RSS Meet: ರಾಜಸ್ಥಾನದಲ್ಲಿ ಇಂದಿನಿಂದ 3 ದಿನ ಆರ್‌ಎಸ್‌ಎಸ್ ಸಭೆ; ಕೋಮು ಸೌಹಾರ್ದತೆಯೇ ಮುಖ್ಯ ಅಜೆಂಡಾ
ದೇಶದಲ್ಲಿ ಈಗ ಎದುರಾಗಿರುವ ಪರಿಸ್ಥಿತಿ ಬಗ್ಗೆ ಚರ್ಚಿಸಲು ರಾಜಸ್ಥಾನದ ಜುಂಜುನುವಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹತ್ವದ ಸಭೆ ನಡೆಯಲಿದೆ. ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಪ್ರಮುಖರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಜೈಪುರ: ಚುನಾವಣಾ ಕಣದಲ್ಲಿರುವ ರಾಜಸ್ಥಾನದ ಜುಂಜುನುವಿನಲ್ಲಿ ಇಂದಿನಿಂದ 3 ದಿನ ಆರ್‌ಎಸ್‌ಎಸ್ (RSS) ಸಭೆ ನಡೆಯಲಿದೆ. ರಾಜಸ್ಥಾನ ರಾಜ್ಯದಲ್ಲಿ ನೂಪುರ ಶರ್ಮಾ ಹೇಳಿಕೆ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಕನ್ನಯ್ಯ ಲಾಲ್ (Kanhaiyalal) ಹತ್ಯೆ ನಡೆದಿದೆ. ದೇಶದಲ್ಲಿ ಈಗ ಎದುರಾಗಿರುವ ಪರಿಸ್ಥಿತಿ ಬಗ್ಗೆ ಚರ್ಚಿಸಲು ರಾಜಸ್ಥಾನದ ಜುಂಜುನುವಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹತ್ವದ ಸಭೆ ನಡೆಯಲಿದೆ. ಇಂದಿನಿಂದ ಮೂರು ದಿನಗಳ ಕಾಲ ಸಭೆ ನಡೆಯಲಿದೆ. ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಸೇರಿದಂತೆ ಪ್ರಮುಖರು ಸಭೆಯಲ್ಲಿ ಭಾಗಿಯಾಗಿ ಚಿಂತನ ಮಂಥನ ನಡೆಸಲಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್, ಸರ್ಕಾರಿವಾಹ್ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಮತ್ತು ಕೃಷ್ಣ ಗೋಪಾಲ್, ಮನಮೋಹನ್ ವೈದ್ಯ, ಸಿ.ಆರ್ ಮುಕುಂದ, ಅರುಣ್ ಕುಮಾರ್ ಮತ್ತು ರಾಮ್ ದತ್ ಸೇರಿದಂತೆ ಹಿರಿಯ ನಾಯಕರು ‘ಅಖಿಲ ಭಾರತೀಯ ಪ್ರಾಂತ ಪ್ರಚಾರಕ’ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ರಾಜಸ್ಥಾನ ರಾಜ್ಯದಲ್ಲಿ ಹಿಂದೂ ವ್ಯಕ್ತಿಯೊಬ್ಬನ ಶಿರಚ್ಛೇದದ ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ರಾಜಸ್ಥಾನದ ಜುಂಜುನುವಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇಂದಿನಿಂದ 3 ದಿನಗಳ ಸಭೆಯನ್ನು ಆಯೋಜಿಸಿದೆ.
ಕನ್ಹಯ್ಯ ಲಾಲ್ ಒಬ್ಬ ಹಿಂದೂ ಸಮುದಾಯದ ಟೈಲರ್ ಆಗಿದ್ದು, ಜೂನ್ 28ರಂದು ಉದಯಪುರದಲ್ಲಿ ಇಬ್ಬರು ದಾಳಿಕೋರರಾದ ರಿಯಾಜ್ ಅಟ್ಟಾರಿ ಮತ್ತು ಘೌಸ್ ಮೊಹಮ್ಮದ್ ಹತ್ಯೆ ಮಾಡಿದ್ದರು. ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಹಾಕಿದ್ದ ಫೇಸ್‌ಬುಕ್ ಪೋಸ್ಟ್‌ನಿಂದ ಆಕ್ರೋಶಗೊಂಡ ಕನ್ನಯ್ಯ ಲಾಲ್ ಶಿರಚ್ಛೇದ ಮಾಡಿದ್ದರು.
ಆರ್‌ಎಸ್‌ಎಸ್‌ನೊಂದಿಗೆ ಸಂಯೋಜಿತವಾಗಿರುವ ಮುಸ್ಲಿಂ ರಾಷ್ಟ್ರೀಯ ಮಂಚ್ ಆರ್‌ಎಸ್‌ಎಸ್ ನಾಯಕ ಇಂದ್ರೇಶ್ ಕುಮಾರ್ ಅವರ ಸೂಚನೆಯ ಮೇರೆಗೆ ಕನ್ಹಯ್ಯಾ ಲಾಲ್‌ಗೆ ಗೌರವ ಸಲ್ಲಿಸಲಿದೆ. ಕನ್ಹಯ್ಯಾ ಲಾಲ್ ಅವರ ಭೀಕರ ಹತ್ಯೆಯ ನಂತರ ಆರ್‌ಎಸ್‌ಎಸ್ ತನ್ನ ಗಮನವನ್ನು ಬದಲಾಯಿಸಿದೆ. ಇಂದಿನಿಂದ ನಡೆಯಲಿರುವ ಆರ್‌ಎಸ್‌ಎಸ್ ಸಭೆಯಲ್ಲಿ ಸಂಘಟನೆಯ ಪ್ರಾಂತ ಪ್ರಚಾರಕರು ಈಗ ಎದ್ದಿರುವ ಪರಿಸ್ಥಿತಿಯ ಕುರಿತು ಚರ್ಚಿಸಲಿದ್ದಾರೆ.
ಸರ ಸಂಘಚಾಲಕ್ ಮೋಹನ್ ಭಾಗವತ್, ದತ್ತಾತ್ರೇಯ ಹೊಸಬಾಳೆ ಮತ್ತು ಆರ್‌ಎಸ್‌ಎಸ್‌ನ ಎಲ್ಲಾ 45 ವಲಯಗಳ ಪ್ರಚಾರಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್. ಸಂತೋಷ್ ಮತ್ತು ಶಿವಪ್ರಕಾಶ್ ಮತ್ತು ವಿಹೆಚ್ಪಿ ನಾಯಕರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ನಾನು ನೂಪುರ್ ಶರ್ಮಾ ಬೆಂಬಲಿಗ ಅಭಿಯಾನ ಶುರು ಮಾಡುತ್ತೇವೆ, ಅದೇನಾಗುತ್ತೋ ನೋಡೋಣ: ಪ್ರಮೋದ್ ಮುತಾಲಿಕ್ ಸವಾಲು
ಮುಂದಿನ ವರ್ಷ ರಾಜಸ್ಥಾನ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಆದರೆ, ಇದು ಪ್ರತಿ ವರ್ಷ ನಡೆಯುವ ವಾಡಿಕೆ ಸಭೆ ಎಂದು ಆರ್‌ಎಸ್‌ಎಸ್ ಮುಖಂಡರು ಹೇಳಿದ್ದಾರೆ. ಆರ್ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಮುಸ್ಲಿಂ ರಾಷ್ಟ್ರೀಯ ಮಂಚ್ ವಿವಿಧ ಸ್ಥಳಗಳಲ್ಲಿ ಕನ್ಹಯ್ಯಾಲಾಲ್ ಅವರಿಗೆ ಶ್ರದ್ಧಾಂಜಲಿ ಸಭೆಗಳನ್ನು ಆಯೋಜಿಸುತ್ತಿದೆ. ದೇಶದಲ್ಲಿ ಸೌಹಾರ್ದತೆ ಕಾಪಾಡಲು ವಿವಿಧ ಮುಸ್ಲಿಂ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದೆ. ಮುಸ್ಲಿಂ ರಾಷ್ಟ್ರೀಯ ಮಂಚ್ ಕೂಡ ಮೂಲಭೂತವಾದದ ವಿರುದ್ಧ ಪ್ರಚಾರ ಮಾಡುತ್ತಿದೆ.
Published On - 12:43 pm, Thu, 7 July 22