ಕೊರೊನಾ ಸೋಂಕಿನಿಂದ ಸಿಬಿಐ ಮಾಜಿ ನಿರ್ದೇಶಕ ರಂಜಿತ್​ ಸಿನ್ಹಾ ನಿಧನ

ರಂಜಿತ್​ ಸಿನ್ಹಾ ಕೋಮುಗಲಭೆ, ಅಂತಾರಾಷ್ಟ್ರೀಯ ಗಡಿ ಸಮಸ್ಯೆಗಳು, ನಕ್ಸಲ್ ದಂಗೆ ಸೇರಿ ಹಲವು ರೀತಿಯ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಹೆಸರುಗಳಿಸಿದ್ದಾರೆ.

ಕೊರೊನಾ ಸೋಂಕಿನಿಂದ ಸಿಬಿಐ ಮಾಜಿ ನಿರ್ದೇಶಕ ರಂಜಿತ್​ ಸಿನ್ಹಾ ನಿಧನ
ರಂಜಿತ್ ಸಿನ್ಹಾ
Follow us
Lakshmi Hegde
|

Updated on:Apr 16, 2021 | 2:26 PM

ಸಿಬಿಐ ಮಾಜಿ ನಿರ್ದೇಶಕ ರಂಜಿತ್​ ಸಿನ್ಹಾ (68) ಕೊವಿಡ್​-19 ಸೋಂಕಿನಿಂದ ಇಂದು ಮುಂಜಾನೆ ದೆಹಲಿಯಲ್ಲಿ ನಿಧನರಾದರು. ರಂಜಿತ್ ಸಿನ್ಹಾ ಅವರಿಗೆ ಕೊರೊನಾ ಇರುವುದು ನಿನ್ನೆ ರಾತ್ರಿಯಷ್ಟೇ ದೃಢಪಟ್ಟಿತ್ತು. ಮೂಲತಃ ಬಿಹಾರದವರಾದ ಸಿನ್ಹಾ, 1974ನೇ ಇಸ್ವಿಯ ಐಪಿಎಸ್​ ಬ್ಯಾಚ್​​ನವರಾಗಿದ್ದಾರೆ.

ರಂಜಿತ್​ ಸಿನ್ಹಾ ತಮ್ಮ 40ವರ್ಷಗಳ ವೃತ್ತಿ ಜೀವನದಲ್ಲಿ ರಾಂಚಿ, ಮಧುಬಾನಿ ಮತ್ತು ಸಹರ್ಸಾದ ಎಸ್​​ಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಹಾಗೇ ಹಲವು ವಿವಾದಗಳಿಗೂ ಸಿಲುಕಿದ್ದರು. ಇನ್ನು ಕೋಮುಗಲಭೆ, ಅಂತಾರಾಷ್ಟ್ರೀಯ ಗಡಿ ಸಮಸ್ಯೆಗಳು, ನಕ್ಸಲ್ ದಂಗೆ ಸೇರಿ ಹಲವು ರೀತಿಯ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಹೆಸರುಗಳಿಸಿದ್ದಾರೆ. 2000ನೇ ಇಸ್ವಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರ ಪರಿಸ್ಥಿತಿಯನ್ನು ಕೂಡ ನಿರ್ವಹಣೆ ಮಾಡಿದ್ದಾರೆ. 2005ರಲ್ಲಿ ಕಾಶ್ಮೀರಿ ವ್ಯಾಲಿಯಲ್ಲಿ ಐಜಿ (ಕಾರ್ಯಾಚರಣೆ) ಆಗಿದ್ದರು.

2012ರಲ್ಲಿ ಸಿಬಿಐನ ನಿರ್ದೇಶಕರಾಗಿ ನೇಮಕರಾದರು. ಅದಕ್ಕೂ ಮೊದಲು ರೈಲ್ವೇ ರಕ್ಷಣಾ ದಳ (ಆರ್​ಪಿಎಫ್​) ಮತ್ತು ಇಂಡೋ-ಟಿಬೇಟಿಯನ್ ಪೊಲೀಸ್ (ಐಟಿಬಿಪಿ) ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು; ಮಣಿಪಾಲ್​ ಆಸ್ಪತ್ರೆಗೆ ಶಿಫ್ಟ್​

ಮಕ್ಕಳನ್ನು ತಬ್ಬಲಿ ಮಾಡಿ ಇಹಲೋಕ ತ್ಯಜಿಸಿದ ದಂಪತಿ; ಮುಗಿಲು ಮುಟ್ಟಿದ ಮಕ್ಕಳ ಆಕ್ರಂದನ

Published On - 2:25 pm, Fri, 16 April 21

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್