ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಸುರೇಂದ್ರ ಶರ್ಮಾ 1990ರ ದಶಕದಲ್ಲಿ ಸರನ್ ಜಿಲ್ಲೆಯಿಂದ ಶಾಸಕಾಂಗ ಸಭೆಯಲ್ಲಿ ಸೇವೆ ಸಲ್ಲಿಸಿದ್ದಾರೆ.