AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳಮುಖಿ ಕೊಲೆ ಪ್ರಕರಣ; 3 ವರ್ಷ ಕಳೆದರೂ ಪತ್ತೆಯಾಗದ ಮತ್ತೋರ್ವ ಮಂಗಳಮುಖಿ, ಮರ್ಯಾದಾ ಹತ್ಯೆ ನಡೆದಿರುವ ಶಂಕೆ

2019 ಆಗಸ್ಟ್ 8 ರಂದು ಮಂಗಳಮುಖಿ ಪ್ರವೀಣ ಬಾಪ್ರಿ ಕೊಲೆ ನಡೆದಿತ್ತು. ಅದೇ ದಿನದಿಂದ ಮತ್ತೊಬ್ಬ ಮಂಗಳಮುಖಿ ಶರಣಪ್ಪ ಕೂಡ ನಾಪತ್ತೆಯಾಗಿದ್ದಾರೆ. ಘಟನೆ ನಡೆದು ಮೂರು ವರ್ಷಗಳೇ ಕಳೆದರೂ ಇದುವರೆಗೂ ಶರಣಪ್ಪ ಸುಳಿವು ಮಾತ್ರ ಸಿಕ್ಕಿಲ್ಲ. ಮಂಗಳಮುಖಿ ಗುರುತು ಪತ್ತೆಗೆ ಹತ್ತಕ್ಕೂ ಹೆಚ್ಚು ಅಪರಿಚಿತ ಶವಗಳ ಡಿಎನ್ಎ ಪರೀಕ್ಷೆ ನಡೆಸಲಾಗಿದೆ.

ಮಂಗಳಮುಖಿ ಕೊಲೆ ಪ್ರಕರಣ; 3 ವರ್ಷ ಕಳೆದರೂ ಪತ್ತೆಯಾಗದ ಮತ್ತೋರ್ವ ಮಂಗಳಮುಖಿ, ಮರ್ಯಾದಾ ಹತ್ಯೆ ನಡೆದಿರುವ ಶಂಕೆ
ಮಂಗಳಮುಖಿ ಪ್ರವೀಣ ಬಾಪ್ರಿ ಕೊಲೆ ನಡೆದ ಸ್ಥಳ
TV9 Web
| Updated By: ಆಯೇಷಾ ಬಾನು|

Updated on: Jan 19, 2022 | 12:14 PM

Share

ಬಾಗಲಕೋಟೆ: 2019ರಲ್ಲಿ ಜಿಲ್ಲೆಯಲ್ಲಿ ನಡೆದಿದ್ದ ಮಂಗಳಮುಖಿ ಕೊಲೆ ಪ್ರಕರಣ ಹಾಗೂ ಮಂಗಳಮುಖಿ ನಾಪತ್ತೆ ಪ್ರಕರಣ ಇನ್ನೂ ಕೂಡ ನಿಗೂಢವಾಗಿದೆ. ಯಾವುದೇ ರೀತಿಯ ಸುಳಿವು ಸಿಕ್ಕಿಲ್ಲ. ಆದ್ರೆ ಮಂಗಳಮುಖಿ ಮರ್ಯಾದಾ ಹತ್ಯೆ ನಡೆದಿದೆಯಾ? ಎಂಬ ಅನುಮಾನ ಮಾತ್ರ ಸುಳಿದಾಡುತ್ತಿದೆ. ಇನ್ನು ಮತ್ತೊಂದೆಡೆ ಮೂರು ವರ್ಷದಿಂದ ನಾಪತ್ತೆಯಾಗಿರುವ ಮಂಗಳಮುಖಿ ಬದುಕಿದ್ದಾಳಾ ಅಥವಾ ಕೊಲೆಯಾಗಿದೆಯಾ? ಎಂಬ ಪ್ರಶ್ನೆ ಎದ್ದಿದೆ.

2019 ಆಗಸ್ಟ್ 8 ರಂದು ಮಂಗಳಮುಖಿ ಪ್ರವೀಣ ಬಾಪ್ರಿ ಕೊಲೆ ನಡೆದಿತ್ತು. ಅದೇ ದಿನದಿಂದ ಮತ್ತೊಬ್ಬ ಮಂಗಳಮುಖಿ ಶರಣಪ್ಪ ಕೂಡ ನಾಪತ್ತೆಯಾಗಿದ್ದಾರೆ. ಘಟನೆ ನಡೆದು ಮೂರು ವರ್ಷಗಳೇ ಕಳೆದರೂ ಇದುವರೆಗೂ ಶರಣಪ್ಪ ಸುಳಿವು ಮಾತ್ರ ಸಿಕ್ಕಿಲ್ಲ. ಮಂಗಳಮುಖಿ ಗುರುತು ಪತ್ತೆಗೆ ಹತ್ತಕ್ಕೂ ಹೆಚ್ಚು ಅಪರಿಚಿತ ಶವಗಳ ಡಿಎನ್ಎ ಪರೀಕ್ಷೆ ನಡೆಸಲಾಗಿದೆ. ಆದ್ರೆ ಇಂದಿಗೂ ಮಂಗಳಮುಖಿ ಸುಳಿವು ಪತ್ತೆಯಾಗಿಲ್ಲ. ಮಂಗಳಮುಖಿ ಶರಣಪ್ಪ ಇಂಗಳಗಿ ಸಹೋದರ ಮಂಜುನಾಥ ಇಂಗಳಗಿ, ಸ್ನೇಹಿತರಾದ ಮುತ್ತಪ್ಪ ಬಂಟನೂರು, ಮಲ್ಲೇಶಿ ಗೌಡರ ಜೊತೆ ಸೇರಿ ಮಂಗಳಮುಖಿ ಪ್ರವೀಣ ಬಾಪ್ರಿ ಕೊಲೆ ಮಾಡಿದ್ದರು. ಮಂಗಳಮುಖಿ ಶರಣಪ್ಪ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಕುಣಿಬೆಂಚಿ ಗ್ರಾಮದ ನಿವಾಸಿ. ಪ್ರವೀಣ ಬಾಪ್ರಿ ಗುಳೇದಗುಡ್ಡ ಪಟ್ಟಣದ ನಿವಾಸಿ. ಪ್ರವೀಣ ಬಾಪ್ರಿ ಮತ್ತು ಶರಣಪ್ಪ ಇಬ್ಬರೂ ಆಪ್ತ ಸ್ನೇಹಿತರು. ಹೀಗಾಗಿ ಪ್ರವೀಣ ಬಾಪ್ರಿ ಕೊಲೆ ಮಾಡಿ ನದಿಗೆ ಎಸೆದಿದ್ದು ಶರಣಪ್ಪನನ್ನೂ ಮರ್ಯಾದಾ ಹತ್ಯೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮಂಗಳಮುಖಿ ಶರಣಪ್ಪ ಸುಳಿವು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿದೆ.

ಘಟನೆ ಹಿನ್ನೆಲೆ: 2019 ಆಗಸ್ಟ್ 8 ರಂದು ಬಾಗಲಕೋಟೆ ತಾಲೂಕಿನ ಶಿರೂರು ನೀರಲಕೇರಿ ರಸ್ತೆ ಬಳಿ ಕುತ್ತಿಗೆ ಬಿಗಿದು ಮಂಗಳಮುಖಿ ಪ್ರವೀಣ ಬಾಪ್ರಿ ಕೊಲೆ ಮಾಡಲಾಗಿತ್ತು. ನಂತರ ಶವವನ್ನು ಚೀಲದಲ್ಲಿ ಹಾಕಿ ವಿಜಯಪುರ ಜಿಲ್ಲೆ ಕೊಲ್ಹಾರ ಸೇತುವೆಯಿಂದ ಕೃಷ್ಣಾ ನದಿಗೆ ಎಸೆಯಲಾಗಿತ್ತು. ಬಳಿಕ ಆಗಸ್ಟ್ 15ರಂದು ಪ್ರವೀಣ ಬಾಪ್ರಿ ಶವ ವಿಜಯಪುರ ಜಿಲ್ಲೆ ಮಜರೆಕೊಪ್ಪದ ಕೃಷ್ಣಾ ನದಿ ಹಿನ್ನೀರಲ್ಲಿ ಸಿಕ್ಕಿತ್ತು. ಈ ಸಂಬಂಧ ಪ್ರಕರಣ ವಿಜಯಪುರ ಜಿಲ್ಲೆ ನಿಡಗುಂದಿ ಠಾಣೆಯಲ್ಲಿ ದಾಖಲಾಗಿತ್ತು. ನಂತರ 2021 ರಲ್ಲಿ ಈ ಕೇಸ್ ಬಾಗಲಕೋಟೆ ಗ್ರಾಮೀಣ ಠಾಣೆಗೆ ವರ್ಗಾವಣೆಯಾಗಿದೆ.

ಇನ್ನು ಮತ್ತೊಂದು ಕಡೆ 2019 ಅಗಸ್ಟ್ 8 ರಂದು ಆದ್ರೆ ಮಂಗಳಮುಖಿಯ ಕೊಲೆಯಾದ ದಿನವೇ ಮತ್ತೊಬ್ಬ ಮಂಗಳಮುಖಿ ಶರಣಪ್ಪ ಕೂಡ ನಾಪತ್ತೆಯಾಗಿದ್ದಾರೆ. ಮಂಗಳಮುಖಿ ಶರಣಪ್ಪ ಹಾಗೂ ಪ್ರವೀಣ ಬಾಪ್ರಿ ಮಧ್ಯೆ ತೀರಾ ಸಲುಗೆ ಇತ್ತು. ಇದೇ ಹಿನ್ನೆಲೆ ಮಂಗಳಮುಖಿ ಶರಣಪ್ಪ ಸಹೋದರ ಮಂಜುನಾಥ ಸ್ನೇಹಿತರ ಜೊತೆ ಸೇರಿ ಇಬ್ಬರನ್ನೂ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಮಂಗಳಮುಖಿ ಶರಣಪ್ಪ ಹಾಗೂ ಪ್ರವೀಣ ಬಾಪ್ರಿ ಮಧ್ಯೆ ಹಣಕಾಸಿನ ವಿಷಯದಲ್ಲೂ ಗಲಾಟೆಯಾಗಿತ್ತು. ರಾಜಿ ಕೂಡ ನಡೆದಿತ್ತು. ಸದ್ಯ ಈಗ ಒಬ್ಬರ ಮೃತ ದೇಹ ಸಿಕ್ಕಿದ್ದು ಮತ್ತೊಬ್ಬರ ಸುಳಿವೇ ಸಿಗುತಿಲ್ಲ. ಪ್ರವೀಣ ಬಾಪ್ರಿ ಮತ್ತು ಶರಣಪ್ಪ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಇದನ್ನೂ ಓದಿ: ಇನ್ನು ಮುಂದೆ ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರೂ ಕೆಲಸ ಮಾಡಬಹುದು; ಕೆಎಸ್‌ಪಿಯಿಂದ ಅರ್ಜಿ ಸಲ್ಲಿಸಲು ಆಹ್ವಾನ

ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
ಶನಿ ಭಗವಾನ್, ಹನುಮಂತನ ಆರಾಧನೆಗೆ ಅತ್ಯಂತ ಶುಭಕರ ದಿನ
ಶನಿ ಭಗವಾನ್, ಹನುಮಂತನ ಆರಾಧನೆಗೆ ಅತ್ಯಂತ ಶುಭಕರ ದಿನ
ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ