ಮೈಸೂರಿನಲ್ಲಿ ಇಬ್ಬರು ಯುವಕರಿಂದ ಮನೆಮನೆಗೆ ತೆರಳಿ ಸೇವೆ

ಇದನ್ನರಿತ ಮಹದೇವ ಮತ್ತು ಸಿದ್ಧರಾಜು ದಲಿತರಿಗೆ ಕ್ಷೌರ ಸೇವೆ ನೀಡಲು ಮುಂದಾದರು. ಕಳೆದ 8 ವರ್ಷಗಳಿಂದ ದಲಿತರಿಗೆ ಎಂದೇ ಕ್ಷೌರ ಮಾಡುತ್ತಿದ್ದು, ಸರ್ಕಾರ ಆರ್ಥಿಕ ಸಹಾಯ ನೀಡಿದರೆ ಸ್ವಂತ ಸಲೂನ್ ತೆರೆಯುತ್ತೇವೆ ಎಂದು ಮಹದೇವ ಹೇಳುತ್ತಾರೆ.

ಮೈಸೂರಿನಲ್ಲಿ ಇಬ್ಬರು ಯುವಕರಿಂದ ಮನೆಮನೆಗೆ ತೆರಳಿ ಸೇವೆ
ಪ್ರಾತಿನಿಧಿಕ ಚಿತ್ರ
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 19, 2021 | 9:49 PM

ಮೈಸೂರು: ದಲಿತ ಸಮುದಾಯದ ಕುಟುಂಬಗಳಿಗೆ ಕ್ಷೌರ ಸೇವೆ ಒದಗಿಸುವ ಮೂಲಕ ಮೈಸೂರಿನ ಇಬ್ಬರು ಯುವಕರು ಸಾಮಾಜಿಕ ಸಾಮರಸ್ಯ ಮೆರೆದಿದ್ದಾರೆ. ಮೈಸೂರಿನ ಕಪ್ಪಸೋಗೆ, ಕುರುಹುಂಡಿ, ಗೌಡರಹುಂಡಿ ಮತ್ತು ಮಾದನಹಳ್ಳಿಯಲ್ಲಿ ವಾಸವಿದ್ದ ದಲಿತ ಕುಟುಂಬಗಳು ಸ್ಥಳೀಯ ಕ್ಷೌರದಂಗಡಿಗಳಲ್ಲಿ ಸೇವೆ ಪಡೆಯುತ್ತಿರಲಿಲ್ಲ. ಇದನ್ನರಿತ ಕೆ. ಪಿ ಮಹಾದೇವ ಮತ್ತು ಅವರ ಸಹೋದರ ಕೆ.ಪಿ ಸಿದ್ಧರಾಜು ದಲಿತ ಕುಟುಂಬಗಳ ಸದಸ್ಯರಿಗೆ ಕ್ಷೌರ ಸೇವೆ ನೀಡುತ್ತಿದ್ದಾರೆ.

ದಲಿತ ಸಮುದಾಯದ ಜನರಿಗೆ ಕ್ಷೌರ ಮಾಡಿದರೆ ಮೇಲ್ವರ್ಗದ ಜನರು ತಮ್ಮ ಅಂಗಡಿಗೆ ಬರುವುದಿಲ್ಲ. ವ್ಯವಹಾರಕ್ಕೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ದಲಿತರು ಕ್ಷೌರದ ಅಂಗಡಿಗಳಿಗೆ ಹೋಗುತ್ತಿರಲಿಲ್ಲ. ಇದನ್ನರಿತ ಮಹದೇವ ಮತ್ತು ಸಿದ್ಧರಾಜು ದಲಿತರಿಗೆ ಕ್ಷೌರ ಸೇವೆ ನೀಡಲು ಮುಂದಾದರು. ಕಳೆದ 8 ವರ್ಷಗಳಿಂದ ದಲಿತರಿಗೆ ಎಂದೇ ಕ್ಷೌರ ಮಾಡುತ್ತಿದ್ದು, ಸರ್ಕಾರ ಆರ್ಥಿಕ ಸಹಾಯ ನೀಡಿದರೆ ಸ್ವಂತ ಸಲೂನ್ ತೆರೆಯುತ್ತೇವೆ ಎಂದು ಮಹದೇವ ಹೇಳುತ್ತಾರೆ.

‘ನಮಗೆ 30 ಗುಂಟೆ ಒಣಭೂಮಿಯಿದೆ. ಅದರಲ್ಲಿ ಅಲ್ಪಸ್ವಲ್ಪ ಕೃಷಿ ಮಾಡುವ ಹಂಬಲ ಹೊಂದಿದ್ದೇವೆ, ಇತರರ ಕೃಷಿ ಭೂಮಿಯಲ್ಲೂ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತೇವೆ. ಕೆಲಸ ಇಲ್ಲದ ದಿನಗಳಲ್ಲಿ ಎಲೆಕ್ಟ್ರಿಶಿಯನ್ ಆಗಿಯೂ ಕೆಲಸ ಮಾಡುತ್ತೇವೆ’ ಎಂದು ಮಹದೇವ್ ಹೇಳುತ್ತಾರೆ. ಕೊರೊನಾ ಪಿಡುಗು ವ್ಯಾಪಕವಾಗಿ ಆವರಿಸಿದ ದಿನಗಳಲ್ಲೂ ದಲಿತ ಸಮುದಾಯದ ಜನರಿಗೆ ಕ್ಷೌರ ಸೇವೆ ಒದಗಿಸಿದ್ದೇವೆ. ಕ್ಷೌರಕ್ಕೆ ₹40 ಮತ್ತು ಶೇವಿಂಗ್​ಗೆ ₹20ನ್ನು ಅವರು ಪಡೆಯುತ್ತಾರೆ. ಅಲ್ಲದೇ ಅಗತ್ಯ ಇರುವವರಿಗೆ ಮನೆಮನೆಗೆ ತೆರಳಿ ಸೇವೆಯನ್ನೂ ನೀಡುತ್ತೇವೆ’ ಎಂದು ಮಹದೇವ್ ವಿವರಿಸುತ್ತಾರೆ.

ಹೀಗೆ ಮೈಸೂರು ಭಾಗದ ದಲಿತ ಸಂಕಥನಗಳು ಒಂದೊಂದಾಗಿಯೇ ತೆರೆದುಕೊಳ್ಳುತ್ತದೆ. ಕೆಲವರಾದರೂ ಈ ಗೋಡೆಗಳನ್ನು ಮುರಿಯುತ್ತಿರುವುದು ಕೊಂಚ ಸಮಾಧಾನಕರ ವಿಷಯವಾಗಿದೆ. ದಲಿತರಿಗೆ ನಿರಾಕರಿಸಲಾದ ಸೇವೆಯನ್ನು ಅವಕಾಶವೆಂದೇ ತಿಳಿದು ಹೊಸ ಬಗೆಯಲ್ಲಿ ಸಾಮಾಜಿಕ ಸೌಹಾರ್ದತೆಯನ್ನು ಸೃಷ್ಟಿಸುತ್ತಿದ್ದಾರೆ. ಮೈಸೂರಿನ ಕೆ ಪಿ ಮಹಾದೇವ ಮತ್ತು ಅವರ ಸಹೋದರ ಕೆ ಪಿ ಸಿದ್ಧರಾಜು ಅವರ ಸೇವೆ ಇನ್ನಷ್ಟು ಮುನ್ನೆಲೆಗೆ ಬರಬೇಕಿದೆ.

ಇದನ್ನೂ ಓದಿ: ಒಂದೇ ಬೆಡ್​ನಲ್ಲಿ ಇಬ್ಬರಿಗೆ ಚಿಕಿತ್ಸೆ, ಆಸ್ಪತ್ರೆ ಹೊರಗೆ ಹೆಣಗಳು; ಕೊರೊನಾದಿಂದ ಪರಿಸ್ಥಿತಿ ಭೀಕರ

ಭೀಮಾ-ಕೋರೆಗಾಂವ್ ಕದನಕ್ಕೆ 203 ವರ್ಷ; ಭಾರತದ ದಲಿತ ಕಥನದಲ್ಲಿ ಈ ಯುದ್ಧಕ್ಕೆ ಏಕಿಷ್ಟು ಪ್ರಾಮುಖ್ಯ?

(Two Dalit brothers offer doorstep haircut social harmony)

Published On - 3:44 pm, Fri, 16 April 21

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್