AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೂಗಲ್ ಮ್ಯಾಪ್ಸ್, ಗೂಗಲ್ ಸರ್ಚ್​ನಲ್ಲಿ ಕೋವಿಡ್- 19 ಲಸಿಕೆ ಕೇಂದ್ರಗಳ ಬಗ್ಗೆ ಸಂಪೂರ್ಣ ಮಾಹಿತಿ

Google maps, Google search: ಭಾರತದಲ್ಲಿ ದಿನದಿನಕ್ಕೂ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಹಾಕುವ ಪ್ರಕ್ರಿಯೆಗೆ ವೇಗ ನೀಡಲಾಗಿದೆ. ಇದೀಗ ಗೂಗಲ್ ಮ್ಯಾಪ್ಸ್, ಗೂಗಲ್ ಸರ್ಚ್ ಭಾರತದಲ್ಲಿ ಲಸಿಕೆ ಕೇಂದ್ರಗಳ ಬಗ್ಗೆ ಮಾಹಿತಿ ನೀಡುತ್ತಿವೆ. ಅದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಗೂಗಲ್ ಮ್ಯಾಪ್ಸ್, ಗೂಗಲ್ ಸರ್ಚ್​ನಲ್ಲಿ ಕೋವಿಡ್- 19 ಲಸಿಕೆ ಕೇಂದ್ರಗಳ ಬಗ್ಗೆ ಸಂಪೂರ್ಣ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: Apr 16, 2021 | 1:49 PM

ಭಾರತದಲ್ಲಿ ದಿನದಿನಕ್ಕೂ ಕೊರೊನಾ ಸಂಖ್ಯೆ ಸಿಕ್ಕಾಪಟ್ಟೆ ಜಾಸ್ತಿ ಆಗುತ್ತಿದೆ. ಕೊರೊನಾ ಲಸಿಕೆ ಹಾಕುವುದನ್ನು ಹೆಚ್ಚು ಮಾಡಬೇಕು ಎಂಬುದಕ್ಕೆ ಈ ಹಿಂದೆಂದಿಗಿಂತ ಒತ್ತು ನೀಡಬೇಕಿದೆ. ಯಾರು ಗೂಗಲ್ ಸರ್ಚ್ ಅಥವಾ ಮ್ಯಾಪ್ಸ್ ಬಳಸುತ್ತಾರೋ ಅಂಥವರು ಈಗ ಭಾರತದಲ್ಲಿ ಕೋವಿಡ್-19 ಲಸಿಕೆ ಕೇಂದ್ರದ ಸ್ಥಳಗಳನ್ನು ಭಾರತದಲ್ಲಿ ಹುಡುಕಬಹುದು. “ಹೆಚ್ಚಿನ ಜನರಿಗೆ ಕೋವಿಡ್- 19 ಲಸಿಕೆ ದೊರೆಯುತ್ತಿದೆ. ಲಸಿಕೆಯನ್ನು ಏಕೆ, ಯಾವಾಗ ಮತ್ತು ಎಲ್ಲಿ ಪಡೆಯಬೇಕು ಎಂಬುದನ್ನು ಸುಲಭವಾಗಿ ತಿಳಿಯುವುದಕ್ಕೆ ನೆರವು ನೀಡುತ್ತೇವೆ,” ಎಂದು ಗೂಗಲ್ ಹೆಲ್ತ್ ಮುಖ್ಯ ಆರೋಗ್ಯಾಧಿಕಾರಿ ಕರೆನ್​ಡಿಸಲ್ವೊ ಅಧಿಕೃತ ಬ್ಲಾಗ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಲಸಿಕೆ ಎಲ್ಲಿ ಸಿಗುತ್ತದೆಯೇ ಅಲ್ಲಿ ತಲುಪುವುದಕ್ಕೆ ಜನರಿಗೆ ಕಷ್ಟ ಆಗಬಹುದು. ಅದು ಕೂಡ ಅವರು ಎಲ್ಲಿ ವಾಸಿಸುತ್ತಾರೆ, ಲಸಿಕೆ ಕೇಂದ್ರಕ್ಕೆ ಎಷ್ಟು ದೂರಕ್ಕೆ ತೆರಳಬೇಕಾಗುತ್ತದೆ, ಅಪಾಯಿಂಟ್​ಮೆಂಟ್ ಪಡೆಯುವುದಕ್ಕೆ ಅವರಿಗೆ ನಂಬಿಕಸ್ತ ಇಂಟರ್​ನೆಟ್ ಸಂಪರ್ಕ ಇದೆಯಾ ಇವೆಲ್ಲದರ ಮೇಲೆ ಅವಲಂಬಿಸುತ್ತದೆ ಎಂದು ಡಿಸಲ್ವೊ ಬ್ಲಾಗ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ. ಈಗ ಫೀಚರ್ ಅನ್ನು ಗೂಗಲ್ ಸರ್ಚ್ ಮತ್ತು ಮ್ಯಾಪ್​ಗಳಲ್ಲಿ ಜಾರಿಗೆ ತರಲಾಗಿದೆ. ಗೂಗಲ್ ಮ್ಯಾಪ್ಸ್​ನಲ್ಲಿ ಕೋವಿಡ್- 19 ಲಸಿಕೆ ಸ್ಥಳಗಳನ್ನು ಶೋಧನೆ ಮಾಡಿದರೆ, ಅವರಿಗೆ ಹತ್ತಿರದಲ್ಲಿ ಇರುವ ಎಲ್ಲ ಲಸಿಕೆ ಕೇಂದ್ರಗಳನ್ನು ನೋಡಬಹುದು. ಈ ಫೀಚರ್ ಅನ್ನು ಗೂಗಲ್ ಮ್ಯಾಪ್ಸ್​ನಲ್ಲಿ ಪರೀಕ್ಷೆ ಮಾಡಲಾಗಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.

ಗೂಗಲ್ ಸರ್ಚ್​ನಲ್ಲಿ ಬೇರೆ ರೀತಿಯ ಇಂಟರ್​ಫೇಸ್ ಇದೆ. ಕೋವಿಡ್- 19 ಲಸಿಕೆ ಪಡೆಯುವ ಬಗ್ಗೆ ಎಡಭಾಗದಲ್ಲಿ “Where to get it” ಎಂಬ ಆಯ್ಕೆ ಬರುತ್ತದೆ. ಒಂದು ಸಲ ಅದರ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಸ್ಥಳದಿಂದ ಹತ್ತಿರದ ಲಸಿಕೆ ಕೇಂದ್ರವನ್ನು ಪರಿಶೀಲನೆ ಮಾಡಬಹುದು. ಇದರ ಜತೆಗೆ ಭಾರತದಲ್ಲಿ ಈ ತನಕ ಎಷ್ಟು ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ, ಎಷ್ಟು ಡೋಸ್ ನೀಡಲಾಗಿದೆ ಮತ್ತು ಒಟ್ಟು ಜನಸಂಖ್ಯೆಯಲ್ಲಿ ಶೇಕಡಾವಾರು ಎಷ್ಟು ಮಂದಿಗೆ ಕೊರೊನಾ ಲಸಿಕೆ ಹಾಕಲಾಗಿದೆ ಎಂಬ ಮಾಹಿತಿಯನ್ನೂ ಗೂಗಲ್ ಸರ್ಚ್ ನೀಡುತ್ತದೆ.

ಕೊರೊನಾ ಬಿಕ್ಕಟ್ಟಿನ ಅವಧಿಯಲ್ಲಿ ನಾವು ಕಲಿತಿರುವುದೇನು ಅಂದರೆ, ಎಲ್ಲಿಯ ತನಕ ಕೋವಿಡ್- 19ನಿಂದ ಎಲ್ಲರೂ ಸುರಕ್ಷಿತ ಅಲ್ಲವೋ ಅಲ್ಲಿಯ ತನಕ ಯಾರೂ ಸುರಕ್ಷಿತವಲ್ಲ. ವಿಶ್ವದಾದ್ಯಂತ ಎಲ್ಲರಿಗೂ ಕೊರೊನಾ ಲಸಿಕೆ ಆಗುವುದು ಸವಾಲಿನ ಸಂಗತಿ. ಆದರೆ ಅಗತ್ಯವಾಗಿ ನಡೆಯುತ್ತಲೇ ಇದೆ. ನಮ್ಮ ಪಾಲಿನ ಕೆಲಸವನ್ನು ಮಾಡುತ್ತೇವೆ ಮತ್ತು ಎಲ್ಲಿಯ ತನಕ ಗುರಿ ಪೂರ್ಣವಾಗಿ ತಲುಪಬೇಕೋ ಅಲ್ಲಿಯ ತನಕ ಒಟ್ಟಾಗಿ ಜವಾಬ್ದಾರಿ ನಿರ್ವಹಣೆ ಮಾಡುತ್ತೇವೆ ಎಂದು ಡಿಸಲ್ವೊ ಬ್ಲಾಗ್ ಪೋಸ್ಟ್​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಗೂಗಲ್ ಮ್ಯಾಪ್ಸ್​ನಲ್ಲಿ ನಿಮ್ಮೂರ ಮಾರ್ಗವನ್ನೂ ಸೇರಿಸಬಹುದು! ಹೇಗೆ ಎಂದು ತಿಳಿಯಲು ಇಲ್ಲಿ ನೋಡಿ

ಇದನ್ನೂ ಓದಿ: Google Search ಸ್ಥಳೀಯ ಭಾಷೆಯಲ್ಲಿ ಹುಡುಕಾಟಕ್ಕೆ ಹೊಸ ಅನ್ವೇಷಣೆ ಮಾಡಿದ ಗೂಗಲ್.. ಆದ್ರೆ ಕನ್ನಡಕ್ಕಿಲ್ಲ ಆದ್ಯತೆ!

(Technology giant Google company’s Google maps and Google search will help to find Corona vaccine locations in India)

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ